Koppala News: ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ ಅಕ್ರಮ ಮದ್ಯ ಸೇವನೆ..!

Yalaburga News: ಯಲಬುರ್ಗಾ ತಾಲ್ಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ ಅಕ್ರಮ ಮದ್ಯ ಸೇವನೆ ನಡೆಯುತ್ತಿದ್ದು. ಶಾಲೆಗೆ ಬರುವ ಮಕ್ಕಳು ಹಾಗೂ ಶಿಕ್ಷಕರರು ಮದ್ಯದ ಬಾಟಲ್ಗಳನ್ನು ತೆಗೆಯಬೇಕಿದೆ.

ಯಲಬುರ್ಗಾ ; ಸಮಿಪದ ಲಿಂಗನಬಂಡಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆಯು ತ್ತಿದ್ದು, ಶಾಲೆಗೆ ಬರುವ ಮಕ್ಕಳು, ಮದ್ಯದ ಬಾಟಲ್‌ಗಳನ್ನು ತೆಗೆಯಬೇಕಿದೆ. ಮಂಗಳವಾರ ಶಾಲೆಗೆ ಭೇಟಿ ನೀಡಿದ ಗ್ರಾಮದ ಮುಖಂಡರು ಸೇರಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಸಂಪೂರ್ಣ ಮದ್ಯ ಮಾರಾಟ ಮಾಡುವವರ ವಿರುದ್ದ ಗಂಭೀರ ಆರೋಪ ಮಾಡಿದರು.

ಲಿಂಗನಬಂಡಿ ಗ್ರಾಮದಲ್ಲಿ 30000 ಜನಸಂಖ್ಯೆ ಇದೆ. ವಿವಿಧ ಕಡೆಗಳಲ್ಲಿ ಮದ್ಯವನ್ನು ಮಾರುತ್ತಿದ್ದು.. ಜೋರು ನಡೆಯುತ್ತಿದೆ. ಮದ್ಯದ ಬಾಟಲಗಳು ಶಾಲಾ ರೂಮ್ ನಲ್ಲಿ ಕುಡುಕರು ಎಸೆದಿದ್ದಾರೆ , ಶಾಲೆಯಿಂದ ಮದ್ಯ ಮಾರಲಾಗುತ್ತಿದೆ. ಇದು ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬುದು ಪಾಲಕರ ಆತಂಕವಾಗಿದೆ.

ನಿರಾಸಕ್ತಿ: ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳನ್ನು ಮುಚ್ಚಿಸುವಂತೆ ಗ್ರಾಮದ ಹಿರಿಯರು ಹಾಗೂ ಎಸ್ ಡಿ ಎಂಸಿ ಸದಸ್ಯರು ಹಾಗೂ ಅಧ್ಯಕ್ಷರು ಹಾಗೂ , ಸಾರ್ವಜನಿಕರು, ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಯಲಬುರ್ಗಾ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಗುವುದು . ಬಳಿಕ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ, , ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಎರಡು ವರುಷ ಕಳೆದರು ಕಪೌಂಡ ನಿರ್ಮಾಣ ಮಾಡದ ಅಬಿವೃಧಿ ಅಧಿಕಾರಿಗಳು

ಶಾಲಾ ಕಪೌಂಡು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದವರು ತರ ತೆಗೆದು ಹಾಗೆ ಬಿಟ್ಟಿದ್ದಾರೆ. ಇದಕ್ಕೆ ಪಂಚಾಯತ್ ನಿಂದ ಅನುದಾನದೊಳಗೆ ಕಾಮಗಾರಿ ಮಾಡಲಾಗುವುದು ಎಂದು ಹೇಳಿ ಎರಡು ವರುಷ ಕಳೆದರು ಇನ್ನೂ ಕಂಪೌಂಡ್ ನಿರ್ಮಾಣ ಆಗಿಲ್ಲಾ ಶಾಲೆಯಲ್ಲಿ ಅನೖತಿಕ ಚಟುವಟಿಕೆಗಳು ಹಾಗೂ ಕುಡುಕಾರ ಹಾವಳಿ ಹಾಗೂ ಪ್ರೇಮಿಗಳ ಕಾಟ ಸಾಕಾಗಿ ಹೋಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕುಶ ಬೇವಿನಗಿಡದ ಶಂಭುಲಿಂಗ ಹಿರೇಮಠ ಎಸ್ಡಿಎಂಸಿ ಅಧ್ಯಕ್ಷರು ಮಳೆಯಪ್ಪ ಕಮ್ಮಾರ್ ಎಸ್ ಡಿ ಎಂ ಸಿ ಅಧ್ಯಕ್ಷರು ಅಧ್ಯಕ್ಷರು ಹನುಮಪ್ಪ ಗುರುಕಾರ್ ಕುಡ್ಲಪ್ಪ ಕುಂಬಾರ್ ಲಕ್ಷ್ಮಣ ಗುತ್ತೂರ್ ಸಣ್ಣ ಹನುಮಂತ ದೊಡ್ಡಮನಿ ಮಳೆಯಪ್ಪ ಕಳ್ಳಿಮರದ ಶರಣಪ್ಪ ತಲ್ಲೂರ್ ರಮೇಶ್ ಮಡಿವಾಳರ ಸೋಮನಗೌಡ ಮಾಲಿ ಪಾಟೀಲ್ ಈ ಸಂದರ್ಭದಲ್ಲಿ ಗ್ರಾಮದ ಗುರುಹಿರಿಯರ ಯುವಕರು ಎಲ್ಲರೂ ಸೇರಿದ್ದರು.

About The Author