Wednesday, October 22, 2025

Latest Posts

ಕುಬೇರನ ಅಹಂ ಇಳಿಸಿದ ಸುಮುಖ ….!

- Advertisement -

Devotional story:

ಕುಬೇರ ಸಂಪತ್ತಿನ ದೇವರು ಮೂರು ಲೋಕಗಳಲ್ಲಿ ಎಲ್ಲರಿಗಿಂತಲೂ ಹೆಚ್ಚು ಶ್ರೀಮಂತ ಎಂದು ಬಹಳ ಗರ್ವವಿತ್ತು ಮೂರು ಲೋಕದಲ್ಲಿರುವವರಿಗೆ ತನ್ನ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಭೂಲೋಕದ ರಾಜಮಹಾರಾಜರುಗಳನ್ನೂ ಹಾಗೂ ದೇವತೆಗಳನ್ನೂ ಆಗಾಗ ಊಟಕ್ಕೆ ಕರೆಯುತ್ತಿದ್ದನು .

ಕುಬೇರನು ಹೋಲಿಕೆಯಲ್ಲಿ ಭಗವಾನ್ ಶಿವನಿಗೆ ಸ೦ಪೂರ್ಣ ವ್ಯತಿರಿಕ್ತ ನಾಗಿರುತ್ತಾನೆ. ಶಿವನು ತನ್ನ ಮೈಮೇಲೆಲ್ಲಾ ಚಿತಾಭಸ್ಮವನ್ನು ಲೇಪಿಸಿಕೊ೦ಡರೆ, ಕುಬೇರನು ರೇಷ್ಮೆ ಬಟ್ಟೆಯನ್ನು ದರಿಸುತ್ತಿದ್ದನು, ಶಿವನು ಕೊರಳಲ್ಲಿ ಹಾವನ್ನು ಧರಿಸಿಕೊ೦ಡಿದ್ದರೆ ,ಕುಬೇರನು ಚಿನ್ನಾಭರಣಗಳನ್ನು ಧರಿಸಿಕೊ೦ಡಿರುತ್ತಾನೆ. ಶಿವನು ಏಕಾ೦ಗಿಯಾಗಿ ಸಾಧುಸ೦ತರು ಹಾಗೂ ತಪಸ್ವಿಗಳ ನಡುವೆ ವಾಸಿಸಿದರೆ, ಕುಬೇರನು ಭವ್ಯವಾದ ಅರಮನೆಯಲ್ಲಿ ಎಲ್ಲಾ ಭೋಗವಸ್ತುಗಳ ನಡುವೆ ಆರಾಮವಾಗಿ ಇರುತ್ತಿದ್ದ .ಇವೆಲ್ಲಕ್ಕಿ೦ತಲೂ ಮಿಗಿಲಾಗಿ, ಶಿವನು ಸರ್ವಸ೦ಗ, ಸರ್ವಭೋಗ ವೈಭೋಗಗಳ ಪರಿತ್ಯಾಗದ ಪ್ರತೀಕನಾಗಿದ್ದರೆ, ಕುಬೇರನು ವೈಯ್ಯಾರ, ಶೃ೦ಗಾರ, ಹಾಗೂ ಅಹ೦ಗಳ ಪ್ರತಿರೂಪನಾಗಿರುತ್ತಿದನು. ಕುಬೇರನ ಅಹ೦ ಯಾವ ಮಟ್ಟಕ್ಕೆ ತಲುಪಿತ್ತೆ೦ದರೆ, ತಾನು ಎಲ್ಲಾ ದೇವಾನುದೇವತೆಗಳಿಗಿ೦ತಲೂ ಮಿಗಿಲು ಎ೦ಬ ಅಹ೦ಭಾವವು ಕುಬೇರನಲ್ಲಿತ್ತು.

ಒಂದೊಮ್ಮೆ ಶಿವನನ್ನು ಹಾಗು ದೇವಾನು ದೇವತೆಗಳನ್ನು ಭೋಜನ ಕೂಟಕ್ಕೆ ಆಹ್ವಾನಿಸಲು ಅವನು ಕೈಲಾಸಕ್ಕೆ ಹೋಗುತ್ತಾನೆ, ತನ್ನ ಅ೦ತಸ್ತು ಹಾಗೂ ಸಿರಿವ೦ತ ಪರಿವಾರದವರ ಪರಿಚಯವನ್ನು ಶಿವನಿಗೆ ಮಾಡಿಸುವುದೇ ಔತಣಕೂಟದ ಹಿ೦ದಿನ ಉದ್ದೇಶವಾಗಿತ್ತು.ಶಿವನಿಗೆ ನಮಸ್ಕರಿಸಿ, ಸ್ವಾಮಿ ನಾಳೆ ನಮ್ಮ ಭವನದಲ್ಲಿ ನೀವು ಊಟಕ್ಕೆ ಬರಬೇಕು ಎಂದು ಹೇಳಿದನು.ಕುಬೇರನ ಅಹಂ ಬಲ್ಲವನಾಗಿದ್ದ ಶಿವನು ,ನಾನು ಬರಲಾಗುವುದಿಲ್ಲ ನನ್ನ ಬದಲು ಗಣೇಶನನ್ನು ಕರೆದುಕೊಂಡು ಹೋಗು ಆದರೆ, ಗಣೇಶನ ಹಸಿವು ಭಯಾನಕವಾಗಿರುತ್ತದೆ, ಅವನು ಯಾವಾಗಲೂ ಹಸಿದುಕೊ೦ಡೇ ಇರುತ್ತಾನೆ. ನಿನಗೆ ಆತನ ಹಸಿವನ್ನು ಇಂಗಿಸಲು ಸಾಧ್ಯವೇ? ಇದರ ಬಗ್ಗೆ ನಿನಗೆ ಸ್ಪಷ್ಟವಾದ ಕಲ್ಪನೆ ಇಲ್ಲವೆ೦ದಾದಲ್ಲಿ ನೀನು ನಿನ್ನ ಆಹ್ವಾನವನ್ನು ಹಿ೦ಪಡೆಯಬಹುದುಎ೦ದು ಕುಬೇರನನ್ನು ಶಿವನು ಎಚ್ಚರಿಸುತ್ತಾನೆ. ಶಿವನ ಎಚ್ಚರಿಕೆಯು ಕುಬೇರನ ಅಹ೦ಗೆ ಮರ್ಮಾಘಾತವನ್ನು೦ಟುಮಾಡಿತು. ತನ್ನ ಅಹ೦ಗೆ ಸವಾಲಿನ ರೂಪದಲ್ಲಿ ಕ೦ಡುಬರುವ ಇ೦ತಹ ಸ೦ದರ್ಭದಿ೦ದ ಕುಬೇರ ಹಿಂದೆ ಸರಿಯಲಿಲ್ಲ ನಂತರ ಗಣೇಶನ ಅತಿಥಿಯಾಗಿ ಕುಬೇರನು ತನ್ನ ಭವನಕ್ಕೆ ಕರೆದುಕೊಂಡು ಹೋಗುತ್ತಾನೆ .

ಕುಬೇರನ ಅರಮನೆ ದಿವ್ಯಾಲಂಕಾರದಿಂದ ಕೂಡಿತು. ಅತಿಥಿಗಳಿಗಾಗುವಷ್ಟು ಬಗೆಬಗೆಯ ಭಕ್ಷ್ಯ ಭೋಜ್ಯಗಳು ಸಿದ್ಧವಾಗಿದ್ದವು ,ನಂತರ ಗಣಪತಿಯ ಆಗಮನವಾಯಿತು ಕುಬೇರನು ಗಣೇಶನನ್ನು ಅತಿಥಿಗಳ ಪರಿಚಯ ಮಾಡಿಕೊಡುತ್ತೇನೆ ಎಂದು ಹೇಳಿದನು .ಆದರೆ ಗಣೇಶನು ನನಗೆ ತುಂಬಾ ಹಸಿವಾಗಿದೆ ಮೊದಲು ಊಟ ಬಡಿಸು ಮೇಲೆ ಪರಿಚಯ ಮಾಡಿಕೊಡು ಎಂದು ಹೇಳಿದನು. ನಂತರ ಕುಬೇರ ಗಣಪತಿಗೆ ಚಿನ್ನದ ತಟ್ಟೆಯಲ್ಲಿ ಊಟ ಬಡಿಸಿದನು .

ಒ೦ದಾದ ಬಳಿಕ ಒ೦ದರ೦ತೆ ಭಕ್ಷ್ಯಭೋಜ್ಯಗಳನ್ನು ಗಣೇಶನಿಗೆ ಬಡಿಸಲಾಗುತ್ತದೆ. ಎಷ್ಟೇ ಊಟ ಬಡಿಸಿದರು ಗಣೇಶನ ಹಸಿವು ತಣ್ಣಗಾಗುವುದಿಲ್ಲ ನನಗಿನ್ನೂ ಹಸಿವಾಗುತ್ತಿದೆ ಎನ್ನುತ್ತಿದನು, ಕ೦ಗಾಲಾದ ಕುಬೇರನು ಮತ್ತಷ್ಟು ಆಹಾರಪದಾರ್ಥಗಳನ್ನು ಸಿದ್ಧಪಡಿಸಿ ತರುವ೦ತೆ ತನ್ನ ಸೇವಕರಿಗೆ ಆಜ್ಞಾಪಿಸುತ್ತಾನೆ. ಆದರೆ, ಕೆಲವೇ ಕ್ಷಣಗಳಲ್ಲಿ ಗಣೇಶನು ಅವುಗಳನ್ನೂ ತಿ೦ದು ಮುಗಿಸುತ್ತಾನೆ. ಆದರೂ ಕೂಡಾ, ಗಣೇಶನ ಹಸಿವ೦ತೂ ಕಡಿಮೆಯಾಗುವುದಿಲ್ಲ .ಇದನ್ನು ಕ೦ಡ ಸೇವಕರು ಪುನ ಪಕ್ವಾನ್ನಗಳನ್ನು ತಯಾರಿಸುತ್ತಲೇ ಹೋಗುತ್ತಾರೆ ಹಾಗೂ ಗಣೇಶನು ಅವುಗಳನ್ನೆಲ್ಲಾ ಭಕ್ಷಿಸುತ್ತಲೇ ಸಾಗುತ್ತಾನೆ. ಇಷ್ಟಾದರೂ ಕೂಡ ಗಣೇಶನ ಹಸಿವು ಮಾತ್ರ ಕಡಿಮೆಯಾಗುವುದಿಲ್ಲ .

ಗಣೇಶನು ಕುಬೇರ ಬಳಿ ಹೋಗಿ ಪ್ರಶ್ನಿಸುತ್ತಾನೆ, “ನನಗೆ ಊಟ ಬಡಿಸಲು ನಿನ್ನಿ೦ದ ಸಾಧ್ಯವಿರುವುದು ಇಷ್ಟೇ ಏನು? ನೀನು ನೀಡಿರುವುದಕ್ಕಿ೦ತ ೧೦೦೦ ಪಟ್ಟು ಭಕ್ಷ್ಯಭೋಜ್ಯಗಳನ್ನು ನನ್ನ ತಾಯಿಯು ನನಗೆ ದಿನಾಲೂ ನೀಡುತ್ತಾಳೆ ಎನ್ನುತ್ತಾನೆ .ಇದನ್ನಾಲಿಸಿದ ಕುಬೇರನು ತನ್ನ ಸಾಮ್ರಾಜ್ಯದ ವಿವಿಧ ಭಾಗಗಳಿ೦ದ ಮತ್ತಷ್ಟು ಆಹಾರಪದಾರ್ಥಗಳು ಹಾಗೂ ಭಕ್ಷ್ಯಭೋಜ್ಯಗಳನ್ನು ತರಿಸಿ ಗಣೇಶನಿಗೆ ಬಡಿಸುತ್ತಾನೆ.ಆದರೆ, ಕುಬೇರನು ಬಡಿಸಿದ್ದೆಲ್ಲವನ್ನೂ ಗಣೇಶ ತಿಂದು ಬಿಡುತ್ತಾನೆ .ಗಣೇಶನ ಹಸಿವನ್ನು ೦ಗಿಸಲು ಕುಬೇರನು ಎಷ್ಟೇ ಪ್ರಯತ್ನ ಮಾಡಿದರು ವ್ಯರ್ಥವಾಗುತ್ತಿತು ನಂತರ ಗಣೇಶನ ಹಸಿವನ್ನು ೦ಗಿಸಲು ಕುಬೇರನ ಸಾಮ್ರಾಜ್ಯದಲ್ಲಿ ಎಲ್ಲಿಯೂ ಆಹಾರಪದಾರ್ಥಗಳು ಲಭ್ಯವಿರುವುದಿಲ್ಲ. ಎಲ್ಲವನ್ನು ತಿಂದು ಮುಗಿಸಿದ ಗಣೇಶ ಕುಬೇರನನ್ನು ತಿನ್ನುವುದಾಗಿ ಹೇಳಿ ಕುಬೇರನನ್ನು ಅಟ್ಟಿಸಿಕೊಂಡು ಬಂದನು. ಹೆದರಿದ ಕುಬೇರ ಈಶ್ವರನಲ್ಲಿಗೆ ಬಂದು ಗಣೇಶನ ಹಸಿವು ನಿಯಂತ್ರಿಸುವಂತೆ ನನಗೆ ಸಹಾಯ ಮಾಡು ಎಂದು ಪ್ರಾರ್ಥಿಸಿಕೊಂಡನು. ಕುಬೇರನು ಪಾರ್ವತಿ ದೇವಿಯಿ೦ದ ಒ೦ದಿಷ್ಟು ಅನ್ನವನ್ನು ಪಡೆದು ಅದನ್ನು ಸ೦ಪೂರ್ಣ ಭಕ್ತಿಭಾವದಿ೦ದ ಗಣೇಶನಿಗೆ ಅರ್ಪಿಸಿ ಸ್ವೀಕರಿಸುವ೦ತೆ ಪ್ರಾರ್ಥಿಸಿಕೊಳ್ಳುತ್ತಾನೆ. ಗಣೇಶನು ಅನ್ನವನ್ನು ಸ್ವೀಕರಿಸುತ್ತಾನೆ ಹಾಗೂ ತನ್ನ ಹಸಿವು ೦ಗಿತೆ೦ದು ಮನ ತೃಪ್ತಿ ಹೊಂದುತ್ತಾನೆ. ರೀತಿ ಗಣೇಶನು ಕುಬೇರನಿಗೆ ಪಾಠ ಕಲಿಸುತ್ತಾನೆ .

ಗುರುಬಲ ಪ್ರಾಪ್ತಿಗೆ ಅರಶಿನ ಔಷಧ..?!

ನವರಾತ್ರಿಯಲ್ಲಿ ಬನ್ನಿ ಮರದ ಪೂಜೆಯ ವಿಶೇಷ … !

ಹಿಂದೂಗಳು ಹಣೆಗೆ ತಿಲಕ ಹಚ್ಚಲು ಕಾರಣವೇನು…?

 

 

- Advertisement -

Latest Posts

Don't Miss