ನಿನ್ನೆ ಬೆಂಗಳೂರಿಗೆ ಆಗಮಿಸಿ, ಸಂಜೆ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ, ಚಾಮುಂಡಿ ದೇವಿಯ ದರ್ಶನ ಮಾಡಿದರು. ನಂತರ ಇಂದು ಬೆಳಿಗ್ಗೆ ಮೈಸೂರು ಅರಮನೆ ಆವರಣದಲ್ಲಿ ಯೋಗ ಮಾಡಿ, ನಂತರ ಅರಮನೆಗೆ ಹೋಗಿ, ಮೈಸೂರು ಮಹಾರಾಜ ಯದುವೀರ್ ಒಡೆಯರ್ ಮನೆಗೆ ಆಗಮಿಸಿ, ಆತಿಥ್ಯ ಸ್ವೀಕರಿಸಿದರು. ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯಗಳಾದ, ಇಡ್ಲಿ, ದೋಸೆ, ಪೊಂಗಲ್, ಮದ್ದೂರು ಒಡೆ, ಮೈಸೂರು ಪಾಕ್ ಸೇರಿ ಇನ್ನೂ ಹಲವು ತಿಂಡಿಗಳನ್ನು ಪ್ರಧಾನಿಗಳಿಗೆ ನೀಡಿ, ಸತ್ಕರಿಸಲಾಯಿತು.
ಈ ಬಗ್ಗೆ ಮಹಾರಾಜ ಯದುವೀರ್ ಒಡೆಯರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿದ್ದು, ಪಿಎಂ ಜೊತೆ, ಸಿಎಂ ಬೊಮ್ಮಾಯಿ, ರಾಜ್ಯಪಾಲರು, ಮಹಾರಾಣಿ ಪ್ರಮೋದಾ ದೇವಿ, ರಾಣಿ ತ್ರಿಶಿಕಾ ಮತ್ತು ಯುವರಾಜ ಆದ್ಯವೀರ್ ಈ ವೇಳೆ ಉಪಸ್ಥಿತರಿದ್ದರು.
ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೈಸೂರಿಗೆ ಆಗಮಿಸಿದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಇಂದು ಮುಂಜಾನೆ ಮೈಸೂರು ಅರಮನೆಗೆ ಆಗಮಿಸಿದರು. ಸನ್ಮಾನ್ಯ ಪ್ರಧಾನ ಮಂತ್ರಿಗಳವರ ಜೊತೆಗೆ ರಾಜ್ಯದ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹಾಗು ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರು ಮೈಸೂರು ಅರಮನೆಗೆ ಆಗಮಿಸಿ ನಮ್ಮ ಕುಟುಂಬದ ಆತಿಥ್ಯವನ್ನು ಸ್ವೀಕರಿಸಿದರು ಎಂದು ಯದುವೀರ್ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
yaduveer