ಕೆಆರ್ ಪುರ: ಮಹದೇವಪುರ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮಂಜುಳಾ ಅರವಿಂದ್ ನಿಂಬಾವಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಳೆದ ಬಾರಿ ಮೂರು ಸಲ ಶಾಸಕರಾಗಿದ್ದ ಅರವಿಂದ ನಿಂಬಾವಳಿಗೆ ಈ ಬಾರಿ ಟಿಕೇಟ್ ನಿರಾಕರಿಸಿದ್ದು, ಅವರ ಪತ್ನಿ ಮಂಜುಳಾರಿಗೆ ಟಿಕೇಟ್ ಸಿಕ್ಕಿದೆ. ಹಾಗಾಗಿ ಕೆಆರ್‌ಪುರದ ಬಿಇಓ ಕಚೇರಿಯಲ್ಲಿ ಮಂಜುಳಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಂಜುಳಾಗೆ ಪತಿ ಅರವಿಂದ್ ಲಿಂಬಾವಳಿ ಸೇರಿ, ಸಾವಿರಾರು ಬಿಜೆಪಿ ಕಾರ್ಯಕರ್ತರು ಬೃಹತ್ ಮೆರವಣಿಗೆ ಮೂಲಕ ಬಂದು ಸಾಥ್ ನೀಡಿದ್ದಾರೆ.
ಇನ್ನು ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ನಾಗೇಶ್ ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಳೆದ ಬಾರಿ ಮುಳಬಾಗಿಲು ಕ್ಷೇತ್ರದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ನಿಂತು ನಾಗೇಶ್ ಗೆಲುವು ಸಾಧಿಸಿದ್ದರು. ಹಾಗಾಗಿ ಈ ಬಾರಿ ಮಹದೇವಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್ ಸಿಕ್ಕಿದ್ದು, ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಬಂದು, ನಾಗೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನೊಂದೆಡೆ ಕೆಆರ್‌ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಭೈರತಿ ಬಸವರಾಜ್ ನಾಮಪತ್ರ ಸಲ್ಲಿಸಿದ್ದಾರೆ. ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ರ್ಯಾಲಿ ಮೂಲಕ ಬಂದ ಭೈರತಿ ಬಸವರಾಜ್, ಪಾಲಿಕೆ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಬೃಹತ್ ಮೆರವಣಿಗೆ ಮೂಲಕ ಬಂದು, ನಾಮಪತ್ರ ಸಲ್ಲಿಸಿದ ಹೆಚ್.ಕೆ.ಕುಮಾರಸ್ವಾಮಿ..
’20ನೇ ತಾರೀಕು ನಡೆಯಲಿರುವ ಕಾರ್ಯಕ್ರಮದಲ್ಲಿ ಹೆಚ್ಡಿಕೆ, ರೇವಣ್ಣ, ಪ್ರಜ್ವಲ್, ಸೂರಜ್ ಭಾಗಿಯಾಗಲಿದ್ದಾರೆ’
‘ನನ್ನನು ಹೊರತು ಪಡಿಸಿ ಇನ್ನೆಲ್ಲಾ ಅಭ್ಯರ್ಥಿಗಳು ಕೂಡ ನನಗೆ ಎದುರಾಳಿಗಳೇ’