ಮುಂಬೈ: ತಾರಾ ಬ್ಯಾಟರ್ ಕನ್ನಡಿಗ ಕೆ.ಎಲ್. ರಾಹುಲ್ ಮುಂಬರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಅನುಭವಿ ಆಟಗಾರ ಶಿಖರ್ ಧವನ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.
ಐಪಿಎಲ್ ನಂತರ ರಾಹುಲ್ ಒಂದೇ ಒಂದು ಪಂದ್ಯ ಆಡದೇ ಹ್ಯಾಮ್ ಸ್ಟ್ರಿಂಗ್ ಸಮಸ್ಯೆಗೆ ಗುರಿಯಾದರು. ನಂತರ ಯಶಸ್ವಿಯಾಗಿ ಶಸ ಚಿಕಿತ್ಸೆ ಪೂರೈಸಿಕೊಂಡರು. ಯಶಸ್ವಿ ಶಸ ಚಿಕಿತ್ಸೆ ನಡೆಸಿದ ಹೊರತಾಗಿಯೂ ರಾಹುಲ್ ಸ್ಥಿರತೆ ಹೊಂದಿರಲಿಲ್ಲ.
ಶಿಖರ್ ಧವನ್ ಅವರನ್ನು ನಾಯಕನೆಂದು ಬಿಸಿಸಿಐ ಘೋಷಿಸಿತ್ತು. ಇದೀಗ ಬಿಸಿಸಿಐ ರಾಹುಲ್ ಅವರನ್ನು ನಾಯಕನ್ನಾಗಿ ಆಯ್ಕೆ ಮಾಡಿದೆ.
ಬಿಸಿಸಿಐ ವೈದ್ಯಕೀಯ ತಂಡ ಕೆಎಲ್ ರಾಹುಲ್ ಅವರನ್ನು ಪರೀಕ್ಷಿಸಿದ್ದು ಮುಂಬರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲಿ ಆಡಲು ಅನುಮತಿ ನೀಡಿದೆ.
ಈ ಹಿನ್ನಲೆಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಕೆ.ಎಲ್.ರಾಹುಲ್ ಅವರನ್ನು ನಾಯಕರನ್ನಾಗಿ ನೇಮಿಸಿ ಧವನ್ ಅವರನ್ನು ಉಪನಾಯಕರನ್ನಾಗಿ ನೇಮಕ ಮಾಡಿದೆ.