Koppala News: ಸಚಿವ ಶಿವರಾಜ್ ತಂಗಡಗಿ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮಕ್ಕೆ ಭೇಟಿ ನೀಡಿದ್ದು, ಈ ವೇಳೆ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕ“ಂಡ ಘಟನೆ ನಡೆದಿದೆ.
ಕಾರಟಗಿ ತಾಲೂಕಿನ ಮೈಲಾಪುರ ಬಳಿ ಇರುವ ಕಾಲುವೆ ಕಳೆದ ಐದಾರು ತಿಂಗಳ ಹಿಂದೆ ಕುಸಿದಿರುವ ಕಾಲುವೆ ಪರಿಶೀಲನೆ ಮಾಡಲು ತೆರಳಿದ ಶಿವರಾಜ್ ತಂಗಡಗಿ ತಡೆದು ರೈತರು ತರಾಟೆಗೆ ತೆಗೆದುಕೊಂಡ ಘಟನೆ ಮೈಲಾಪುರ ಬಳಿ ನಡೆದಿದೆ.
ಕಾಲುವೆ ಕುಸಿದು ಐದಾರು ತಿಂಗಳಾದರೂ ಇಷ್ಟು ದಿನ ಏನು ಮಾಡುತ್ತಿದ್ದೀರಿ ಎಂದು ಸಚಿವ ಶಿವರಾಜ್ ತಂಗಡಿಯನ್ನು ರೈತರು ಪ್ರಶ್ನಿಸಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಯಾರನ್ನೂ ಕಾಲುವೆ ಬಳಿ ಬಿಡಬೇಡಿ ಎಂದು ಸಚಿವರು ಪೋಲೀಸರಿಗೆ ಸೂಚನೆ ನೀಡಿದ್ದಾರೆ.




