Sunday, December 22, 2024

Latest Posts

ಹೊಸವರ್ಷಕ್ಕೆ “ಕ್ರಾಂತಿ” ಮೋಷನ್ ಪೋಸ್ಟರ್, ದರ್ಶನ್ ಅಭಿಮಾನಿಗಳ ಕುತೂಹಲಕ್ಕೆ ತೆರೆಬೀಳಲಿದ್ಯ..?

- Advertisement -

www.karnatakatv.net:ಕ್ರಾಂತಿ ದರ್ಶನ್ ಅವರ 55ನೇ ಸಿನಿಮಾ. ಈ ಹಿಂದೆ ಯಜಮಾನ ಸಿನಿಮಾದ ಮೂಲಕ ತೈಲ ಕ್ರಾಂತಿ ಮಾಡಿದ್ದರು. ಈಗಾ ಕ್ರಾಂತಿ ಶೀರ್ಷಿಕೆ ಇರುವ ಸಿನಿಮಾದ ಮೂಲಕ ಅಕ್ಷರ ಕ್ರಾಂತಿ ಮಾಡಲು ಮುಂದಾಗಿದ್ದಾರೆ. ಕ್ರಾಂತಿ ಚಿತ್ರ ಮೊದಲ ಪೊಸ್ಟರ ಬಿಡುಗಡೇ ಯಾದಗಿಂದಲು ಇಲ್ಲಿಯವರೆಗು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ಬಿಡುಗಡೆಯಾಗಿರುವ ಏಕೈಕ ಪೋಸ್ಟರ್‌ಗೆ ಫಿದಾ ಆಗಿರುವ ಅಭಿಮಾನಿಗಳು ಮುಂದೆ ಯಾವಗ ಕ್ರಾಂತಿ ಚಿತ್ರದ ಪೋಸ್ಟರ್ ಅಥವಾ ಟೀಸರ್ ಬರಲಿದೆ ಎನ್ನುವ ಪ್ರಶ್ನೆಯನ್ನು ಚಿತ್ರತಂಡಕ್ಕೆ ಕೇಳುತ್ತಲೆ ಬರುತಿತ್ತು. ಆಗಾಗಿ ಕ್ರಾಂತಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲು ಚಿತ್ರತಂಡ ಚಿಂತಿಸುತ್ತಿದೆ. ಈ ಹಿಂದೆ ಯಜಮಾನ ನಿರ್ಮಾಣ ಮಾಡಿದ್ದ ಶೈಲಜಾ ನಾಗ್ ಅವರೇ ಕ್ರಾಂತಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆಗಾಗಿ ಮೊದಲು ಯಜಮಾನ ಚಿತ್ರದಲ್ಲಿ ದರ್ಶನ್ ಅವರ ಪಾತ್ರವನ್ನು ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಬಹಿರಂಗ ಪಡಿಸಿದ್ದರು. ಇದೀಗ ಅಭಿಮಾನಿಗಳ ಬೇಡಿಕೆ ಮೇರೆಗೇ ಮೋಷನ್ ಪೋಸ್ಟರ್ ರಿವಿಲ್ ಮಾಡಲು ಮುಂದಾಗಿದ್ದು ಹೊಸವರ್ಷದಂದು ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗುತ್ತಿದೆ.

ಇನ್ನೇನು ಕೆಲ ತಿಂಗಳಲ್ಲಿ (16ಮಾರ್ಚ) ದರ್ಶನ್ ಅವರ ಬರ್ತಡೇ ಬರಲಿದೆ. ಸಾಮಾನ್ಯವಾಗಿ ಪ್ರತಿ ವರ್ಷ ದರ್ಶನ್ ಅವರ ಹುಟ್ಟಿದದಿನ ಹೊಸ ಚಿತ್ರದ ಘೋಶಣೆಯಾಗುತ್ತಿತು ಇಲ್ಲವೇ ಅವರು ಮಾಡುವ ಸಿನಿಮಾಗಳ ಅಪ್‌ಡೇಟ್‌ಗಳು ಹೊರಬಿಳುತ್ತಿದ್ದವು. ಈಗಾಗಿ ಚಿತ್ರತಂಡಕ್ಕೆ ಕೊಂಚ ತಲೆಬಿಸಿಯಾಗಿದೆ, ಯಾಕೆಂದರೆ ದರ್ಶನ್ ಸದ್ಯ ಕ್ರಾಂತಿ ಚಿತ್ರಕ್ಕಾಗಿ ಮಾತ್ರ ತಮ್ಮಟೈಮ್ ಮುಡಿಪಾಗಿ ಇಟ್ಟಿದ್ದಾರೆ. ಕ್ರಾಂತಿ ಮುಗಿಯುವ ತನಕ ಬೇರೆ ಯಾವುದೇ ಸಿನಿಮಾ ಬಗ್ಗೆ ತಲೆಕೆಡಿಸಿಕೊಳ್ಳುವಂತೆ ಕಾಣುತಿಲ್ಲಾ.

ಸದ್ಯ ಚಿತ್ರತಂಡ ದರ್ಶನ್ ಅವರ ಹುಟ್ಟಿದದಿನಕ್ಕೂ ಒಂದೆರಡು ದಿನಗಳ ಮುಂಚೆ ಚಿತ್ರದ ಅಪ್‌ಡೇಟ್‌ಗಳನ್ನು ಹೊರಹಾಕಲು ಪ್ಲಾನ್ ಮಾಡುತ್ತಿದೆ. ಮತ್ತೊಂದೆಡೆ ಅಭಿಮಾನಿಗಳು ಟೀಸರ್ ಕೇಳುತ್ತಿರುವ ಕಾರಣ ಹೊಸವರ್ಷಕ್ಕೆ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿ, ದರ್ಶನ್ ಅವರ ಹುಟ್ಟಿದದಿನದಂದು ಟೀಸರ್ ಕೂಡ ಚಿಂತನೆಯಲ್ಲಿದೆ. ಈಗಾಗಲೆ ಮೊದಲ ಕ್ರಾಂತಿ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು ಮೊದಲ ಹಂತದ ಶೂಟಿಂಗ್ ಮುಗಿಸಿದೆ. ಕಳೆದ ಬಾರಿ ಚಿತ್ರೀಕರಣಕ್ಕಾಗಿ ಕ್ರಾಂತಿ ತಂಡ ಹೈದ್ರಾಬಾದ್‌ಗೆ ತೆರಳಿತ್ತು. ಹೈದ್ರಾಬಾದ್‌ನಲ್ಲಿ ಕೆಲವು ದಿನಗಳ ಶೂಟಿಂಗ್ ಮಾತ್ರ ಮಾಡಲಾಗಿದೆ. ಈ ಚಿತ್ರದಲ್ಲಿ ನಟ ದರ್ಶನ್‌ಗೆ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಪೋಷಕ ಪ್ರಧಾನ ಪಾತ್ರದಲ್ಲಿ ರವಿಚಂದ್ರನ್, ಸುಮಲತಾ ಕಾಣಿಸಿಕೊಳ್ಳಲಿದ್ದಾರೆ.

ಕೊರೊನಾ ಬಂದ ಬಳಿಕ ದರ್ಶನ್ ಹುಟ್ಟು ಹಬ್ಬದ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ನಟ ದರ್ಶನ್ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕವೇ ದರ್ಶನ್‌ಗೆ ಶುಭಕೋರುತ್ತಿದ್ದರು. ಇನ್ನೂ ಈಗ ಕೊರೊನಾ ಹಾವಳಿ ಮೊದಲಿನಷ್ಟು ಇಲ್ಲವಾದರೂ ಕೂಡ, ಬಗೆ ಬಗೆ ರೀತಿಯ ವೈರಸ್‌ಗಳು ಹೆಚ್ಚುತ್ತಿವೆ. ಹಾಗಾಗಿ ಈ ಬಾರಿ ಕೂಡ ದರ್ಶನ್ ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದು ಬಹುತೇಕ ಅನುಮಾನ.

- Advertisement -

Latest Posts

Don't Miss