ಕೋಲಾರ : ಬಿಜೆಪಿ ಟಿಕೇಟ್ ಕೈ ತಪ್ಪಿದ್ದಕ್ಕೆ ಕೋಲಾರ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಓಂಶಕ್ತಿ ಚಲಪತಿ ಬೆಂಬಲಿಗರ ಸಭೆ ಕರೆದಿದ್ದಾರೆ. ಮಾಜಿ ಶಾಸಕ ವರ್ತೂರು ಪ್ರಕಾಶ್ ಗೆ ಟಿಕೇಟ್ ಸಿಕ್ಕಿದಕ್ಕೆ ಓಂಶಕ್ತಿಗೆ ಬೇಸರವಾಗಿದ್ದು. ಈ ವಿಷಯವಾಗಿ ಚರ್ಚಿಸಲು , ತಾಲೂಕಿನ ಹೊನ್ನೇನಹಳ್ಳಿ ಬಳಿ ಇರುವ ತೋಟದ ಮನೆ ಬಳಿ ಮಹತ್ವದ ಸಭೆ ಕರೆಯಲಾಗಿದೆ. ಸಭೆಯಲ್ಲಿ ಪ್ರಮುಖ ಬಿಜೆಪಿ ಮುಖಂಡರು ಭಾಗಿಯಾಗಿದ್ದಾರೆ.
ಓಂ ಶಕ್ತಿ ಚಲಪತಿ ಕಳೆದ 20 ವರ್ಷಗಳಿಂದ ಬಿಜೆಪಿ ಪಕ್ಷವನ್ನ ಕಟ್ಟಿ ಬೆಳೆಸಿದ್ದರು. ಆದ್ರೆ ವರ್ತೂರು ಪ್ರಕಾಶ್ ಇತ್ತೀಚೆಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇಷ್ಟು ವರ್ಷ ತಾವು ಪಕ್ಷ ಸಂಘಟಿಸಿದ್ದರು ಕೂಡ, ತಮಗೆ ಟಿಕೇಟ್ ಕೊಡದೇ, ವರ್ತೂರು ಪ್ರಕಾಶ್‌ಗೆ ಟಿಕೇಟ್ ಕೊಟ್ಟಿದ್ದಕ್ಕೆ, ಓಶಕ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಚಲಪತಿ, ಪಕ್ಷ ಸಿದ್ದಾಂತದ ಅಡಿಯಲ್ಲಿ ಟಿಕೇಟ್ ಸಿಗುವ ಭರಸವೆಯಲ್ಲಿದ್ದರು. ಆದರೆ ಪಕ್ಷ ವಲಸೆ ಬಂದವರಿಗೆ ಟಿಕೇಟ್ ನೀಡಿದೆ. ಹೀಗಾಗಿ ತನ್ನ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ, ಮುಂದಿನ ನಿರ್ಧಾರ ಕೈಗೊಳ್ಳಲು ಚಲಪತಿ ನಿರ್ಧರಿಸಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಡುವುದಿಲ್ಲ ಎಂದಿರುವ ಚಲಪತಿ, ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ನಮ್ಮನ್ನು ನಡೆಸಿಕೊಳ್ಳಬೇಕು ಎಂದಿದ್ದಾರೆ.
ಅಲ್ಲದೇ, ನಾನು ಹಳೇ ಕುರುಬ, ವರ್ತೂರು ಪ್ರಕಾಶ್ ಹೊಸ ಕುರುಬರು . ನನಗೆ ಹಾರ, ತುರಾಯಿ, ಕಿರೀಟ ಬೇಡ. ಹೈಕಮಾಂಡ್ ಸಹ ನನಗೆ ಕೆಲಸ ಮಾಡುವಂತೆ ಹೇಳಿದೆ. ಸ್ಥಾನಮಾನ ಅಂದರೆ ಗೌರವ ಕೊಡಬೇಕು. ಒಬ್ಬ ವ್ಯಕ್ತಿ ಪರವಾಗಿ ಮಾತನಾಡುವುದನ್ನು ಸಂಸದರು ಬಿಡಬೇಕು . ಪಕ್ಷ ನಮ್ಮನ್ನು ಬೆಳೆಸಿರುವುದಕ್ಕೆ ನಾವು ಗೌರವ ಕೊಡ್ತಿದ್ದೇವೆ. ನನ್ನ ಜಾಗಕ್ಕೆ ಬೇರೆಯವರು ಬಂದಿರುವ ಹಾಗೆ ಅವರ ಜಾಗಕ್ಕೂ ಬೇರೆಯವರು ಬರಲ್ವಾ ? ಕಾರ್ಯಕರ್ತರಿಗೆ ಧಕ್ಕೆ ಬಂದ್ರೆ ಸಂಸದರಾಗಲಿ, ವರ್ತೂರು ಪ್ರಕಾಶ್ ಆಗಲಿ ಅವರ ವಿರುದ್ಧ ಕೆಲಸ ಮಾಡ್ತೇವೆ ಎಂದು ಚಲಪತಿ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರು, ಉತ್ತರ ಕನ್ನಡ, ತುಮಕೂರು, ಚಿತ್ರದುರ್ಗ ಸೇರಿ ವಿವಿಧ ಭಾಗಗಳ ಅಸಂಖ್ಯಾತ ನಾಯಕರು ಜೆಡಿಎಸ್‌ಗೆ ಸೇರ್ಪಡೆ
‘ಸುಪ್ರೀಂ ಕೋರ್ಟ್ ರಾಜ್ಯ ಬಿಜೆಪಿ ಸರ್ಕಾರಕ್ಕೆ ನೀಡಿರುವ ತಪರಾಕಿ ನಿರೀಕ್ಷಿತವಾಗಿತ್ತು’
‘ನನ್ನ ವಿರುದ್ಧ ರಾಜಕಾರಣ ಮಾಡುವವರು ಇನ್ನೂ ಎದ್ದೇ ಇಲ್ಲಾ. ನನ್ನ ರಾಜಕೀಯ ವಿರೋಧಿ ತಯಾರೇ ಆಗಿಲ್ಲಾ’