ಕರ್ನಾಟಕ ಟಿವಿ : ಹಲವು ದಶಕಗಳ ನಂತರ ಕೆಎಂಎಫ್ ಅಧ್ಯಕ್ಷ ಸ್ಥಾನ ಉತ್ತರಕರ್ನಾಟಕ ಪಾಲಾಗಿದೆ. ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೂತನ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದೇವೇಗೌಡರ ಪುತ್ರ ಕುಮಾರಸ್ವಾಮಿ ಸಹೋದರ ಹೆಚ್.ಡಿ ರೇವಣ್ಣ ಕೆ.ಎಂಎಫ್ ಅಧ್ಯಕ್ಷರಾಗಲು ಕಾಂಗ್ರೆಸ್ ಪರವಾದ ನಿರ್ದೇಶಕರನ್ನ ಹೈಜಾಕ್ ಮಾಡಿ ಕಳೆದ ತಿಂಗಳು ಮುಂಬೈಗೆ ಕರೆದೊಯ್ದಿದ್ರು.. ದಿಢೀರನೇ ರಾಜ್ಯ ಸರ್ಕಾರ ಚುನಾವಣೆಯನ್ನ ಮುಂದೂಡಿ ಗೌಡರ ಪುತ್ರನಿಗೆ ಶಾಕ್ ನೀಡಿತ್ತು. ಇಂದು ನಡೆದ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಗೆಲುವು ಖಚಿತ ಹಿನ್ನೆಲೆ ರೇವಣ್ಣ ನಾಮಪತ್ರ ಸಲ್ಲಿಸದೆ ಹಾಸನದಲ್ಲೇ ಉಳಿದ್ರು..
16ರಲ್ಲಿ 13 ಮತ ಬಾಲಚಂದ್ರ ಜಾರಕಿಹೊಳಿ ಪರ
ಒಟ್ಟು 14 ಹಾಲು ಒಕ್ಕೂಟದ ಅಧ್ಯಕ್ಷರು 4 ನಮನಿರ್ದೇಶಿತ ಸದಸ್ಯರು ಇರುವ ಒಕ್ಕೂಟ ಮಂಡ್ಯ ಹಾಗೂ ತುಮಕೂರು ಹೊರತು ಪಡಿಸಿ 16 ಸದಸ್ಯರಲ್ಲಿ ರೇವಣ್ಣ, ಭೀಮಾನಾಯ್ಕ್, ಬಂಡೆಪ್ಪ ಕಾಶೆಂಪೂರ್ ಸಹೋದರ ಹೊರತು ಪಡಿಸಿ 13 ಸದಸ್ಯ ಬಲ ಬಾಲಚಂದ್ರ ಜಾರಕಿಹೊಳಿಗಿತ್ತು… ರೇವಣ್ಣ ನಾಮಪತ್ರ ಸಲ್ಲಿಸದ ಹಿನ್ನಲೆ ಜಾರಕಿಹೊಳಿ ಕುಟುಂಬಕ್ಕೆ ಕೆಎಂಎಫ್ ಆಡಳಿತ ಸುಲಭವಾಗಿ ಕೈಗೆಟುಕಿದೆ.