KAS ಪರೀಕ್ಷೆ ಬರೆಯೋ ಕನಸು ಕಾಣ್ತಿರೋ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಒಂದು ಬಿಗ್ ನ್ಯೂಸ್ ಸಿಕ್ಕಿದೆ! ಹೌದು, ಬಹುದಿನಗಳ ಬೇಡಿಕೆಯಂತೆ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಗರಿಷ್ಠ ವಯೋಮಿತಿಯಲ್ಲಿ ಬರೋಬ್ಬರಿ 5 ವರ್ಷಗಳ ಕಾಲ ಸಡಿಲಿಕೆ ಮಾಡಿ ಕೆಪಿಎಸ್ಸಿ ಅಧಿಕೃತ ಆದೇಶ ಹೊರಡಿಸಿದೆ.
ಕೆಪಿಎಸ್ಸಿ ಈಗಾಗಲೇ 2026-27ನೇ ಸಾಲಿನ ಒಟ್ಟು 319 ‘KAS’ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಉಳಿಕೆ ಮೂಲ ವೃಂದದ 297 ಹಾಗೂ ಕಲ್ಯಾಣ ಕರ್ನಾಟಕದ 22 ಹುದ್ದೆಗಳು ಸಹ ಸೇರಿವೆ.
ಈಗ ಸರ್ಕಾರದ ಸೂಚನೆಯಂತೆ, ನೇಮಕಾತಿ ವಯೋಮಿತಿಯಲ್ಲಿ 5 ವರ್ಷಗಳ ಹೆಚ್ಚುವರಿ ಸಡಿಲಿಕೆ ನೀಡಿ ಪರಿಷ್ಕೃತ ಪಟ್ಟಿಯನ್ನು ಕೆಪಿಎಸ್ಸಿ ಕಾರ್ಯದರ್ಶಿ ಜ್ಯೋತಿ ಕೆ. ಅವರು ಬಿಡುಗಡೆ ಮಾಡಿದ್ದಾರೆ. ಹಾಗಾದ್ರೆ ಯಾವ ವರ್ಗದವರಿಗೆ ಎಷ್ಟೆಷ್ಟು ವಯೋಮಿತಿ ಸಿಕ್ಕಿದೆ ಅನ್ನೋದನ್ನ ನೋಡುವುದಾದರೆ:
ಸಾಮಾನ್ಯ ಅರ್ಹತೆ ಅಂದರೆ GM ಅಭ್ಯರ್ಥಿಗಳಿಗೆ ಇದ್ದ ಹಳೆ ಗರಿಷ್ಠ ವಯೋಮಿತಿ 35 ವರ್ಷ, ಈಗ ಅದು 40 ವರ್ಷಗಳಿಗೆ ಏರಿಕೆಯಾಗಿದೆ. ಪ್ರವರ್ಗ 2ಎ, 2ಬಿ, 3ಎ ಹಾಗೂ 3ಬಿ ಅಥ್ವಾ OBC ಅಭ್ಯರ್ಥಿಗಳಿಗೆ ಇದ್ದ 38 ವರ್ಷದ ಮಿತಿ ಈಗ 43 ವರ್ಷಕ್ಕೆ ವಿಸ್ತರಣೆಯಾಗಿದೆ. ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಂದ್ರೆ SC/ST/Cat-1 ಅಭ್ಯರ್ಥಿಗಳಿಗೆ ಇದ್ದ 40 ವರ್ಷದ ಗರಿಷ್ಠ ಮಿತಿ ಈಗ ಬರೋಬ್ಬರಿ 45 ವರ್ಷಗಳಿಗೆ ಸಡಿಲಿಕೆಯಾಗಿದೆ.
ಕೊರೊನಾ ಮತ್ತು ವಿವಿಧ ಕಾರಣಗಳಿಂದ ವಯೋಮಿತಿ ಮೀರಿ ಹೋಗಿ, ಪರೀಕ್ಷೆ ಬರೆಯಲು ಅವಕಾಶ ಕಳೆದುಕೊಳ್ಳುತ್ತಿದ್ದ ಸಾವಿರಾರು ಆಕಾಂಕ್ಷಿಗಳಿಗೆ ಸರ್ಕಾರದ ಈ ತೀರ್ಮಾನ ದೊಡ್ಡ ಮಟ್ಟದ ಆಸರೆಯಾಗಿದೆ ಅಂತ ಹೇಳಬಹುದು.
ಒಟ್ಟಿನಲ್ಲಿ ವಯೋಮಿತಿಯ ಸಡಿಲಿಕೆಯಿಂದಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಕೆಎಎಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ಸಿಕ್ಕಂತಾಗಿದೆ. ಕಷ್ಟಪಟ್ಟು ಓದುತ್ತಿರುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ ಅಂತಾನೆ ಹೇಳಬಹುದು. ಹಾಗಾಗಿ, ಸಿಕ್ಕಿರೋ ಈ ಅವಕಾಶವನ್ನು ಎಲ್ಲರೂ ಸರಿಯಾಗಿ ಬಳಕೆ ಮಾಡಿಕೊಳ್ಳಿ ಹಾಗೆ ಅದರ ಜೊತೆಗೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ಕಾಮೆಂಟ್ ಮಾಡಿ..




