Bagalakote News: ಬಾಗಲಕೋಟೆ: ಕ್ಷೀರಭಾಗ್ಯದ ಹಾಲಿನ ಪೌಡರ್ ಸಾಗಾಟ ಮಾಡುವ ವೇಳೆ ಅಡುಗೆ ಸಹಾಯಕಿಯೊಬ್ಬಳು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಬಾಗಲಕೋಟೆಯ ಸರ್ಕಾರಿ ಆದರ್ಶ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ನಡೆದಿದೆ.
ಸವಿತಾ ಸಂಕ್ಯಾನವರ್ ಸಿಕ್ಕಿಬಿದ್ದ ಅಡುಗೆ ಸಹಾಯಕಿ. ಬಾಗಲಕೋಟೆಯ ನವನಗರದ 43ನೇ ಸೆಕ್ಟರ್ನಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಶಾಲೆಗೆ ಬಂದಿದ್ದ ಹಾಲಿನ ಪೌಡರ್ ಸಾಗಾಟ ಮಾಡುವಾಗ ಮಾಧ್ಯಮದವರ ಕೈಗೆ ರೆಡ್ಹ್ಯಾಂಡ್ ಆಗಿ ಸಿಗುತ್ತಿದ್ದಂತೆ ತಪ್ಪೊಪ್ಪಿಕೊಂಡಿದ್ದಾಳೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಜಿಲ್ಲಾ ಪಂಚಾಯತ್ ಸಿಇಒ ಶಶಿಧರ್ ಕುರೇರ ಅವರು ಆದರ್ಶ ವಿದ್ಯಾಲಯ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಯ ಅವ್ಯವಸ್ಥೆ ಬಗ್ಗೆ ತಿಳಿದು ಮುಖ್ಯಶಿಕ್ಷಕ ರಿಯಾಜ್ ಮಕಾಂದಾರ್ ವಿರುದ್ಧ ಗರಂ ಆದರು.
ಇದೇ ವೇಳೆ ಸವಿತಾ ಸಂಕ್ಯಾನವರ್ಳನ್ನು ಸಹಾಯಕಿ ಹುದ್ದೆಯಿಂದ ತೆಗೆಯಲು ಸಿಇಒ ಸೂಚನೆ ನೀಡಿದರು. ಶಾಲೆಯಲ್ಲಿ ಶುಚಿತ್ವ ಇಲ್ಲದಿರುವುದನ್ನು ಗಮನಿಸಿ, ಡಿ ದರ್ಜೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಡಿಡಿಪಿಐಗೆ ಶಶಿಧರ್ ಕುರೇರ ಅವರು ತಿಳಿಸಿದರು.
ಸ್ವಚ್ಚತಾ ಸಿಬ್ಬಂದಿಯ ಕಣ್ಣೀರ ಕಹಾನಿ: ಸಾಕ್ಷ್ಯಚಿತ್ರ ಸಾಕ್ಷಿಕರಿಸಿದ ಪೌರಕಾರ್ಮಿಕರ ನೋವು..!