Wednesday, August 6, 2025

Latest Posts

ಕಾಂಗ್ರೆಸ್ ಸೇರುವ ಬಗ್ಗೆ ಸ್ಪಷ್ಟನೆ ನೀಡಿದ ಕೋಲಾರ ಜೆಡಿಎಸ್ ಶಾಸಕರು

- Advertisement -

Kolar News: ಕೋಲಾರ: ಕೋಲಾರದ ಜೆಡಿಎಸ್ ನ ಇಬ್ಬರು ಶಾಸಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಶಾಸಕರು , ನಮ್ಮ ನಮ್ಮ ಕ್ಷೇತ್ರದ ಕೆಲಸಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದು ನಿಜ, ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರ್ಪಡೆ ಕುರಿತು ಎಲ್ಲೂ ನಾವು ಚರ್ಚೆ ಮಾಡಿಲ್ಲ ಎಂದು ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹಾಗೂ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

ಕೋಲಾರದ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಕ್ಷೇತ್ರದ ಕೆಲಸಗಳ ಬಗ್ಗೆ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಂದಿಸುತ್ತಿದ್ದು, ನಾವು ಜೆಡಿಎಸ್‌ನಲ್ಲಿ ನೆಮ್ಮದಿಯಾಗಿದ್ದೇವೆ. ದೇವರಾಣೆ ಪಕ್ಷ ಬಿಡೋದಿಲ್ಲ. ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ಅಭಿವೃದ್ಧಿ ವಿಚಾರವಾಗಿ ನಾವು ಸಿಎಂ ಭೇಟಿ ಮಾಡಿದ್ದು ನಿಜ. ನಮಗೆ ಜೆಡಿಎಸ್ ಬಿಡುವ ಕರ್ಮ ಬಂದಿಲ್ಲ. ಕಾಂಗ್ರೆಸ್ ಶಾಸಕರ ಹೇಳಿಕೆಗಳಿಗೆ ನಾನು ಸ್ವಾಗತ ಮಾಡುತ್ತೇವಾದರೂ ಜೆಡಿಎಸ್ ತೊರೆಯುವ ಅನಿವಾರ್ಯತೆ ನಮಗಿಲ್ಲ ಎಂದರು. ಜನರು 5 ವರ್ಷಕ್ಕೆ ಆಯ್ಕೆ ಮಾಡಿದ್ದು ನಮಗೂ ರಮೇಶ್ ಕುಮಾರ್‌ಗೂ ಅಷ್ಟೊಂದು ವಿಶ್ವಾಸವಿಲ್ಲ. ನಮ್ಮ ಮನೆ ಬಿಟ್ಟು ಕಾಂಗ್ರೆಸ್ ಸೇರುವ ಅನಿವಾರ್ಯತೆ ಇಲ್ಲ ಎಂದು ಜಿ.ಕೆ.ವೆಂಕಟಶಿವಾರೆಡ್ಡಿ ಪ್ರತಿಕ್ರಿಯಿಸಿದರು.

ಜೆಡಿಎಸ್ ಪಕ್ಷ ಬಿಡುವ ಕುರಿತು ಬಹಿರಂಗವಾಗಿ ನಾನು ಹೇಳಿಕೆ ನೀಡಿಲ್ಲ, ಸಿಎಂರನ್ನು ಅನುದಾನ ಕೇಳೋಕೆ ಭೇಟಿ ಮಾಡೋದು ತಪ್ಪಾ ? ತಪ್ಪು ಅನ್ನುವುದಾದರೆ ಸಿದ್ದರಾಮಯ್ಯ ಅವರು ಹೇಳಲಿ. ಜೆಡಿಎಸ್ “ಬಿ” ಫಾರಂ ನೀಡಿ ನನ್ನ ಗೆಲ್ಲಿಸಿದೆ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರೋದು ಸತ್ಯಕ್ಕೆ ದೂರವಾದ ವಿಚಾರ ಎಂದು ಮುಳಬಾಗಿಲಿನ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಸ್ಪಷ್ಪಪಡಿಸಿದರು.

ಜಿಲ್ಲೆಯ ಎಲ್ಲಾ ಶಾಸಕರು ಕಾಂಗ್ರೆಸ್ ಸೇರಿ ಎಂದು ಆಹ್ವಾನ ನೀಡಿದ್ದಾರೆ, ನಾವೆಲ್ಲ ಮದುವೆ ಆಗಿರುವ ಸಂಸಾರಸ್ಥರಾಗಿದ್ದು ತೇಜೋವಧೆ ಮಾಡೋದು ತಪ್ಪು. ರಮೇಶ್ ಕುಮಾರ್ ಸೋತು ತೋಟದಲ್ಲಿ ಕುಳಿತು ಈ ಸ್ಕೆಚ್ ಹಾಕಿದ್ದಾರೆ. ಜನರಿಗೆ ತಪ್ಪು ಸಂದೇಶ ಹೊರಡಿಸೋದು ತಪ್ಪು. ಜೆಡಿಎಸ್‌ನಿಂದ ಎಂಪಿ ಸ್ಪರ್ಧೆಗೆ ಆಫರ್ ಇದ್ದರೂ ನಾನಿನ್ನೂ ಫೈನಲ್ ಮಾಡಿಲ್ಲ. ಕಾನೂನು ಚೌಕಟ್ಟಲ್ಲಿ ನನ್ನ ಬಗ್ಗೆ ಹೇಳಿಕೆ ನೀಡಬೇಕು ಎಂದರು. ಕಾಂಗ್ರೆಸ್ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಉಸ್ತುವಾರಿ ಸಚಿವ ಸುರೇಶ್ ನನಗೆ ಆಹ್ವಾನ ನೀಡಿದ್ದಾರೆ. ನಾನು ಪ್ರತಿ ಬಾರಿ ಸಿಎಂ ಭೇಟಿ ಮಾಡಿದಾಗಲೂ ಕುಮಾರಣ್ಣಗೆ ಹೇಳಿ ಹೋಗಿದ್ದೇನೆ. ನಾವು ಕಾಂಗ್ರೆಸ್ ಸೇರುತ್ತೇವೆ ಎಂದು ಹೇಳೋದು ಅವರಿಗೆ ಶೋಭೆ ತರೋದಿಲ್ಲ. ಮತದಾರರಿಗೆ ಗೊಂದಲ ಸೃಷ್ಟಿ ಮಾಡೋದಕ್ಕೆ ಈ ಹೇಳಿಕೆ ನೀಡಿದ್ದಾರೆ. 95 ಸಾವಿರ ಜನ ಮತ ಹಾಕಿ ಜನ ಆಯ್ಕೆ ಮಾಡಿದ್ದಾರೆ .

ಜೆಡಿಎಸ್‌ನ 19 ಶಾಸಕರು ನೆಮ್ಮದಿಯಾಗಿ ಇದ್ದೇವೆ, ಸಿಎಂ ಹಾಗೂ ಡಿಕೆಶಿ ಸಹ ಸೇರ್ಪಡೆ ಬಗ್ಗೆ ನನಗೆ ಆಹ್ವಾನ ನೀಡಿದ್ದಾರೆ. ಮೂರ್ನಾಲ್ಕು ತಿಂಗಳ ಹಿಂದೆ ದೆಹಲಿಗೆ ಬರಲು ಆಹ್ವಾನ ನೀಡಿದ್ದರು. ಜನ 30 ಸಾವಿರ ಮತಗಳಿಂದ ಗೆಲ್ಲಿಸಿದ್ದು ಹೇಗೆ ಬೇರೆ ಪಕ್ಷಕ್ಕೆ ಹೋಗಲು ಸಾಧ್ಯ? ನಾನು ಮೋದಿ ಬಗ್ಗೆ ಭಾಷಣ ಮಾಡಿದ್ರೆ ಸಾಕು ನನ್ನ ಫೇಸ್ಬುಕ್ ಹ್ಯಾಕ್ ಆಗುತ್ತದೆ. ನನ್ನ ಫೇಸ್ಬುಕ್ ಐಡಿಯಲ್ಲಿ ಪಾಕಿಸ್ತಾನ ಚಿತ್ರ ಬರುತ್ತೆ, ತನಿಖೆ ಮಾಡಿದರೆ ಪಾಕಿಸ್ತಾನ ಐಪಿ ಅಡ್ರಸ್ ತೋರಿಸುತ್ತೆ. ನಾನು ನೆಮ್ಮದಿಯಾಗಿ ಜೆಡಿಎಸ್‌ನಲ್ಲಿ ಇದ್ದೇನೆ ಎಂದರು. ನಾನು ಪಕ್ಷ ಬಿಡುವ ತೀರ್ಮಾನ ಮಾಡಿಲ್ಲ. ಕಷ್ಟ ಸುಖ ಏನೇ ಇದ್ದರೂ ನಾನು ಜೆಡಿಎಸ್‌ನಲ್ಲೇ ಇರುತ್ತೇನೆ. ಕೊತ್ತೂರು ಮಂಜುನಾಥ್ ಹೇಳಿಕೆ ಹಿಂದೆ ಯಾರು ರೈಟರ್ ಇದ್ದಾರೆ ಅಂತ ಗೊತ್ತಾಗಬೇಕಿದೆ ಎಂದು ಸಮೃದ್ಧಿ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

ಸಂಸದರ ಜೊತೆ ಪಾರ್ಲಿಮೆಂಟ್ ಕ್ಯಾಂಟೀನ್‌ನಲ್ಲಿ ಊಟ ಸವಿದ ಪ್ರಧಾನಿ ಮೋದಿ

Pakistan Election Result: ಲಾಹೋರ್‌ನಲ್ಲಿ ನವಾಜ್ ಷರೀಫ್‌ಗೆ 55ಸಾವಿರ ಮತಗಳ ಅಂತರದಿಂದ ಗೆಲುವು

ರಾಜ್ಯ ಸಭೆಯಲ್ಲಿ ಕ್ಷಮೆ ಕೇಳಿದ ನಟಿ, ಸಂಸದೆ ಜಯಾ ಬಚ್ಚನ್.. ಯಾಕೆ..?

- Advertisement -

Latest Posts

Don't Miss