Special Story: ಇಂದಿನ ಕಾಲದಲ್ಲಿ ಫೇಮಸ್ ಆಗ್ಬೇಕು ಅಂದ್ರೆ ನೀವು ಸಿನಿಮಾದವರ ಕೈ ಕಾಲು ಹಿಡಿಯುವ ಅವಶ್ಯಕತೆ ಇಲ್ಲ. ಸೋಶಿಯಲ್ ಮೀಡಿಯಾ ಅನ್ನೋದು ಟ್ಯಾಲೆಂಟ್ ಇರುವವರಿಗೆ ವರದಾನವಾಗಿದೆ.
ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದ ಕೀನ್ಯಾ ವ್ಯಕ್ತಿ ಕಿಲಿ ಪೌಲ್, ಹಿಂದಿ ಹಾಡಿಗೆ ರೀಲ್ಸ್ ಮಾಡುತ್ತ, ಭಾರತೀಯರ ಪ್ರೀತಿಗೆ ಪಾತ್ರನಾಗಿದ್ದಾನೆ. ಇನ್ನು ಇತ್ತೀಚಿನ ದಿನಗಳಲ್ಲಿ ಕಿಲಿ ಬರೀ ಬಾಲಿವುಡ್ ಅಷ್ಟೇ ಅಲ್ಲ, ಕನ್ನಡ, ತೆಲುಗು, ತಮಿಳು, ಬೆಂಗಾಲಿ, ಓರಿಸ್ಸಿ, ಮರಾಠಿ ಸೇರಿ ಹಲವರು ಭಾಷೆಯ ಹಾಡಿಗೂ ರೀಲ್ಸ್ ಮಾಡಿದ್ದಾನೆ.
ತಮ್ಮ ಫ್ಯಾನ್ಸ್ ಹೇಳುವ ಹಾಡಿಗೆ ರೀಲ್ಸ್ ಮಾಡುವ ಕಿಲಿ, ಫ್ಯಾನ್ಸ್ ಖುಷಿಯಾಗಿರಲಿ ಎಂದು ಬಯಸಿದ್ದಾರೆ. ಅಷ್ಟೇ ಅಲ್ಲದೇ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೂ ಕಿಲಿ ಪೌಲ್ ಕೆಲ ದಿನಗಳ ಹಿಂದೆ ರೀಲ್ಸ್ ಮಾಡಿದ್ದರು. ಅದನ್ನು ಸಾಕಷ್ಟು ಕನ್ನಡಿಗರು ಲೈಕ್ ಮಾಡಿದ್ರು. ಇಂದು ಕಿಲಿ ಕರಿಮಣಿ ಮಾಲೀಕ ಹಾಡನ್ನ ತಾವೇ ಹಾಡಿದ್ದಾರೆ. ಅಲ್ಲದೇ ತುಳು ಹಾಡೊಂದನ್ನು ಹಾಡಿದ್ದಾರೆ.
ಇಷ್ಟೇ ಅಲ್ಲದೇ ನಿನ್ನೆ ಡಿಬಾಸ್ ಬರ್ತ್ಡೇ ಇದ್ದು. ಅವರಿಗೂ ಕಿಲಿ ಪೌಲ್, ಡಾ.ರಾಜ್ಕುಮಾರ್ ಅವರ ನಗುತಾ ನಗುತಾ ಬಾಳು ನೀನು ವರುಷ ವರುಷ ಎನ್ನು ರೀಲ್ಸ್ ಮಾಡಿ, ವಿಶ್ ಮಾಡಿದ್ದಾರೆ. ರವಿಚಂದ್ರನ್, ಶಿವಣ್ಣ ಸಿನಿಮಾ ಹಾಡಿಗೂ ರೀಲ್ಸ್ ಮಾಡಿದ್ದಾರೆ ಕಿಲಿ ಪೌಲ್.
ಇನ್ಸ್ಟಾಗ್ರಾಮ್ನಲ್ಲಿ 7.2 ಮಿಲಿಯನ್ ಫಾಲೋವರ್ಸ್ ಹೊಂದಿರುವ ಕಿಲಿ ಪೌಲ್, ಆಗಾಗ ಭಾರತಕ್ಕೆ, ದುಬೈ ಸೇರಿ ಹಲವು ರಾಷ್ಟ್ರಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇವರಿಗೆ ಪ್ರಪಂಚದ ಹಲವೆಡೆ ಅಭಿಮಾನಿಗಳು ಇದ್ದಾರೆ. ಕಳೆದ ಸಲ ರಾಮನ ಭಜನೆಗೆ ರೀಲ್ಸ್ ಮಾಡಿದ್ದ ಕಿಲಿ, ನಾನು ಕೂಡ ರಾಮಮಂದಿರಕ್ಕೆ ಭೇಟಿ ನೀಡಲು ಕಾತುರನಾಗಿದ್ದೇನೆ. ಜೈ ಶ್ರೀರಾಮ್ ಎಂದಿದ್ದರು.
ಕಿಲಿ ಪೌಲ್ ರೀಲ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ..
ಕಿಂಗ್ ಚಾರ್ಲ್ಸ್ಗೆ ಕ್ಯಾನ್ಸರ್: ತಂದೆಯ ಆರೋಗ್ಯ ವಿಚಾರಿಸಲು ತೆರಳಿದ ಪ್ರಿನ್ಸ್ ಹ್ಯಾರಿ..