Monday, April 14, 2025

Latest Posts

12 ಗಂಟೆಯಲ್ಲಿ 120 ಕಿಮೀ ನಡೆದು ಎಲ್ಲಮ್ಮನ ಗುಡ್ಡಕ್ಕೆ ಬಂದು ಹರಕೆ ತೀರಿಸಿದವರಿಗೆ ಸನ್ಮಾನ..

- Advertisement -

Hubballi News: ಹುಬ್ಬಳ್ಳಿ: ಯುವಕರಿಬ್ಬರು 12 ಗಂಟೆಯಲ್ಲಿ 120 ಕಿಮೀ ಯಲ್ಲಮ್ಮ ಗುಡ್ಡದವರಿಗೆ ಪಾದಯಾತ್ರೆ ನಡೆಸಿ ಹರಕೆ ತೀರಿಸಿದ್ದಾರೆ. ಕಲಘಟಗಿ ತಾಲೂಕಿನ ಜಿ ಬಸವನಕೊಪ್ಪ ಗ್ರಾಮದ ಯುವಕರೇ ಸಾಧನೆ ಮಾಡಿದವರು.

ಹರಕೆಯಂತೆ ಗ್ರಾಮದ ಮಹಾಂತೇಶ್ ಹಾಗೂ ಗಂಗಪ್ಪ ಗಿರೆಪ್ಪಗೌಡ ಎಂಬ ಇಬ್ಬರು ಯುವಕರು ಯಲ್ಲಮ್ಮನಗುಡಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದರು.‌ ಇಬ್ಬರು ಯುವಕರು ಕೇವಲ 12 ಗಂಟೆಯಲ್ಲಿ ಗ್ರಾಮದಿಂದ ಯಲ್ಲಮ್ಮನ ಗುಡ್ಡ ತಲುಪಿ ವಾಪಸ್ ಗ್ರಾಮಕ್ಕೆ ಆಗಮಿಸಿ ಸಾಧನೆ ಮಾಡಿದ್ದಾರೆ. 11 ಜನ ಯುವಕರಲ್ಲಿ ಮಹಾಂತೇಶ್ ಹಾಗೂ ಗಂಗಪ್ಪ ಗಿರೆಪ್ಪಗೌಡ ಇಬ್ಬರು 12 ಗಂಟೆಯಲ್ಲಿ ದರ್ಶನ ಮುಗಿಸಿ ವಾಪಸ್ ಮರಳಿದ್ದಾರೆ.

6 ಗಂಟೆಗೆ ಪಾದಯಾತ್ರೆ ಆರಂಭಿಸಿ ಯಲ್ಲಮ್ಮನ ದರ್ಶನ ಪಡೆದು ಸಂಜೆ ಆರು ಗಂಟೆಗೆ ವಾಪಸ್ ಬರಬೇಕು ಅನ್ನೋ ಷರತ್ತು ಹಾಕಲಾಗಿತ್ತು. ಷರತ್ತಿನಂತೆ 11 ಜನ ಯುವಕರಲ್ಲಿ ಇಬ್ಬರು ಯುವಕರು ಯಲ್ಲಮ್ಮನ ದರ್ಶನ ಪಡೆದು ಹರಕೆ ತೀರಿಸಿ ವಾಪಸ್ ಪಾದಯಾತ್ರೆ ಮೂಲಕವೇ ಗ್ರಾಮಕ್ಕೆ ಆಗಮಿಸಿದ ಮಹಾಂತೇಶ ಹಾಗೂ ಗಂಗಪ್ಪ ಅವರಿಗೆ ಗ್ರಾಮಸ್ಥರಿಗೆ ಸನ್ಮಾನ ಮಾಡಿದರು.

ಯಾರೆಲ್ಲಾ ಅರಿಶಿನ ಹಾಲನ್ನು ಕುಡಿಯಬಾರದು..?

7 ಮಂತ್ರಿ ಕೊಟ್ಟಿದ್ದೇವೆ, ಇನ್ನೆಷ್ಟು ಬೇಕು? ಸಿಎಂ ಸ್ಥಾನ ಬೇಕಾ? ಶಾಮನೂರು ವಿರುದ್ಧ ಹಳ್ಳಿಹಕ್ಕಿ ಗುಟುರು!

ಗೋವಾದ ಮಾಪುಸಾದಲ್ಲಿ ಶಾಪಿಂಗ್ ಅನುಭವ ಹೇಗಿರತ್ತೆ ಗೊತ್ತಾ..? ಇಲ್ಲಿದೆ ನೋಡಿ ವೀಡಿಯೋ..

- Advertisement -

Latest Posts

Don't Miss