ಕೋಲಾರ: ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕೊತ್ತೂರು ಮಂಜುನಾಥ್ ಮಾತನಾಡಿದ್ದು, ನನ್ನ ವಾದ ಇಂದಿಗೂ ಇಷ್ಟೇ ಸಿದ್ದರಾಮಯ್ಯ ಅವರೆ ಕೋಲಾರಕ್ಕೆ ಬರಬೇಕು ಅನ್ನೋದು ಎಂದಿದ್ದಾರೆ.
ಅಲ್ಲದೇ, ಈಗಾಗಲೇ ಟಿವಿಗಳಲ್ಲಿ ಹಾಗೂ ಲೀಸ್ಟ್ ನಲ್ಲಿ ಬಂದಿದೆ. ನಾನು ಇಂದಿಗೂ ಹೇಳುವೆ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಅಭ್ಯರ್ಥಿ ಯಾಗಬೇಕು. ಪಾರ್ಟಿ ಹಾಗೂ ಹೈ ಕಮಾಂಡ್ ಹೇಳದೆ, ಕೇಳದೆ ಪಟ್ಟಿ ಬಿಡುಗಡೆ ಮಾಡಿದೆ. ನನ್ನ ಮುಳಬಾಗಲು ಕ್ಷೇತ್ರಕ್ಕೂ ಇನ್ನೂ ಅಭ್ಯರ್ಥಿ ಮಾಡಿಲ್ಲ. ಈಗಲೂ ನನ್ನ ಒತ್ತಾಯ ಸಿದ್ದರಾಮಯ್ಯ ಅವರೇ ಬರಬೇಕು ಎಂದು ಹೇಳಿದ್ದಾರೆ.
ನನ್ನ ಆಯ್ಕೆ ಬಗ್ಗೆ ನನಗೆ ಮಾಹಿತಿ ಇಲ್ಲ, ಆದ್ರೆ ಹೈ ಕಮಾಂಡ್ ನನ್ನ ಗಮನಕ್ಕೆ ತಂದಿಲ್ಲ. ಜಿಲ್ಲೆಯ ಎಲ್ಲಾ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಮಾಡಬೇಕಿತ್ತು. ಹೈ ಕಮಾಂಡ್ ಕೇಳಿಕೊಳ್ಳುವುದು ಇಷ್ಟೆ ಅವರನ್ನೆ ಅಭ್ಯರ್ಥಿ ಮಾಡಿ. ಒಂದು ವೇಳೆ ಹೈ ಕಮಾಂಡ್ ನೀನೆ ಹೋಗಿ ಪ್ರಚಾರ ಮಾಡು ಅಂದ್ರೆ. ಜಿಲ್ಲೆಯ ಎಲ್ಲಾ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಇದೆ ಹಾಗಾಗಿ ಇಲ್ಲಿ ಗೆಲ್ಲುತ್ತೇವೆ ಎಂದು ಮಂಜುನಾಥ್ ಹೇಳಿದ್ದಾರೆ.
ನಜೀರ್ ಅಹ್ಮದ್ ಅವರ ಬಳಿ ಮಾತನಾಡಬೇಕಿತ್ತು. ಮುಳಬಾಗಿಲು ಕ್ಷೇತ್ರಕ್ಕೆ ತಮ್ಮನ ಹೆಂಡತಿ ಹೆಸರನ್ನ ನಾನು ಹೇಳಿದ್ದೇನೆ. ಕಾಂಗ್ರೇಸ್ ಪಕ್ಚ ಒಳ್ಳೆಯ ಅಭ್ಯರ್ಥಿ ಯನ್ನ ಬಿಟ್ಟು ಕೊಡಲ್ಲ ಅನ್ನೋ ನಂಬಿಕೆ ಬಂದಿದೆ. ಆದ್ರೂ ಸಿದ್ದರಾಮಯ್ಯ ಅವರ ಕೋಲಾರಕ್ಕೆ ಬರಬೇಕು ಅನ್ನೋದು ನನ್ನ ಅಭಿಪ್ರಾಯ. ಎಲ್ಲರನ್ನ ಕರೆದು ವಿಶ್ವಾಸಕ್ಕೆ ಪಡೆದು ಸ್ಪರ್ಧೆಗೆ ಸೂಚಿಸಿದ್ರೆ ನಾನು ಒಪ್ಪುತ್ತೇನೆ. ನನ್ನ ಬಳಿ ಯಾರೂ ಸಹ ಡಿಸ್ಕಸ್ ಮಾಡಿಲ್ಲ, ಆದ್ರೂ ಘೋಷಣೆ ಮಾಡಿದೆ. ನಾನು ಸಹ ತಯಾರಿಯಲ್ಲಿದ್ದೇನೆ, ಆದ್ರೂ ನನಗೂ ಗೊಂದಲ ಇದೆ. ಕೋಲಾರದ ಸ್ಥಳೀಯ ಹೈ ಕಮಾಂಡ್ ಹೇಳಿದ್ರೆ ನಾನು ಸ್ಪರ್ಧೆ ಮಾಡುತ್ತೇನೆ. ಇಲ್ಲಿನ ರಮೇಶ್ ಕುಮಾರ್, ಶ್ರೀನಿವಾಸಗೌಡ, ಅನಿಲ್ ಕುಮಾರ್ ಒಪ್ಪಿಕೊಳ್ಳಬೇಕು ಎಂದು ಮಂಜುನಾಥ್ ಹೇಳಿದ್ದಾರೆ.
ಸಿದ್ದರಾಮಯ್ಯಗೆ ಟಿಕೇಟ್ ಸಿಗದ ಕಾರಣ, ಕಾಂಗ್ರೆಸ್ ಕಚೇರಿಯಲ್ಲಿ ಗಲಾಟೆ, ಉದಯ್ ತಲೆಗೆ ಗಾಯ..
ಸಿದ್ದರಾಮಯ್ಯಗೆ ಟಿಕೇಟ್ ಸಿಗದ ಕಾರಣ, ಕಾಂಗ್ರೆಸ್ ಕಚೇರಿಯಲ್ಲಿ ಗಲಾಟೆ, ಉದಯ್ ತಲೆಗೆ ಗಾಯ..
ಸಿದ್ದರಾಮಯ್ಯಗೆ ಟಿಕೇಟ್ ಸಿಗದ ಕಾರಣ, ಕಾಂಗ್ರೆಸ್ ಕಚೇರಿಯಲ್ಲಿ ಗಲಾಟೆ, ಉದಯ್ ತಲೆಗೆ ಗಾಯ..