Koppala News:
ಪೊಲೀಸರು ಜೂಜು ಅಡ್ಡೆಗೆ ದಾಳಿ ಮಾಡಿ ಇದೀಗ ವಿಭಿನ್ನ ಸುದ್ದಿಯೊಂದನ್ನು ನೀಡಿದ್ದಾರೆ. ಕೊಪ್ಪಳದ ಕಾರಟಗಿ ತಾಲೂಕಿನ ಪನ್ನಾಪುರದಲ್ಲಿ ಪೊಲೀಸರು ಜೂಜುಕೋರರ ಬದಲು ಕೋಳಿಗಳನ್ನು ಅರೆಸ್ಟ್ ಮಾಡಿದ್ದಾರೆ. ಪನ್ನಾಪುರ ಬಳಿಯ ಬಸವಣ್ಣ ಕ್ಯಾಂಪ್‍ನಲ್ಲಿ ಸಂಕ್ರಾತಿ ನಿಮಿತ್ತ ಕೋಳಿ ಕಾಳಗ , ಜೂಜಾಟ ನಡೆಯುತ್ತಿತ್ತು. ಈ ವೇಳೆ ದಾಳಿ ಮಾಡಿರುವ ಪೊಲೀಸರ ಕೈಗೆ ಸಿಗದೆ ಗ್ಯಾಂಬ್ಲರ್ ಗಳು ಪರಾರಿಯಾಗಿದ್ದಾರೆ . ಬದಲಾಗಿ ಹುಂಜಗಳು ಸಿಕ್ಕಿದ್ದು, ಜೊತೆಗೆ ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.ದಾಳಿ ವೇಳೆ ಪಣಕ್ಕಿಟ್ಟಿದ್ದ ಹುಂಜಗಳನ್ನು ವಶಪಡಿಸಿಕೊಂಡು ಪೊಲೀಸರು ಸೆಲ್‌ನಲ್ಲಿ ಇಟ್ಟಿದ್ದಾರೆ. ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇ-ಶ್ರಮ್ ಹಾಗೂ ಪಿಎಂ-ಎಸ್ ವೈಎಂ ಯೋಜನೆಗೆ ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಅವರು ಚಾಲನೆ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ಜಿಲ್ಲಾ ಯುವಶಕ್ತಿ ಘಟಕದ ಅಧ್ಯಕ್ಷರ ನೇಮಕ