Sunday, December 22, 2024

Latest Posts

ಕಾಗೋಡು ತಿಮ್ಮಪ್ಪರನ್ನು ಭೇಟಿಯಾದ ಕುಮಾರ್ ಬಂಗಾರಪ್ಪ: ಕಾಂಗ್ರೆಸ್ ಸೇರುವ ಸೂಚನೆಯೇ..?

- Advertisement -

Shivamogga News: ಶಿವಮೊಗ್ಗ: ಸೊರಬ ಕ್ಷೇತ್ರದಲ್ಲಿ ಸ್ವಂತ ಸಹೋದರನ ವಿರುದ್ಧ ಚುನಾವಣೆಯಲ್ಲಿ ಸೋಲುಂಡಿದ್ದ ಕುಮಾರ್ ಬಂಗಾರಪ್ಪ, ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪರನ್ನು ಭೇಟಿಯಾಗಿದ್ದಾರೆ. ಹೀಗಾಗಿ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ, ಇಬ್ಬರೂ ಭೇಟಿಯಾಗಿ, ಕುಳಿತು ಮಾತನಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ. ಕುಮಾರ್ ಬಂಗಾರಪ್ಪ, ಮೊನ್ನೆ ನಡೆದ ಎಲೆಕ್ಷನ್‌ನಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಆದರೆ ಮಧು ಬಂಗಾರಪ್ಪ ವಿರುದ್ಧ ಹೀನಾಯ ಸೋಲು ಕಂಡರು. ಇದೀಗ ಮತ್ತೆ ಕಾಂಗ್ರೆಸ್‌ಗೆ ಬರಲು ಕುಮಾರ್ ಬಂಗಾರಪ್ಪ ಯೋಚಿಸಿರಬಹುದು ಎಂದು ಅಂದಾಜಿಸಲಾಗಿದೆ.

ಲೋಕಸಭಾ ಎಲೆಕ್ಷನ್‌ಗೆ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಓರ್ವ ಉತ್ತಮ ಅಭ್ಯರ್ಥಿಯ ಅವಶ್ಯಕತೆ ಇದ್ದು, ಕುಮಾರ್ ಬಂಗಾರಪ್ಪ ಹೆಸರು ಮುನ್ನಲೆಗೆ ಬಂದಿದೆ. ಹೀಗಾಗಿ ಕಾಂಗ್ರೆಸ್‌ಗೆ ಬರಲಿರುವ ಕುಮಾರ್, ಲೋಕಸಭಾ ಚುನಾವಣೆಗೆ ನಿಲ್ಲುತ್ತಾರೆಂಬ ಸುದ್ದಿ ಇದೆ.

ಬಸ್‌ನಲ್ಲಿ ಸೀಟ್‌ಗಾಗಿ ಕಿತ್ತಾಡಿದ ಮಹಿಳೆಯರು: ಜಡೆ ಜಗಳಕ್ಕೆ ಸರ್ಕಾರದ ಬಳಿ ಪರಿಹಾರ ಕೇಳಿದ ನೆಟ್ಟಿಗರು..

‘ನೀವು ಮಂತ್ರಿಯಾಗಿದ್ದವರು, ಗಂಭೀರವಾಗಿರಿ. ರಾಜ್ಯದ ಮರ್ಯಾದೆ ತೆಗಿಬೇಡಿ’

ಡಿಕೆಶಿ ಕೊಟ್ಟ ಟಾಸ್ಕ್‌ ಪೂರೈಸುವಲ್ಲಿ ವಿಫಲರಾದ ಜಗದೀಶ್ ಶೆಟ್ಟರ್..

- Advertisement -

Latest Posts

Don't Miss