ಉಪೇಂದ್ರ ಅಂದ್ರೆನೇ ವಿಶೇಷ ಚೈತನ್ಯ. ನಿರ್ದೇಶಕನಾಗಿ, ನಟನಾಗಿ ಅಷ್ಟೇ ಯಾಕೆ ರಾಜಕೀಯವಾಗಿಯೂ ಕೂಡ ಅವರು ವಿಭಿನ್ನ ವಿಶೇಷ.. ಹೌದು ಉಪ್ಪಿ ಅಂದ್ರೆ ಅವರೊಬ್ಬ ಪ್ರಾಯೋಗಿಕ ವ್ಯಕ್ತಿ ಅನ್ನೋದು ಪ್ರತಿಯೊಬ್ಬ ಸಿನಿ ರಸಿಕನಿಗೂ ಗೊತ್ತು. ಹಾಗಾಗಿಯೇ ರಿಯಲ್ ಸ್ಟಾರ್ ಉಪೇಂದ್ರ ಇಂದು, ಇಡೀ ವಿಶ್ವಕ್ಕೆ ಪರಿಚಿತವಾಗುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರು. ಅಷ್ಟಕ್ಕೂ ಉಪ್ಪಿ ಬಗ್ಗೆ ಈಗ ಇಷ್ಟೇಲ್ಲಾ ಹೇಳ್ತಿರೋದ್ಯಾಕೆ ಅಂದ್ಕೊಂಡ್ರಾ..? ಯಸ್ ಅದಕ್ಕೆ ಕಾರಣವೂ ಇದೆ. ಯಸ್ ವೀಕ್ಷಕರೆ.. ನಿರ್ದೇಶಕನಾಗಿ, ನಟನಾಗಿ ಅಷ್ಟೇ ಅಲ್ಲದೇ ರಾಜಕೀಯದಲ್ಲೂ ತನ್ನ ವಿಭಿನ್ನ ಕಾರ್ಯವೈಖರಿ ಮೂಲಕ ಅಭಿಮಾನಿಗಳ ಮನಸ್ಸು ಕದ್ದಿರುವ ಉಪ್ಪಿ ಮುಡಿಗೆ ಈಗ ಮತ್ತೊಂದು ಗೌರವ. ಹೌದು.. ಒಬ್ಬ ನಿರ್ದೇಶಕನಾಗಿ ಕನ್ನಡ ಚಿತ್ರರಂಗದತ್ತ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದ ಉಪೇಂದ್ರ, ವಿಶ್ವ ಶ್ರೇಷ್ಠ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. IMDB ಬಿಡುಗಡೆ ಮಾಡಿರುವ ವಿಶ್ವದ ಶ್ರೇಷ್ಠ 50 ನಿರ್ದೇಶಕರ ಪಟ್ಟಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸ್ಥಾನ ಪಡೆದಿದ್ದಾರೆ. ವಿಶ್ವ ಶ್ರೇಷ್ಠ ನಿರ್ದೇಶಕರ ಪಟ್ಟಿಯಲ್ಲಿ 17ನೇ ಸ್ಥಾನ ಪಡೆದಿರುವ ಉಪ್ಪಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.