ಕೋಲಾರ: ಚಿನ್ನದ ನಾಡು ಕೋಲಾರಕ್ಕೆ ಇನ್ನು ಕೆಲವೇ ನಿಮಿಷಗಳಲ್ಲಿ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಬೆಂಗಳೂರಿನ ರಾಜಭವನದಿಂದ ಕೋಲಾರದ ಸಮಾವೇಶಕ್ಕೆ ಮೋದಿ ಆಗಮಿಸಲಿದ್ದು, ಕೋಲಾರ ತಾಲೂಕಿನ ಕೆಂದಟ್ಟಿ ಬಳಿಯ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಮೋದಿ ಜೊತೆಗೆ ಮಾಜಿ ಸಿಎಂ ಸದಾನಂದ ಗೌಡ, ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಸಂಸದ ಎಸ್.ಮುನಿಸ್ವಾಮಿ ವೇದಿಕೆಯಲ್ಲಿ ಭಾಗಿಯಾಗಲಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 13 ಜನ ಅಭ್ಯರ್ಥಿಗಳು ವೇದಿಕೆಯಲ್ಲಿ ಇವರಿಗೆ ಸಾಥ್ ನೀಡಲಿದ್ದಾರೆ.
ಮೋದಿ ಸ್ವಾಗತಕ್‌ಕೆ ಭರ್ಜರಿ ಸಿದ್ಧತೆ ನಡೆದಿದ್ದು, ಸಂಸದ ಮುನಿಸ್ವಾಮಿ ಬುದ್ದನ ಪ್ರತಿಮೆಯನ್ನ ನೆನಪಿನ ಕಾಣಿಕೆಯಾಗಿ ಪ್ರಧಾನಿ ಮೋದಿಯವರಿಗೆ ನೀಡಲಿದ್ದಾರೆ. ಈ ಬುದ್ದನ ಪ್ರತಿಮೆ, ಸುಮಾರು 3.5. ಅಡಿ ಎತ್ತರದ 30 ಕೆಜಿ ಇದೆ.
‘ಅಂದಿನ ಕಾಲದಲ್ಲೇ ಕಾಂಗ್ರೆಸ್ಸಿಗರು ಬಾಬಾ ಸಾಹೇಬರಿಗೆ ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದಾರೆ’
‘ಸ್ಟ್ರ್ಯಾಟಜಿ ಏನಿಲ್ಲ, ನಮ್ಮದೆಲ್ಲ ಸ್ಟ್ರೇಟ್ ಫಾರ್ವರ್ಡ್, ನಮ್ಮದೇನಿದ್ರೂ ಅಭಿವೃದ್ಧಿಯ ಮಂತ್ರ’