Tuesday, July 15, 2025

Latest Posts

KSRTC ₹776 ಕೋಟಿ ಆದಾಯ : ಶಕ್ತಿ ಯೋಜನೆಗೆ ಕೋಟಿ, ಕೋಟಿ ಲಾಭ

- Advertisement -

ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಕೂಡ ಒಂದು. ಶಕ್ತಿ ಯೋಜನೆ ಜಾರಿಗೊಂಡಾಗಿನಿಂದ ಮೈಸೂರು ಜಿಲ್ಲೆಯ ವಿವಿಧ ಸಾರಿಗೆ ಘಟಕಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 31.04 ಕೋಟಿ ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಇದರಿಂದ ಕೆಎಸ್‌ಆರ್‌ಟಿಸಿಗೆ ಬರೋಬ್ಬರಿ ₹776 ಕೋಟಿ ಆದಾಯ ಬಂದಿದೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 10 ಘಟಕಗಳು ಕಾರ್ಯ ನಿರ್ವಹಿಸುತ್ತಿದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ಒಟ್ಟಾರೆ 46.67 ಕೋಟಿ ಪ್ರಯಾಣಿಕರು ಸಂಚಾರ ಕೈಗೊಂಡಿದ್ದಾರೆ. ಇವರಲ್ಲಿ ಶೇ66.5 ಮಂದಿ ಶಕ್ತಿ ಯೋಜನೆಯ ಉಚಿತ ಸಂಚಾರದ ಲಾಭ ಪಡೆದಿದ್ದಾರೆ.

ಮೈಸೂರು ನಗರ ವಿಭಾಗದ 4 ಘಟಕಗಳು ಅತಿ ಹೆಚ್ಚು ಪ್ರಯಾಣಿಕರನ್ನು ಕಂಡಿದ್ದು, ಉತ್ತಮ ಆದಾಯವನ್ನೂ ಗಳಿಸಿವೆ. ಕುವೆಂಪುನಗರ, ಸಾತಗಳ್ಳಿ, ವಿಜಯನಗರ ಘಟಕಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಮೈಸೂರು ಗ್ರಾಮಾಂತರ, ಪಿರಿಯಾಪಟ್ಟಣ, ಎಚ್.ಡಿ. ಕೋಟೆ ಘಟಕಗಳು ಉಳಿದವಕ್ಕೆ ಹೋಲಿಸಿದರೆ ಕಡಿಮೆ ಆದಾಯ ಪಡೆದಿವೆ. ಸದ್ಯ ಮೈಸೂರು ಜಿಲ್ಲೆಯಲ್ಲಿ ನಿತ್ಯ 1,308 ಬಸ್‌ಗಳು ಸಂಚಾರ ಕೈಗೊಂಡಿದ್ದು, 3748 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿತ್ಯ ಸರಾಸರಿ 6.24 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ.

2024-25ನೇ ಸಾಲಿನಲ್ಲಿ 22.58 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಇವರಲ್ಲಿ 15.99 ಕೋಟಿ ಮಹಿಳಾ ಪ್ರಯಾಣಿಕರು. ಇದರಿಂದ ₹404.77 ಕೋಟಿ ಆದಾಯ ಬಂದಿದೆ. ಈ ಸಾಲಿನಲ್ಲಿ ಜೂನ್ ಅಂತ್ಯಕ್ಕೆ 5.70 ಕೋಟಿ ಪ್ರಯಾಣ ಕೈಗೊಂಡಿದ್ದು, ಇವರಲ್ಲಿ 4.24 ಕೋಟಿ ಮಹಿಳೆಯರು. ಇದರಿಂದ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಬರೂಬ್ಬರಿ ₹123.94 ಕೋಟಿ ಆದಾಯ ಬಂದಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss