ಹಾಸನ : ಹಾಸನದ ಅರಸೀಕೆರೆಯಲ್ಲಿ ಕಾಂಗ್ರೆಸ್ ಸಮಾವೇಶ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ನಂದಿನಿ ಹಾಲಿಗೆ ಬಿಜೆಪಿ ಸರ್ಕಾರ ಮೋಸ ಮಾಡುತ್ತಿದೆ ಎಂಬ ಬಗ್ಗೆ ಮಾತನಾಡಿದ ಡಿಕೆಶಿ, ಕರ್ನಾಟಕ ರಾಜ್ಯದ ರೈತರ ಬದುಕಿನ ಪ್ರಶ್ನೆ ಇದು. ಸುಮಾರು 70 ಲಕ್ಷ ರೈತರು ಹಾಲು ಉತ್ಪಾದನೆ ಮಾಡಿ ನಂದಿನಿಗೆ ಹಾಕುತ್ತಿದ್ದೇವೆ. ರೈತರು ಕಟ್ಟಿದಂತಹ ನಂದಿನಿಗೆ ಬರಿ 27, 28 ರೂಪಾಯಿ ದುಡ್ಡು ಕೊಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಐದು ರೂಪಾಯಿ ಹೆಚ್ಚು ಕೊಡ್ತಿತ್ತು ಎಂದು ಹೇಳಿದ್ದಾರೆ.
ಅಲ್ಲದೇ, ಗುಜರಾತ್‌ನ ಅಮೂಲ್ ರೈತರದ್ದು, ನಮ್ಮದೇನು ತಕರಾರೇನಿಲ್ಲ. ಆದರೆ ನಮ್ಮನ್ನು ಹಿಂದೆ ತಡೆದು ಅವರನ್ನು ಮುಂದಕ್ಕೆ ಮಾಡಿ ಸರ್ಕಾರ ಪ್ರೋತ್ಸಾಹ ಮಾಡುವ ಕೆಲಸ ಮಾಡ್ತಿದಿಯಲ್ಲಾ ಅದು ಸರಿಯಲ್ಲ. ಈ ನಂದಿನಿ ನಮ್ಮವಳು, ನಮ್ಮ ಹಾಲು ನಮ್ಮ ಬದುಕು, ನಮ್ಮ ರೈತರು. ನಮ್ಮ ರೈತರು ಸಗಣಿ, ಬೂಸಾ, ಹುಲ್ಲು ಹಾಕಿದ್ದಾರೆ, ಎಲ್ಲಾ ಬೆಲೆಗಳು ಜಾಸ್ತಿಯಾಗಿವೆ. ಆದರೆ ರೈತರಿಗೆ ಯಾವ ತರಹದ ಸಹಾಯ ಆಗಿಲ್ಲ. ರೈತರಿಗೆ ಹಾಲು ಉತ್ಪಾದನೆ ಮಾಡಲು ಸರ್ಕಾರ ಸಹಾಯ ಮಾಡಿಲ್ಲ. ಈ ಮಧ್ಯೆ ನಮ್ಮ ಹಾಲನ್ನು ನಾವು ಮಾರಲು ಆಗ್ತಿಲ್ಲ, ಅಂತಹ ಪರಿಸ್ಥಿತಿ ಇದೆ ಎಂದಿದ್ದಾರೆ.
ಅಲ್ಲದೇ, ನಾವೇ ಪ್ರೋತ್ಸಾಹ ಕೊಟ್ಟು ಹಾಲು ಉತ್ಪಾದನೆ ಮಾಡಲು ಹೊರಟಿದ್ದೇವೆ. ನಮ್ಮ ಹಾಲು, ಹಾಲಿನ ಉತ್ಪನ್ನಗಳು ಪೇಡ, ಬಿಸ್ಕೆಟ್, ಚಾಕ್‌ಲೇಟ್ ತೆಗೆದುಕೊಂಡಿದ್ದೇನೆ. ನಮ್ಮ ರೈತರನ್ನು ಉಳಿಸಿಕೊಳ್ಳಬೇಕು. ಇದಕ್ಕೆ ಯಾರು ಪ್ರಚಾರಕರು, ಡಾ.ರಾಜ್‌ಕುಮಾರ್. ಡಾ.ರಾಜ್‌ಕುಮಾರ್ ಅವರೇ ಈ ನಂದಿನಿ ಹಾಲಿಗೆ ಅಂಬಾಸಿಡರ್. ಆದಾದ ಮೇಲೆ ಪುನೀತ್ ರಾಜ್‍ಕುಮಾರ್ ಅವರು ಅಂಬಾಸಿಡರ್. ಸರ್ಕಾರ ರಾಜ್‌ಕುಮಾರ್, ಪುನೀತ್ ರಾಜ್‍ಕುಮಾರ್ ಅವರನ್ನ ಅಂಬಾಸಿಡರ್ ಮಾಡಿದ್ದಾರೆ. ಕೋಟ ಶ್ರೀನಿವಾಸ್ ಪೂಜಾರಿ, ನಾವು ಅದನ್ನು ತಡೆಯಲು ಆಗಲ್ಲ ಅಂದಿದ್ದಾರೆ ಎಂದು ಡಿಕೆಶಿ ಹೇಳಿದರು.
ರಾಜ್‌ಕುಮಾರ್, ಪುನೀತ್ ರಾಜ್‍ಕುಮಾರ್ ರಾಜ್ಯಕ್ಕೆ ಮಾಡಿದ ಸೇವೆ ಏನು..?ಹಾಲು ಉತ್ಪಾದನೆ ಮಾಡುತ್ತಿರುವ ರೈತರು, ಹೆಣ್ಣುಮಕ್ಕಳು ಬದುಕಬೇಕು ಅಂತ ದೊಡ್ಡ ನಟರು ರಾಯಭಾರಿ ಆಗಿ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳೇ ನೀವು ಅವರ ಬಗ್ಗೆ ಇಷ್ಟು ಗೌರವದ ಮಾತುಗಳನ್ನು ಆಡಿದ್ದೀರಿ. ರಾಜ್‌ಕುಮಾರ್, ಪುನೀತ್ ರಾಜ್‍ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದೀರಿ. ಪುನೀತ್ ರಾಜ್‍ಕುಮಾರ್‌ಗೆ ಮುತ್ತು ಕೊಟ್ರಿ ಇದು ಸುಳ್ಳು, ನಾಟಕನಾ..? ಇನ್ನೊಂದು ತಿಂಗಳು ಇರ್ತಿರಾ.. ಕ್ಲೋಸ್.. ಯಾಕ್ರಿ ನಮ್ಮ ರೈತರಿಗೆ ಅವಮಾನ ಮಾಡ್ತಿದ್ದೀರಿ..? ಎಂದು ಡಿಕೆಶಿ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ನಾನು ಪ್ರತಿಭಟನೆ ಮಾಡ್ತಿಲ್ಲ, ನಾನು ಬೆಳಿಗ್ಗೆ ಬೆಳಿಗ್ಗೆ ಹಾಲು, ಬಿಸ್ಕೆಟ್, ಮೈಸೂರು ಪಾಕ್, ಚಾಕ್‌ಲೇಟ್ ತಗೊಂಡಿದ್ದಿನಿ. ರಾಜ್‌ಕುಮಾರ್, ಪುನೀತ್ ರಾಜ್‍ಕುಮಾರ್ ತರಹ ನಮ್ಮ ಮಕ್ಕಳು, ನಮ್ಮ ಹಾಲು ಕುಡಿಬೇಕು ಅಂತ ನಮ್ಮ ಜನರಿಗೆ ಹೇಳಿದ್ದೀನಿ. ನಾನು ಯಾರ ಬಗ್ಗೆನೂ ಪ್ರತಿಭಟನೆ ಮಾಡ್ತಿಲ್ಲ. ನಾನು ಬೆಳಿಗ್ಗೆ ಬೆಳಿಗ್ಗೆನೇ ಹಾಲು ಕುಡಿ ಬೇಕಿತ್ತು ಕುಡ್ದಿದಿನಿ, ಬಿಸ್ಕೆಟ್ ತಿನ್ನಬೇಕು ತಿಂದಿದ್ದೀನಿ. ನಮ್ಮದಲ್ಲವಾ ಇದು ಉಳಿಸಿಕೊಳ್ಳಬೇಕು ಅಂತ ಬಂದಿದ್ದೀನಿ. ರೇಷ್ಮೆ ಎಲ್ಲಾ ನಿಯಂತ್ರಣ ಮಾಡ್ತಿಲ್ವಾ, ಹೊರಗಡೆಯಿಂದ ಬರುವ ವಸ್ತುಗಳನ್ನು ತಡಿತಿಲ್ವಾ..? ತೀರಾ ನಿಲ್ಸಿ ಅಂತ ಹೇಳ್ತಿಲ್ಲಾ, ಮುಕ್ತ ಮಾರುಕಟ್ಟೆ ಸರಿ. ನಮ್ಮ ರೈತರನ್ನು ಉಳಸಿಕೊಳ್ಳಬೇಕು ಎಂದು ಡಿಕೆಶಿ ಹೇಳಿದರು.
ಅಮೂಲ್ ಇರಲಿ. ಬೇರೆ ಬೇರೆ ಕಡೆ ಇದೆ. ಮೊದಲು ನಿಮ್ಮ ಮನೆಯ ರೈತರನ್ನು ಉಳಿಸಿಕೊಳ್ಳಿ. ಲಾಸ್ ಆದರೂ ಕೂಡ ರೈತರು ನಂದಿನಿಗೆ ಹಾಲು ಹಾಕ್ತಿದ್ದಾರೆ, ನೀವೇ ಪ್ರೋತ್ಸಾಹ ಕೊಟ್ಟಿದ್ದೀರಲ್ಲಾ. ನಮ್ಮ ಕನಕಪುರಕ್ಕೆ ಬಂದು ನೋಡಿ. ರೇವಣ್ಣ ಅವರು ಇಲ್ಲಿ ಅಧ್ಯಕ್ಷರಾಗಿದ್ದಾರೆ, ಅಲ್ಲಿ ಬಾಲಚಂದ್ರ ಜಾರಕಿಹೋಳಿ ಅಧ್ಯಕ್ಷರಾಗಿದ್ದಾರೆ. ಅಮೂಲ್‌ಗಿಂತ ದೊಡ್ಡದು ನಾವು ಕನಕಪುರದಲ್ಲಿ ಮಾಡಿದ್ದೀವಿ. ರಾಜ್ಯದ, ರೈತರ ಆಸ್ತಿ ನಂದಿನಿ. ಇದನ್ನು ಉಳಿಸಬೇಕು, ಬೆಳೆಸಬೇಕು ಎಲ್ಲರೂ ಕೂಡ ಸಹಕಾರ ಕೊಡಿ. ರಾಜ್‌ಕುಮಾರ್, ಪುನೀತ್ ರಾಜ್‍ಕುಮಾರ್ ಆಚಾರ, ವಿಚಾರಗಳನ್ನು ಪ್ರಚಾರಗಳನ್ನು ಮಾಡೋಣ. ಕಾಂಗ್ರೆಸ್ ಮೂರನೇ ಪಟ್ಟಿ ಬಗ್ಗೆ ಆಮೇಲೆ ಮಾತಾಡ್ತಿನಿ ಎಂದು ಡಿಕೆಶಿ ಹೇಳಿದ್ದಾರೆ.
‘ಹಾಸನ ನೋಡಿದ್ರೆ ಸಿನಿಮಾ ನೋಡಿದ ಹಾಗಾಗುತ್ತೆ’: JDS ಟಿಕೇಟ್ ಗೊಂದಲದ ಬಗ್ಗೆ ಸುರೇಶ್ ವ್ಯಂಗ್ಯ..
‘ಜೆಡಿಎಸ್‌ನಲ್ಲಿ ದೇವೇಗೌಡರು, ಕುಟುಂಬದವರು ಹೇಳಿದ್ದನ್ನ ಕೇಳಿಕೊಂಡು ಬಿದ್ದಿರಬೇಕು’
ನೂರಕ್ಕೆ ನೂರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರತ್ತೆ: ಭವಿಷ್ಯ ನುಡಿದ ಸಿದ್ದರಾಮಯ್ಯ..