ಇದು ಎಂಥವರಿಗೂ ಸ್ಪೂರ್ತಿ ತುಂಬಬಲ್ಲ ಕಥೆ. ಎಲ್ಲ ಮುಗಿದು ಹೊಯಿತು ಜೀವನದಲ್ಲಿ ಇನ್ನೇನು ಇಲ್ಲ ಅಂತ ಅರ್ಧ ವಯಸ್ಸಿನಲ್ಲೇ, ಜೀವನದ ಪಯಣಕ್ಕೆ ಫುಲ್ ಸ್ಟಾಪ್ ಇಡಲು ಮುಂದಾಗುವ ಅಸಹಾಯಕ ಹೃದಯಗಳಿಗೆ ಈ ಸ್ಟೋರಿ ಇನ್ಸ್ಪಿರೇಷನ್ಅಂದ್ರು ಸುಳ್ಳಲ್ಲ. ರೈಲು ನಿಲ್ದಾಣ ಒಂದರಲ್ಲಿ ಕುಳಿತು, ಭಿಕ್ಷೆ ಬೇಡುತ್ತಿದ್ದಾಕೆ ಮುಂಬೈನ ರೆಕಾರ್ಡಿಂಗ್ ಸ್ಟುಡಿಯೋ ಒಂದರಲ್ಲಿ ಹಾಡಿಗೆ ಧ್ವನಿಯಾದಾಕೆಯ ರಿಯಲ್ ಸ್ಟೋರಿ.
ಯಸ್.. ಇಷ್ಟೇಲ್ಲಾ ಕೇಳಿದ್ಮೇಲೆ ನಿಮ್ಮ ಕಣ್ಣುಗಳ ಮುಂದೆ ಒಂದು ಚಿತ್ರ ಮೂಡದೇ ಇರೋದಿಲ್ಲ. ಯಾಕಂದ್ರೆ ಸದ್ಯ ಇಂಟರ್ನೆಟ್ ಸ್ಟಾರ್ ಆಗಿ ಮಿಂಚುತ್ತಿರುವವರು ಆ ತಾಯಿ ತಾನೇ…. ಹೌದು ನಾವು ಹೇಳುವುದಕ್ಕೆ ಹೊರಟಿರುವುದು ಅದೇ ರಾನು ಮೊಂಡಲ್ ಎಂಬ ಮಹಾ ತಾಯಿಯ ಕಥೆಯನ್ನ. ಸಂಗೀತ ಅಂದ್ರೆ ಆಕೆಗೆ ಆರನೇ ವಯಸ್ಸಿನಲ್ಲೇ ವಿಪರೀತ ಹುಚ್ಚು. ಮುಂದೆ ಇಪ್ಪತ್ತನೇ ವಯಸ್ಸಿನಲ್ಲಿ ಮದುವೆ. ನಂತರ ಹೆಣ್ಣು ಮಗುವಿಗೆ ತಾಯಿಯಾದ ರಾನು ಮೊಂಡಲ್, ಸಂಗೀತದ ಮೇಲಿನ ಪ್ರೀತಿ, ಮಗಳು ಗಂಡ ಅಂತ ಮನೆಯನ್ನು ದಾಟಲಿಲ್ಲ. ಖ್ಯಾತ ಹಾಡುಗಾರರು ಹಾಡಿದ ಹಾಡುಗಳನ್ನ, ಕೇಳುತ್ತಾ ಕೇಳುತ್ತಾ, ಆ ಹಾಡುಗಳಿಗೆ ದ್ವನಿಯಾಗುತ್ತಿದ್ದ ಮೊಂಡಲ್ ಜೀವನ, ಮನೆ, ಮಗಳು, ಗಂಡ ಅಷ್ಟೇ. ಹಾಗೋ ಹೀಗೋ ಜೀವನ ಸಾಗುಸಾಗುತಿತ್ತು. ಹೀಗಿರುವಾಗ ಕುಟುಂಬಕ್ಕೆ ಆಸರೆಯಾಗಿದ್ದ ಆಕೆಯ ಪತಿ ಇಹಲೋಕ ತೆಜಿಸಿದ. ನಂತರ ಆಕೆಯ ಜೀವನದಲ್ಲಿ ಮತ್ತೊಂದು ದುರಂತಕ್ಕೆ ಕಾರಣವಾಗಿದ್ದೇ ಆಕೆಯ ಮಗಳು.
ಹೌದು ಸ್ವಂತ ಮಗಳೆ ಇವರನ್ನು ರೈಲ್ವೆ ಸ್ಟೇಷನ್ ನಲ್ಲಿ ಬಿಟ್ಟು ಹೊಗಿದ್ದು, ಈಕೆಯ ಬದುಕಿನ ದುರಂತ. ಹೀಗೆ ತನ್ನವರೆಲ್ಲಾ ತನ್ನನ್ನು ಕೈ ಬಿಟ್ಟು ದೂರವಾದಾಗ, ಈಕೆಗೆ ಆಸರೆಯಾಗಿದ್ದು ಬಾಲ್ಯದಿಂದಲೂ ಪ್ರೀತಿಸಿ ಕೊಂಡು ಬಂದಿದ್ದ ಸಂಗೀತ. ಹೌದು ತಾಯಿಯ ಯಾವ ಆಸೆ, ಮಗಳಿಗೆ ಕಿರಿಕಿರಿ ಉಂಟುಮಾಡಿತ್ತೋ ಅದೇ ಸಂಗೀತ, ಮೊಂಡಲ್ ರ ಜೀವನ ಸಾಗುವುದಕ್ಕೆ ಆಸರೆ ಆಯ್ತು. ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಅರ್ಬನ್ ರೈಲ್ವೆ ಜಂಕ್ಷನ್ ನಲ್ಲಿ ಹಾಡು ಹಾಡುತ್ತಾ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು.
ಒಂದಲ್ಲ ಎರಡಲ್ಲ ಸರಿಸುಮಾರು ಹತ್ತು ವರ್ಷಗಳ ಕಾಲ ಈಕೆಯ ಬದುಕು ಹೀಗೆ ಸಾಗಿತ್ತು. ಎಲ್ಲರ ಬದುಕು ಒಂದೇ ರೀತಿ ಸಾಗುವುದಿಲ್ಲ ನೋಡಿ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ತಿರುವು ಬಂದೇ ಬರುತ್ತೆ ಅಂತ ಹೇಳ್ತಾರಲ್ಲ ಹಾಗೆ. ಈಕೆಯ ಬದುಕಿನಲ್ಲೂ ಆ ಒಂದು ತಿರುವು ಬಂದೇ ಬಿಡ್ತು. ಮೊನ್ನೆ ಮೊನ್ನೆ ವರೆಗೂ ಹತ್ತರಲ್ಲಿ ಹನ್ನೊಂದು ಎನ್ನುವಂತೆ, ತನ್ನ ಪಾಡಿಗೆ ತಾನು ಹಾಡು ಹಾಡುತ್ತ ಭಿಕ್ಷೆ ಬೇಡುತ್ತಿದ್ದಾಕೆ, ರಾತ್ರೋರಾತ್ರಿ ಫೇಮಸ್ ಆಗಿಬಿಟ್ರು. ಅದೃಷ್ಟ ಅನ್ನೊದು ಬಂದ್ರೆ ಬದುಕು ಬಂಗಾರವಾಗಿಸುವುದಕ್ಕೆ ಒಂದು ಹುಲ್ಲು ಕಡ್ಡಿ ಸಾಕು ಅಂತಾರೆ. ಹಾಗೆ ಈಕೆಯ ಬದುಕು ಬಂಗಾರವಾಗುವುದಕ್ಕೆ ಫೇಸ್ ಬುಕ್ ಕಾರಣವಾಯ್ತು.
ಹೌದು… ಎಂದಿನಂತೆ ರೈಲ್ವೇ ಸ್ಟೇಷನ್ ನಲ್ಲಿ ಭಿಕ್ಷೆ ಬೇಡುತ್ತಿದ್ದ ಮೊಂಡಲ್, ಅಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಹಾಡಿದ್ದ “ಏಕ್ ಪ್ಯಾರ್ ಕಾ ನಗ್ಮಾ ಹೈ” ಹಾಡಿಗೆ ದನಿಯಾಗಿದ್ರು. ಅದೇ ಸಮಯದಲ್ಲಿ ರೈಲ್ವೇ ನಿಲ್ದಾಣದಲ್ಲಿದ್ದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು, ರಾನು ಅವರು ಹಾಡುತ್ತಿರುವುದನ್ನ ವಿಡಿಯೋ ಮಾಡಿ, ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ರು. ಅಲ್ಲೇ ನೋಡಿ ರಾನು ಮೊಂಡಲ್ ಎಂಬ ಭಿಕ್ಷುಕಿಯ ಬದುಕಿಗೆ ಒಂದು ತಿರುವು ಸಿಕ್ಕಿದ್ದು. ಮುಂದೆ ನಡೆದದ್ದೆಲ್ಲ ಒಂದು ಪವಾಡವೇ ಸರಿ. ರಾನು ಕಂಠಸಿರಿ ಅಂತರ್ಜಾಲ ಅನ್ನೋ ಮಾಯೇ ಮೂಲಕ ಫುಲ್ ವೈರಲ್ ಆಯಿತು. ಸಾಮಾನ್ಯ ನಾಗರಿಕರಿಂದ ಹಿಡಿದು ಸೆಲೆಬ್ರಿಟಿಗಳ ಮೊಬೈಲ್ ಗಳಲ್ಲೂ ರಾನು ಕಂಠಸಿರಿ ಮುಳುಗಿತು.
ಒಬ್ಬ ಸಾಮಾನ್ಯ ಭಿಕ್ಷುಕಿಯ ಹಿಂಪಾದ ದನಿಗೆ ಬಾಲಿವುಡ್ ಮಂದಿಯೇ ತಲೆ ದೂಗಿದ್ರು. ಇದೆಲ್ಲದರ ಪರಿಣಾಮವೇ ಆಕೆಯನ್ನ ಕೋಲ್ಕತಾ ದ ರೈಲ್ವೇ ಫ್ಲಾಟ್ ಫಾಮ್ ನಿಂದ ಮುಂಬೈನ ರೆಕಾರ್ಡಿಂಗ್ ಸ್ಟುಡಿಯೋ ವರೆಗು ಕರೆತಂತು. ರಾತ್ರೋರಾತ್ರಿ ಈಕೆಯ ದನಿ ಫೇಸ್ ಬುಕ್ ನಲ್ಲಿ ಸಂಚಲನ ಮೂಡಿಸಿದೇದೇ ತಡ, ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ ಸಿಂಗಿಂಗ್ ರಿಯಾಲಿಟಿ ಶೋ ನಲ್ಲಿ ಈಕೆಗೆ ಅವಕಾಶ ಸಿಕ್ಕಿತು. ವಿಪರ್ಯಾಸ ಅಂದ್ರೆ, ವಿಮಾನದಲ್ಲಿ ಅಥವ ರೈಲಿನಲ್ಲಿ ಆಕೆ ಮುಂಬೈ ತಲುಪುವುದಕ್ಕೆ ಆಕೆಯ ಬಳಿ ಯಾವುದೇ ಒಂದು ಗುರುತಿನ ಚೀಟಿಯೂ ಇರಲಿಲ್ಲ.
ನಂತರ ಪಶ್ಚಿಮ ಬಂಗಾಳದ ಕೃಷ್ಣ ನಗರದ ಚರ್ಚ್ ವಿಳಾಸದಲ್ಲಿ ಆಕೆಗೆ ಮತದಾನದ ಗುರುತಿನ ಚೀಟಿ ನೀಡಲಾಯಿತು. ಮಂದೆ ನಡೆದದ್ದೇಲ್ಲ ಪವಾಡವೇ ಸರಿ. ತೀರ ಇತ್ತೀಚೆಗೆ, ಅಂದ್ರೆ ಒಂದು ವಾರದ ಹಿಂದೆ ಯಾರಿಗೂ ಗೊತ್ತಿಲ್ಲದ ರಾನು ಮೊಂಡಲ್ ಎಂಬ ಸುಮಾರು 50 ವರ್ಷ ವಯಸ್ಸಿನ ಮಹಿಳೆ, ಸದ್ಯ ಇಂಟರ್ನೆಟ್ ಸ್ಟಾರ್. ಈಕೆಯ ಪ್ರತಿಭೆ ಗೆ ಜೈ ಹೋ ಎಂದ ಬಾಲಿವುಡ್ ನಟ ಮತ್ತು ಗಾಯಕ ಹಿಮೇಶ್ ರಶ್ಮಿ, ಈಕೆಗೆ ಅವಕಾಶ ನೀಡಿದ್ರು. ಪರಿಣಾಮವಾಗಿ ರಾನು ಮೊಂಡಲ್ ” ತೇರಿ ಮೇರಿ ಕಹಾನಿ ” ಎಂಬ ಗೀತೆಗೆ ದ್ವನಿಯಾದ್ರು. ಈ ವಿಷಯವನ್ನ ಸ್ವತಃ ಹಿಮೇಶ್ ರಶ್ಮಿ ತಮ್ಮ ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ರು. ಸಾಲದ್ದಕ್ಕೆ ರೆಕಾರ್ಡಿಂಗ್ ಸಮಯದಲ್ಲಿ ರಾನು ಎದುರು ನಿಂತು, ಹಿಮೇಶ್ ಮಾರ್ಗ ದರ್ಶನ ನೀಡುವ ಮೂಲಕ ಅಪಾರ ಮೆಚ್ಚುಗೆ ಗಳಿಸಿದ್ರು.
ಇನ್ನೂ ಇವರ ವಿಡಿಯೋಗಳು ಯೂಟ್ಯೂಬ್ ನಲ್ಲಿ ರಾತ್ರೋರಾತ್ರಿ ಟ್ರೆಂಡಿಂಗ್ ಹುಟ್ಟುಹಾಕಿದ್ವು. ಪರಿಣಾಮವಾಗಿ ಭಿಕ್ಷೆ ಬೇಡುತ್ತಾ ರೈಲ್ವೇ ಸ್ಟೇಷನ್ ನಲ್ಲಿ ಹಾಡು ಹೇಳುತ್ತಿದ್ದ ರಾನು ಮೊಂಡಲ್ ಈಗ ಸೆಲೆಬ್ರಿಟಿ ಆಗಿದ್ದಾರೆ. ಬಾಲಿವುಡ್ ನ ಖ್ಯಾತ ನಟರ ಚಿತ್ರಗಳಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಅಷ್ಟೇ ಅಲ್ಲದೆ ನಟ ಸಲ್ಮಾನ್ ಖಾನ್ ಈಕೆಗೆ ದುಬಾರಿ ಬೆಲೆಯ ಪ್ಲಾಟ್ ಒಂದನ್ನ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗುತ್ತಿದೆ.
ವಿಪರ್ಯಾಸ ಅಂದ್ರೆ ಅಂದು ಹುಚ್ಚಿಯಂತೆ ಯಾವಾಗಲೂ ಹಾಡು ಹಾಡುತ್ತ ಈರುತ್ತಾಳೆ ಅನ್ನೋ ಕಾರಣಕ್ಕೆ, ಹೆತ್ತ ತಾಯಿಯನ್ನೆ ರೈಲು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದ ಮಗಳು 10 ವರ್ಷಗಳ ನಂತರ ತಾಯಿಯನ್ನ ಹುಡುಕಿಕೊಂಡು ಬಂದಿದ್ದಾಳೆ. ಅದೇನೂ ತಾಯಿ ಮೇಲಿನ ಪ್ರೀತಿಯೋ ಅಥವಾ ದುಡ್ಡಿನ ಮೇಲಿನ ಪ್ರೀತಿಯೋ ನೀವೇ ನಿರ್ಧಾರ ಮಾಡಬೇಕು. ಯಸ್.. ವೀಕ್ಷಕರೆ ಅದೇನೇ ಇರಲಿ. ಪ್ರತಿಭೆ ಅನ್ನೋದು ಯಾರಪ್ಪಾನ ಮನೆ ಸೊತ್ತು ಅಲ್ಲ. ಪ್ರತಿಭೆ ಜೊತೆಗೆ ಅದೃಷ್ಟ ಅನ್ನೋದು ನಮ್ಮ ಪರವಾಗಿದ್ರೆ, ಯಾರು ಏನು ಬೇಕಾದ್ರು ಸಾಧಿಸಬಹುದು ಅನ್ನೋದಕ್ಕೆ ರಾನು ಮೊಂಡಲ್ ಜೀವಂತ ಉದಾಹರಣೆ ಅಲ್ವ…