- Advertisement -
ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳೋ ಕಸರತ್ತು ನಡೆಸಿ ಬಹುತೇಕ ಯಶಸ್ವಿಯಾಗಿದ್ದ ಪಕ್ಷೇತರ ಶಾಸಕ ಆರ್.ಶಂಕರ್ ಗೆ ಕಾಂಗ್ರೆಸ್ ಕಟ್ಟಿಹಾಕೋ ಯತ್ನ ನಡೆಸುತ್ತಿದೆ.
ಸಚಿವ ಸ್ಥಾನಾಕಾಂಕ್ಷಿಯಾಗಿರೋ ಪಕ್ಷೇತರ ಶಾಸಕ ಆರ್. ಶಂಕರ್ ಇವತ್ತು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ರು. ಈ ವೇಳೆ , ಕ್ಯಾಬಿನೆಟ್ ನಲ್ಲಿ ಸ್ಥಾನ ಬೇಕಾದ್ರೆ ಮೊದಲು ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಳ್ಳಬೇಕು ಅಂತ ಬಾಣ ಬಿಟ್ಟಿದೆ. ಒಂದು ವೇಳೆ ಶಂಕರ್ ಮತ್ತೆ ಬಂಡಾಯವೆದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಅನ್ನೋದು ಕಾಂಗ್ರೆಸ್ ಲೆಕ್ಕಾಚಾರ. ಹೀಗಾಗಿ ಶಾಸಕ ಶಂಕರ್ ಗೆ ಪ್ರಾಥಮಿಕ ಸದಸ್ಯತ್ವ ಪಡೆಯಲೇ ಬೇಕು ಅಂತ ಕಾಂಗ್ರೆಸ್ ತಾಕೀತು ಮಾಡಿದೆ.
ಸರ್ಕಾರಿ ನೌಕರರಿಗೆ ಈ ಹಬ್ಬಗಳಿಗೆಲ್ಲಾ ಇನ್ನುಮುಂದೆ ರಜೆ ಇಲ್ಲಾ..!! ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -