Hubli News: ಹುಬ್ಬಳ್ಳಿ- ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪನವರು ಮತಾಡುವುದಾಗಿ ಹೇಳಿದ್ದಾರೆ, ಈಶ್ವರಪ್ಪನವರ ಮನವೊಲಿಕೆ ಆಗುತ್ತೆ ಎಂದು ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ರಾಷ್ಟ್ರೀಯ ನಾಯಕರು ಬಿಎಸ್‌ವೈ ಅವರು ಸೇರಿ ಈಶ್ವರಪ್ಪನವರ ಜೊತೆ ಮಾತಾಡಿ ಮನವೊಲಿಕೆ ಮಾಡುತ್ತಾರೆ. ಇನ್ನೂ ರಮೇಶ್ ಜಾರಕಿಹೊಳಿಯವರು ಕ್ಷೇತ್ರ ಬದಲಾವಣೆ ಕುರಿತು ಏನ ಹೇಳಿದ್ದಾರೆ ಅನ್ನುವುದು ಗೊತ್ತಿಲ್ಲ. ಮೋಸ್ಟಿಲಿ ಅವರು ಹೈಕಮಾಂಡ್ ಜೊತೆ ಟಚ್‌ನಲ್ಲಿ ಇರಬೇಕು ಎಂದರು.
ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸವಣೂರು ಹಾಗೂ ಶಿಗ್ಗಾಂವ ಪ್ರಮುಖರ ಸಭೆಯನ್ನು ಇಂದು ಶಿಗ್ಗಾಂವದಲ್ಲಿ ಕರೆಯಲಾಗಿದೆ. ಸಭೆಗೆ ಧಾರವಾಡ ಲೋಕಸಭಾ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ಬರುತ್ತಾರೆ. ಜೋಶಿಯವರಿಗೆ ಕಳೆದ ಬಾರಿಗಿಂತ ಸವಣೂರು, ಶಿಗ್ಗಾಂವನಿಂದ ಹೆಚ್ಚು ಲೀಡ್ ದೊರೆಯುವ ನಿಟ್ಟಿನಲ್ಲಿ ತಯಾರಿ ಮಾಡಲಾಗಿದೆ. ಜೊತೆಗೆ ಹಾವೇರಿ ಗದಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಂದು ನಾನು ಪ್ರವಾಸ ಮಾಡುತ್ತಿದ್ದೇನೆ. ಇಂದು ಹಾನಗಲ್‌ಗೆ ಭೇಟಿ ನೀಡಲಿದ್ದೇನೆ, ನಾಳೆ ಗದಗ ಮೂರು ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಗದಗ, ರೋಣ ಶಿರಹಟ್ಟಿ ಕ್ಷೇತ್ರದಲ್ಲಿ ನಾಳೆ ಭೇಟಿ ನೀಡಿ ಪ್ರಮುಖರ ಭೇಟಿ ಮಾಡುತ್ತೇನೆ. ಕಳೆದ ಬಾರಿಗಿಂತ ಹೆಚ್ಚು ಲೀಡ್‌ನಲ್ಲಿ ನಾನು ಗದಗ ಹಾವೇರಿ ಒಂದು ಲೋಕ ಸಭಾ ಕ್ಷೇತ್ರದಿಂದ ಗೆಲ್ಲುತ್ತೇನೆ ಎಂದು ಹೇಳಿದರು.
ಅಸಮಾಧಾನ ಎರಡು ಮೂರು ದಿನಗಳಲ್ಲಿ ಶಮಮಗೊಳ್ಳುತ್ತದೆ: ಬಿ.ಎಸ್.ಯಡಿಯೂರಪ್ಪ
ಚುನಾವಣೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ

