Tuesday, April 15, 2025

Latest Posts

ಕೆ.ಎಲ್.ರಾಹುಲ್ ನೇತೃತ್ವ: ಆಗಸ್ಟ್‍ನಲ್ಲಿ ಜಿಂಬಾಬ್ವೆ ಪ್ರವಾಸ 

- Advertisement -

ಹೊಸದಿಲ್ಲಿ: ಟೀಮ್ ಇಂಡಿಯಾ ಮುಂಬರುವ ಆಗಸ್ಟ್‍ನಲ್ಲಿ   ಮೂರು ಪಂದ್ಯಗಳ ಏಕದಿನ ಸರನ ಆಡಲು ಜಿಂಬಾಬ್ವೆಗೆ ಪ್ರವಾಸ ಕೈಗೊಳ್ಳಿಲಿದೆ.

ಆರು ವರ್ಷಗಳ ನಂತರ ಭಾರತ ಕ್ರಿಕೆಟ್ ತಂಡ ಪ್ರವಾಸ ಕೈಗೊಳ್ಳುತ್ತಿದೆ. ಕೆ.ಎಲ್.ರಾಹುಲ್ ನೇತೃತ್ವದ ಭಾರತ ತಂಡಆ.18, 20 ಮತ್ತು 22ರಂದು ಹರಾರೆಯಲ್ಲಿ ಆಡಲಿದೆ.

ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50 ಓವರ್‍ಗಳ ಏಕದಿನ ವಿಶ್ವಕಪ್‍ಗೆ ಅರ್ಹತೆ ಪಡೆಯಲು 13 ತಂಡಗಳು ಪೈಪೋಟಿ ನಡೆಸುತ್ತಿವೆ. ಈ ಏಕದಿನ ಸರಣ ಇದರ ಭಾಗವಾಗಿದೆ.

ಅರ್ಹತಾ ಗುಂಪಿನಲ್ಲಿರುವ  ಜಿಂಬಾಬ್ವೆ  15 ಪಂದ್ಯಗಳಿಂದ 3ರಲ್ಲಿ ಗೆದ್ದು  12ನೇ ಸ್ಥಾನ ಪಡೆದಿದೆ. ಮಾಜಿ ನಾಯಕ ಧೋನಿ ನೇತೃತ್ವದಲ್ಲಿ  ಭಾರತ ತಂಡ ಕೊನೆಯ ಬಾರಿಗೆ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. 2016ರಲ್ಲಿ  ಭಾರತ ಆತಿಥೇಯರ ವಿರುದ್ಧ  ಏಕದಿನ ಮತ್ತು ಟಿ20 ಸರಣಿ ಆಡಿತ್ತು.

ಮೊನ್ನು ಇಂಗ್ಲೆಂಡ್ ಟಿ20 ಮತ್ತು ಏಕದಿನ ಸರಣಿ ಗೆದ್ದ ಭಾರತ ತಂಡ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.  ವಿಂಡೀಸ್ ಪ್ರವಾಸ  ಶಿಖರ್ ಧವನ್ ನಾಯಕತ್ವದಲ್ಲಿ ಆಡಲಿದೆ. ವಿಂಡೀಸ್ ವಿರುದ್ಧ ಜು.22ರಿಂದ ಆ.7ರವರೆಗೆ ನಡೆಯಲಿದೆ.

- Advertisement -

Latest Posts

Don't Miss