Koppala News: ಸಾಲದ ಒತ್ತಡಕ್ಕೆ ಚಿನ್ನದ ವ್ಯಾಪಾರಿಯ ಒಂದೇ ಕುಟುಂಬದ ಮೂವರು ಸಾವು

Koppala News: ಗಂಗಾವತಿ : ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಚಿನ್ನದ ವ್ಯಾಪಾರಿ ಸಾಲದ ಒತ್ತಡ ಮತ್ತು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಒಂದೇ ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದ್ದಿದೆ.

ಘಟನೆಯಲ್ಲಿ ನಗರದಲ್ಲಿ ಹಲವು ದಶಕಗಳಿಂದ ಕಾಮಾಕ್ಷಿ ಚಿನ್ನದ ಅಂಗಡಿ ನಡೆಸುತ್ತಿದ್ದ ಪ್ರಕಾಶ ರಾಯ್ಕರ್ (54)ಅವರ ಪತ್ನಿ ಪ್ರಭಾ (45) ಹಾಗೂ ಇಂಜಿನಿಯರ ವಿದ್ಯಾಭ್ಯಾಸ ಮಾಡುತ್ತಿರುವ ಮಗ ಶಶಾಂಕ್(25) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ನಗರದ ಕಾಮಾಕ್ಷಿ ಚಿನ್ನದ ಅಂಗಡಿಯ ಮಾಲಿಕ ಪ್ರಕಾಶ್ ರಾಯ್ಕರ್ ಖಾಸಗಿ ವ್ಯಕ್ತಿ ಮತ್ತು ವಿವಿಧ ಬ್ಯಾಂಕುಗಳಲ್ಲಿ ಕೋಟ್ಯಾಂತರ ರೂಪಾಯಿ ಸಾಲ ಮಾಡಿ ಸಾಲ ತೀರಿಸಲಾಗದೆ ಒಂದೇ ಕುಟುಂಬದ ಮೂವರು ನೇಣಿಗೆ ಶರಣಾದ ಘಟನೆ ಗಂಗಾವತಿ ನಗರದ ಪ್ರಶಾಂತ್ ನಗರದಲ್ಲಿ ನಡೆದಿದೆ.

ಘಟನಾ ಸ್ಥಳಕ್ಕೆ ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (sp) ರಾಮ್ ಎಲ್ ಅರಸಿದ್ದಿ,ಡಿವೈಎಸ್ಪಿ ಜೆ ಎನ್ ನ್ಯಾಮನಗೌಡ, ಪಿಎಸ್ಐ ಪ್ರಕಾಶ್ ಯಾತನೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಬಳಿಕವೇ ನಿಖರ ಮಾಹಿತಿ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ

About The Author