International News: ಇಂಗ್ಲೆಂಡ್ ರಾಜ 3ನೇ ಕಿಂಗ್ ಚಾರ್ಲ್ಸ್ ಗೆ ಕ್ಯಾನ್ಸರ್ ಆಗಿದ್ದು, ತಂದೆಯನ್ನು ವಿಚಾರಿಸಲು ಪ್ರಿನ್ಸ್ ಹ್ಯಾರಿ ತೆರಳಿದ್ದಾರೆ. ಪ್ರಿನ್ಸ್ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಮಾರ್ಕೆಲ್ ಮದುವೆಯ ಬಳಿಕ ಕುಟುಂಬಸ್ಥರಿಂದ ದೂರಾಗಿದ್ದರು. ಆದರೆ ಇದೀಗ ಅಪ್ಪನಿಗೆ ಆನಾರೋಗ್ಯ ಹಿನ್ನೆಲೆ, ಅಪ್ಪನನ್ನು ಭೇಟಿಯಾಗಿ, ಅವರ ಆರೋಗ್ಯ ವಿಚಾರಿಸಿದ್ದಾರೆ ಹ್ಯಾರಿ.
ಮೇಘನ್ ಹ್‌ಯಾರಿಯಷ್ಟು ಶ್ರೀಮಂತೆ ಮತ್ತು ರಾಜಮನೆತನದವಳು ಅಲ್ಲ. ಹ್ಯಾರಿ ಮತ್ತು ಮೇಘನ್‌ದು ಪ್ರೇಮ ವಿವಾಹ. ಹಾಗಾಗಿ ಹ್ಯಾರಿ ಮದುವೆಯಾದ ಮೇಲೆ ರಾಜಮನೆತನದಿಂದ ದೂರ ಉಳಿದು, ರಾಜಕುಮಾರನ ಪಟ್ಟ ಕೂಡ ತ್ಯಜಿಸಿದ್ದರು. ಇದೀಗ ಮತ್ತೆ ಹ್ಯಾರಿ ತಂದೆಯನ್ನು ಭೇಟಿಯಾಗಿದ್ದು ಕಂಡು, ಹ್ಯಾರಿ ಮಮತ್ತೆ ರಾಜಮನೆತನ ಸೇರುತ್ತಾರೆ. ಮತ್ತೆ ರಾಜರಾಗುತ್ತಾರೆಂದು ಹಲವರು ನಿರೀಕ್ಷಿಸಿದ್ದಾರೆ.
ಇನ್ನು ಹ್ಯಾರಿಗೆ ಮಾಧ್ಯಮದವರು ಈ ಬಗ್ಗೆ ಪ್ರಶ್ನಿಸಿದಾಗ, ತಂದೆ ಸ್ವತಃ ತನಗೆ ಕರೆ ಮಾಡಿ, ಆರೋಗ್ಯ ಸರಿ ಇಲ್ಲ. ನನಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ನಿನ್ನನ್ನು ಭೇಟಿಯಾಗಬೇಕು ಬಾ ಎಂದು ತಿಳಿಸಿದರು. ಅದಕ್ಕೆ ಬಂದು ಅಪ್ಪನ ಆರೋಗ್ಯ ವಿಚಾರಿಸಿದ್ದೇನೆ. ನಾನು ನನ್ನ ಕುಟುಂಬಸ್ಥರನ್ನು ಪ್ರೀತಿಸುತ್ತೇನೆ ಎಂದಿದ್ದಾರೆ. ಮತ್ತೆ ರಾಜನಾಗುವ ಬಗ್ಗೆ ಪ್ರಶ್ನಿಸಿದಾಗ, ಹ್ಯಾರಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಚಾರ್ಲ್ಸ್ ಮಾತ್ರ, ಅನಾರೋಗ್ಯ ಎನ್ನುವುದು ಕುಟುಂಬಸ್ಥರನ್ನು ಒಂದು ಮಾಡುತ್ತದೆ ಎಂದು ಹೇಳಿದ್ದಾರೆ.
ಮದ್ಯನೀತಿ ಪ್ರಕರಣ: ಕೊನೆಗೂ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ದೆಹಲಿ ಸಿಎಂ
ಉತ್ತರಪ್ರದೇಶದಲ್ಲಿ ಇನ್ನು 6 ತಿಂಗಳು ಪ್ರತಿಭಟನೆ ನಡೆಸುವಂತಿಲ್ಲ: ಸಿಎಂ ಯೋಗಿ ಆದಿತ್ಯನಾಥ್