ರಾಜ್ಯದ ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ದೊಡ್ಡ ಗಿಫ್ಟ್ ಸಿಕ್ಕಿದೆ! ಹೌದು, ಬಹುದಿನಗಳಿಂದ ಕಾಯುತ್ತಿದ್ದ ಸಾರಿಗೆ ನೌಕರರ ಬಾಕಿ ವೇತನ ಬಿಡುಗಡೆಗೆ ರಾಜ್ಯ ಸರ್ಕಾರ ಅಂತಿಮವಾಗಿ ಹಣ ಬಿಡುಗಡೆ ಮಾಡಿದೆ. ಸಾರಿಗೆ ಸಚಿವ ‘ಬೈರತಿ ಸುರೇಶ್’ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು, ಆ ಕಂಪ್ಲೀಟ್ ಡೀಟೇಲ್ಸ್ ಏನು ಅಂತ ಈ ವರದಿಯಲ್ಲಿ ನೋಡೋಣ!
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದ ನಡುವೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ಸಿಹಿಸುದ್ದಿ ಸಿಕ್ಕಿದೆ. ನೌಕರರ ಬಾಕಿ ವೇತನಕ್ಕಾಗಿ ರಾಜ್ಯ ಸರ್ಕಾರ ಬರೋಬ್ಬರಿ 170 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಅಂತ ಹೇಳಲಾಗ್ತಿದೆ!
ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ 15ಕ್ಕೂ ಹೆಚ್ಚು ಕಾರ್ಮಿಕ ಸಂಘಗಳ ಪ್ರಮುಖ ಮುಖಂಡರು ಹಾಗೂ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ, ಸಾರಿಗೆ ಸಚಿವರು ಈ ಮಹತ್ವದ ಘೋಷಣೆ ಮಾಡಿದರು. ಸಭೆಯಲ್ಲಿ ನೌಕರರ ವಿವಿಧ ಬೇಡಿಕೆಗಳ ಬಗ್ಗೆಯೂ ಸವಿವರವಾಗಿ ಚರ್ಚೆ ಸಹ ನಡೆಸಲಾಯಿತು.
2025ರಲ್ಲಿ ರಾಜ್ಯ ಸರ್ಕಾರ ಸಾರಿಗೆ ನೌಕರರ ವೇತನವನ್ನು ಪರಿಷ್ಕರಿಸಿತ್ತು. ಈ ಪರಿಷ್ಕರಣೆ ಬಳಿಕ ಒಟ್ಟು 1,271 ಕೋಟಿ ರೂಪಾಯಿ ವೇತನ ಹಿಂಬಾಕಿ ಕೊಡಬೇಕಿತ್ತು. ಈ ಹಿಂದೆ ಸರ್ಕಾರ ಈಗಾಗಲೇ 450 ಕೋಟಿ ರೂ. ಬಿಡುಗಡೆ ಮಾಡಿದ್ದು, ಈಗ ಉಳಿದಿರುವ 821 ಕೋಟಿ ರೂಪಾಯಿಗಳಲ್ಲಿ, ಇವತ್ತು ಮತ್ತೆ 170 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉಳಿದಿರುವ 651 ಕೋಟಿ ರೂಪಾಯಿಯನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿ ಸಚಿವರು ನೌಕರರಿಗೆ ಭರವಸೆ ನೀಡಿದ್ದಾರೆ.
ಇಷ್ಟೇ ಅಲ್ಲದೇ ‘ಹಣದ ಜೊತೆಗೆ ನೌಕರರ ಆರೋಗ್ಯದ ಕಡೆಯೂ ಕೂಡ ಸರ್ಕಾರ ಗಮನ ಹರಿಸಿದೆ ಅಂತಾನೆ ಹೇಳಬಹುದು! ಸಾರಿಗೆ ನೌಕರರಿಗೆ ಉತ್ತಮ ಗುಣಮಟ್ಟದ ಉಚಿತ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಈ ಮೂಲಕ ತಿಳಿಸಿದ್ದಾರೆ. ಈ ಯೋಜನೆ ಶೀಘ್ರದಲ್ಲೇ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ವಿಸ್ತರಣೆಯಾಗಲಿದೆ ಅಂತ ಸ್ಪಷ್ಟಪಡಿಸಿದರು!
ಎಸ್ ‘ ಒಟ್ಟಿನಲ್ಲಿ ಹೇಳೋದಾದ್ರೆ ‘ಹಬ್ಬದ ಸಂದರ್ಭದಲ್ಲಿ ಬಾಕಿ ವೇತನದ ಹಣ ಬಿಡುಗಡೆಯಾಗಿರೋದು ಸಾರಿಗೆ ನೌಕರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸರ್ಕಾರದ ಈ ನಿರ್ಧಾರದಿಂದ ನೌಕರರು ಖುಷಿಯಾಗಿದ್ದು, ಹಬ್ಬವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸಲು ಇದು ಸಹಾಯ ಮಾಡಿದೆ ಅಂತ ಹೇಳಬಹುದು..




