ಮುಳ್ಳಯ್ಯನ ಗಿರಿಯಲ್ಲಿ ಬೀಳುವ ಮಳೆ ಹನಿ.. ಆಗುಂಬೆಯಲ್ಲಿ ಸುರಿಯುವ ವರ್ಷಧಾರೆ ತುಂಗಭದ್ರೆಯಾಗಿ ಹರಿದು.. ಆಂಧ್ರಪ್ರದೇಶದಲ್ಲಿ ಕೃಷ್ಣೆಯಲ್ಲಿ ಲೀನವಾಗಿ ಸಮುದ್ರ ಸೇರುವ ರೋಚಕ ಕಹಾನಿ.. ಇದಿಷ್ಟೆ ಅಲ್ಲ.. ಕೃಷ್ಣನಾಗಿ ಮಹಾರಾಷ್ಟ್ರದಲ್ಲಿ ಹುಟ್ಟಿ ಕೃಷ್ಣೆಯಾಗಿ ಕರ್ನಾಟಕದಲ್ಲಿ ಹರಿದು ಕೃಷ್ಣವೇಣಿಯಾಗಿ ತೆಲುಗು ನೆಲದ ಮೂಲಕ ಸಮುದ್ರ ಸೇರುವ ದೇಶದ ನಾಲ್ಕನೇ ದೊಡ್ಡ ನದಿಯ ಬಗ್ಗೆ ನಾವು ತಿಳಿದುಕೊಳ್ಳೋಣ. ಹೌದು ದೇಶದಲ್ಲಿ ಗಂಗಾ, ಗೋದಾವರಿ, ಬ್ರಹ್ಮಪುತ್ರ ನಂತರ ದೇಶದ ನಾಲ್ಕನೇ ಅತೀ ದೊಡ್ ನದಿ ಕೃಷ್ಣಾ ನದಿ.. 1400 ಕಿಲೋಮೀಟರ್ ನಷ್ಟು ಉದ್ದವಾಗಿ ಹರಿಯುವ ಕೃಷ್ಣಾ ಬಂಗಾಳಕೊಲ್ಲಿಯಲ್ಲಿ ಸೇರುತ್ತೆ.. ಅರಬ್ಬೀ ಸಮುದ್ರದ ಕಡೆ ಹುಟ್ಟಿ ವಿರೋಧ ದಿಕ್ಕಿನಲ್ಲಿ ಹರಿದು ಬಂಗಾಳ ಕೊಲ್ಲಿ ಸೇರುವ ಕೃಷ್ಣ ಟ್ಟು ನಾಲ್ಕು ರಾಜ್ಯದಲ್ಲಿ ಪ್ರಮುಖವಾದ ನದಿಯಾಗಿದೆ.. ಮಹರಾಷ್ಟ್ರದ ಮಹಬಲೇಶ್ವರ ಸಮೀಪದ ಪಶ್ಚಿಮ ಘಟ್ಟದ ಜೋರ್ ಗ್ರಾಮದ ವೈ ತಾಲೂಕಿನ ಸತಾರಾ ಜಿಲ್ಲೆಯಲ್ಲಿ ಹುಟ್ಟುವ ಕೃಷ್ಣ ನದಿ ಆಂಧ್ರಪ್ರದೇಶ ಹಳಸಲಾದೇವಿ ಪ್ರದೇಶದ ಮೂಲಕ ಬಂಗಾಳ ಕೊಲ್ಲಿಯನ್ನ ಸೇರುತ್ತೆ.. ಕೃಷ್ಣಾ ಹುಟ್ಟುವ ಸತಾರಾ ಜಿಲ್ಲೆಯಲ್ಲೇ 7 ಸಣ್ಣ ನದಿಗಳು ಕೃಷ್ಣಾ ಸೇರಿಕೊಳ್ಳುತ್ತವೆ. ವೆನ್ನಾ, ಉರ್ಮೋಡಿ, ಕಾಳಿ ಗಂಗಾ, ಮಾಂಡ, ವೆಲಂಬಾರ್ ಸೇರಿ ಕೋಯ್ನಾ ನದಿಗಳು ಕೃಷ್ಣ ಜೊತೆ ವಿಲೀನವಾಗುತ್ವೆ.
ಸತಾರಾ ಜಿಲ್ಲೆ ದಾಟಿದ ನಂತರ ಸಾಂಗ್ಲಿ ಜಿಲ್ಲೆ ಪ್ರವೇಶ ಮಾಡುವ ಕೃಷ್ಣದಲ್ಲಿ ಮೂರು ನದಿಗಳು ವಿಲೀನವಾಗುತ್ವೆ. ಯರ್ಲಾ, ವರ್ನಾ, ಪಂಚಗಂಗಾ ನದಿಗಳು ಕೃಷ್ಣದಲ್ಲಿ ವಿಲೀನವಾಗುತ್ತೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಿಂದ ಕರ್ನಾಟಕದ ಬೆಳಗಾವಿಗೆ ಎಂಟ್ರಿಯಾಗುವ ಕೃಷ್ಣ ಜೊತೆ ದೂದ್ ಗಂಗಾ ನದಿ ಜೊತೆಯಾಗುತ್ತೆ. ಬೆಳಗಾವಿಗೆ ಬರುವ ವೇಳೆಗೆ ಬೃಹತ್ ಹಾದಿಯನ್ನ ಸೃಷ್ಟಿಸಿಕೊಳ್ಳುವ ಕೃಷ್ಣ ನಂತರ ಬಾಗಲಕೋಟೆಯ ಆಲಮಟ್ಟಿ ಡ್ಯಾಂ ಬಳಿ ಘಟಫ್ರಭ ನದಿ ಕೃಷ್ಣೆಯಲ್ಲಿ ವಿಲೀನವಾಗ್ತಾಳೆ.. ಮುಂದೆ ಸ್ವಲ್ಪ ದೂರ ಸಾಗಿದಂತೆ ಬಸವಸಾಗರ ಜಲಾಶಯದ ಬಳಿ ಮಲಪ್ರಭ ಸಹ ಕೃಷ್ಣೆಯಲ್ಲಿ ಸೇರಿಕೊಳ್ತಾಳೆ. ಬಾಗಲಕೋಟೆ ನಂತರ ಕಲಬುರಗಿ ಜಿಲ್ಲೆಗೆ ಎಂಟ್ರಿಯಾಗುವ ಕೃಷ್ಣೆಗೆ ದೋಣೀ ನದಿ ಜೊತೆಯಾದ್ರೆ, ರಾಯಚೂರಿನಲ್ಲಿ ಭೀಮಾ ನದಿ ಕೃಷ್ಣೆಯಲ್ಲಿ ಲೀನವಾಗ್ತಾಳೆ. ರಾಯಚೂರಿನ ಮೂಲಕ ತೆಲಂಗಾಣ ಎಂಟ್ರಿಯಾಗುವ ಮೂಲಕ ಕೃಷ್ಣವೇಣಿಯಾಗಿ ಬದಲಾಗ್ತಾಳೆ.. ತೆಲಂಗಾಣದಲ್ಲಿ ದಿಂಡಿ, ಮೂಸಿ, ಹಳಿಯಾ ಸೇರಿದಂತೆ ಮೂರು ನದಿಗಳು ಕೃಷ್ಣವೇಣಿಯಲ್ಲಿ ಸೇರಿಕೊಳ್ತಾರೆ.. ನಂತರ ಆಂಧ್ರಪ್ರದೇಶದ ಸೂರ್ಯಪೇಟೆ, ಗೂಂಟೂರು, ಕೃಷ್ಣ ಜಿಲ್ಲೆಯಲ್ಲಿ ಪಲೇರು, ಮುನ್ನೇರಿ ಉಪನದಿಗಳು ಕೃಷ್ಣವೇಣಿಯನ್ನಅಂತಿಮವಾಗಿ ಸೇರಿಕೊಳ್ಳುತ್ವೆ. ಅಂತಿಮವಾಗಿ ಪ್ರಕಾಶಂ ಜಿಲ್ಲೆಯಲ್ಲಿ ಹರಿಯುವ ಕೃಷ್ಣವೇಣಿ ಬಂಗಾಳಕೊಲ್ಲಿಯನ್ನ ಸೇರಿಕೊಳ್ತಾಳೆ..
ಇನ್ನು ಕೃಷ್ಣ ನದಿ ಹುಟ್ಟಿನಿಂದ ಸಮುದ್ರ ಸೇರುವ ವರೆಗೆ 20 ನದಿಗಳು ಕೃಷ್ಣೆಯಲ್ಲಿ ವಿಲೀನವಾದರೂ ಈ ಇಪ್ಪತ್ತರಲ್ಲಿ ತುಂಗಭದ್ರಾ, ಭೀಮಾ ನದಿ ಎರಡು ಬೃಹತ್ ನದಿಗಳು.. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಪಂಚಗಂಗಾ, ವರ್ನಾ, ಎಲ್ರಾ ನದಿ ಸೇರಿವ ಜಾಗ ತುಂಬಾ ಪವಿತ್ರವಾದದ್ದು.. ಕೃಷ್ಣ ನದಿ ತೀರದ ದುಂಬರ ವೃಕ್ಷದ ಕೆಳಗೆ ಗುರು ದತ್ತಾತ್ರೇಯ ದಷ್ಟು ಕಾಲ ನೆಲೆಸಿದ್ರು ಅನ್ನೋ ನಂಬಿಕೆ. ಹೀಗಾಗಿ ಈ ಜಾಗ ತುಂಬಾ ಪವಿತ್ರವಾದದ್ದು.. ಇನ್ನು ಆಲಮಟ್ಟಿ ಜಲಾಶಯದ ನಂತರ ಕೃಷ್ಣೆ ಹಾಗೂ ಮಲಪ್ರಭ ನದಿ ಸಂಗಮವಾಗುವ ಕ್ಷೇತ್ರವೇ ಕೂಡಲಸಂಗಮ.. ಬಸವಣ್ಣನವರ ಐಕ್ಯ ಮಂಟಪ ಕೃಷ್ಣಾ ತೀರದ ಪವಿತ್ರ ಕ್ಷೇತ್ರ.. ಇಲ್ಲಿಂದ ಮುಂದೆ ಶ್ರೀಶೈಲದ ಕಡೆ ಕೃಷ್ಣೆ ಮುಖ ಮಾಡ್ತಾಳೆ. ಮುಂದೆ ಕರ್ನೂಲ್ ಜಿಲ್ಲೆಯಲ್ಲಿ ತುಂಗಭದ್ರಾ, ಭವನಾಸಿ ಇಬ್ಬರೂ ಕೃಷ್ಣವೇಣಿಯನ್ನ ಸೇರ್ತಾರೆ ಜಾಗವೇ ಸಂಗಮೇಶ್ವರ.. ಸಂಗಮೇಶ್ವರ ದೇವಸ್ಥಾನದ ಬಳಿ ನಿಂತು ನದಿ ನೀರಿ ಕಡಿಮೆ ಇದ್ದಾಗ ಹಿಮ್ಮಖವಾಗಿ ನೋಡಿದ್ರೆ ಶ್ರೀಶೈಲ ದೇವಸ್ಥಾನ ಕಾಣುತ್ತೆ.. ಮಹಾರಾಷ್ಟ್ರದಲ್ಲಿ ಹುಟ್ಟುವ ಕೃಷ್ಣ ಕರ್ನಾಟಕದಲ್ಲಿ ದೊಡ್ಡಪ್ರಮಾಣದಲ್ಲಿ ವ್ಯವಸಾಯಕ್ಕೆ ಬಳಕೆ ಮಾಡಲಾಗುತ್ತೆ. ದೇಶದ ಶೇಕಡಾ 10% ವ್ಯವಸಾಯಕ್ಕೆ ಕೃಷ್ಣೆಯ ಪಾಲಿದೆ.. ಪ್ರತೀ 12 ವರ್ಷಕ್ಕೊಮ್ಮೆ ಬೃಹತ್ ಕೃಷ್ಣ ಪುಷ್ಕರಂ ನಡೆಸಲಾಗುತ್ತದೆ. ನಾಲ್ಕು ರಾಜ್ಯಗಳ ಜನ ಇದರಲ್ಲಿ ಭಾಗಿಯಾಗ್ತಾರೆ.
ಒಟ್ಟಾರೆ ಚಿಕ್ಕಮಗಳೂರಿನ ಮುಳ್ಳಯನ ಗಿರಿ, ಶಿವಮೊಗ್ಗದ ಆಗುಂಬೆಯಲ್ಲಿ ಬೀಳುವ ಹನಿಯೂ ತುಂಗಭದ್ರೆಯಾಗಿ ಹರಿದು ಕೃಷ್ಣೆಯಲ್ಲಿ ಲೀನವಾಗಿ ಸಾವಿರಾರು ಕಿಲೋಮೀಟರ್ ಸಾಗಿ ಆಂಧ್ರದ ಮೂಲಕ ಬಂಗಾಳ ಕೊಲ್ಲಿ ಸೇರುತ್ತೆ ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿಲ್ಲ.. ಇದಿಷ್ಟು ಕೃಷ್ಣೆಯ ಕತೆ..