Mandya News: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಪುಂಡತನ ತೋರಿರುವ ಎಂಇಎಸ್ ಪುಂಡರ ವಿರುದ್ದ ಮಂಡ್ಯದಲ್ಲಿ ಸಚಿವ ಎನ್. ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಭಾಷೆ, ಜನ ರಕ್ಷಣೆಗೆ ಸೂಕ್ತ ಕ್ರಮ ಕೈಗ“ಳ್ಳಲಾಗುತ್ತದೆ. ಭಾಷೆ ಮೇಲೆ ಆಕ್ರಮಣ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ನೆಲ, ಜಲ, ಭಾಷೆ ಮೇಲೆ ಈ ರೀತಿ ದಬ್ಬಾಳಿಕೆ ನಡೆದರೆ, ಇದಕ್ಕೆ ತಿಲಾಂಜಲಿ ಹೇಳಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರ ಇದೆ. ಕೇಂದ್ರ ಸರ್ಕಾರ ಆ ರಾಜ್ಯಗಳನ್ನ ಕರೆದು ಮಾತನಾಡಬೇಕು.
ಭಾಷೆ, ನೆಲ,ಜಲ, ಪರಿಸ್ಥಿತಿ ನೋಡಿ ತೀರ್ಮಾನ ತೆಗೆದುಕೊಂಡರೆ ಮಾತ್ರ ಸರಿಯಾಗುತ್ತೆ. ರಾಜಕೀಯ ಶಕ್ತಿಯನ್ನ ಒಳಗೊಂಡ ಕೇಂದ್ರ ಸರ್ಕಾರ ಸೂಕ್ತ ನಿರ್ದೇಶನ ಕೊಡದ ಹಿನ್ನಲೆ. ಈ ರೀತಿಯ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತೆ. ನಮ್ಮ ಕನ್ನಡಿಗರ ಕಾಪಾಡಲು ನಮ್ಮ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಅತಿಯಾದ ಕಠಿಣ ಕ್ರಮ ಕೈಗೊಳ್ಳಲಬಹುದು. ಮಹಾರಾಷ್ಟ್ರದಲ್ಲೂ ಕನ್ನಡಿಗರಿದ್ದಾರೆ, ಮಹಾರಾಷ್ಟ್ರ ಸಹಕಾರ ನಮಗೂ ಬೇಕು, ನಮ್ಮ ಸಹಕಾರ ಅವರಿಗೂ ಬೇಕು ಎಂದು ಸಚಿವರು ಹೇಳಿದ್ದಾರೆ.
ಎಲ್ಲವನ್ನು ಅವಲೋಕನಾ ಮಾಡಿ ನಮ್ಮ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತೆ. ಅನೇಕ ಬಾರಿ ನಿರ್ದೇಶನ ಕೊಟ್ಟು ಕ್ರಮ ಕೈಗೊಂಡಿದೆ. ಇದನ್ನೆಲ್ಲಾ ತಡೆಯುವ ಅಧಿಕಾರ ಕೇಂದ್ರಕ್ಕೆ ಮಾತ್ರ ತಮಿಳುನಾಡು ಸಮಸ್ಯೆ ಸಮಸ್ಯೆ ನೇ ಅಲ್ಲ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಪಿಲ್ ಸಲ್ಲಿಸಿದ್ರೆ ಒಂದು ದಿನದಲ್ಲಿ ಸರಿಹೋಗುತ್ತೆ. ನೀರು ಇದ್ದಾಗ ಬಿಡ್ತೇವೆ, ಇಲ್ಲ ಅಂದಾಗ ಮಾತ್ರ ಸಮಸ್ಯೆ ಅಷ್ಟೆ. ರಾಜಕೀಯ ಹಿತ ಶಕ್ತಿ ಮೇಲೆ ಈ ರೀತಿ ನಡೆಯುತ್ತೆ. ನಮ್ಮ ಭಾಷೆ, ಜನ ರಕ್ಷಣೆಗೆ ಸೂಕ್ತ ಕ್ರಮ ಕೈಗ“ಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.
ಪುಟ್ಟರಾಜು ನಡುವಿನ ಹಳೆ ಸ್ನೇಹ ನೆನೆದ ಸಚಿವ ಚಲುವರಾಯಸ್ವಾಮಿ
ಇನ್ನು ಇದೇ ವೇಳೆ ಪುಟ್ಟರಾಜು ನಡುವಿನ ಹಳೆ ಸ್ನೇಹ ನೆನೆದ ಸಚಿವ ಚಲುವರಾಯಸ್ವಾಮಿ, ಪುಟ್ಟರಾಜು ಸೋಲಿಗೆ ನಾನು ಕಾರಣ ಇದ್ದೇನೆ. ಜೆಡಿಎಸ್ ನವರು ಎಷ್ಟು ಜನ ಕಾರ್ಯಕರ್ತರಿಗೆ ಬೆಂಬಲ ಕೊಟ್ಟಿದ್ದಾರೆ.? ಸ್ಥಳೀಯ ಚುನಾವಣೆಯಲ್ಲಿ ಎಷ್ಟು ಜನರನ್ನ ಗೆಲ್ಲಿಸಿದ್ದಾರೆ? ಒಂದು ಉದಾಹರಣೆ ತೋರಿಸಲಿ ಎಂದಿದ್ದಾರೆ.
ಅಲ್ಲದೇ, ಪಾಪಾ ಪುಟ್ಟರಾಜು ಒಬ್ಬ ಓಡಾಡುತ್ತಾರೆ. ಅವರ ಮಾತನ್ನ ಯಾರು ಕೇಳ್ತಿಲ್ಲ. ಪುಟ್ಟರಾಜು ನನ್ನ ಸ್ನೇಹಿತ ರಾಜಕೀಯವಾಗಿ ವಿರೋಧ ಅಷ್ಟೆ. ನನ್ನ ಕರ್ತವ್ಯ ನಾನು ಮಾಡ್ತಿದ್ದೇನೆ ಸ್ನೇಹ ಅಂತ ನೋಡಲ್ಲ. ಕಳೆದ ಬಾರಿ ರೈತ ಸಂಘದ ಜೊತೆ ನಿಂತು ಅವರ ಸೋಲಿಗೆ ನಾನು ಕಾರಣ ಇದ್ದೇವೆ. ಪುಟ್ಟರಾಜು ಒಬ್ಬ ಮಾತ್ರ ಡಿಸಿಸಿ ಬ್ಯಾಂಕ್ ನ ಡೈರೆಕ್ಟರನ್ನ ಮಾಡ್ತಾನೆ. ಉಳಿದವರಿಗೆ ಯಾಕೆ ಮಾಡಕ್ಕಾಗಲ್ಲ? ಎಂದು ಸಚಿವರು ಪ್ರಶ್ನಿಸಿದ್ದಾರೆ.
ಪುಟ್ಟರಾಜ ರಾಜಕೀಯವಾಗಿ ವೈರಿ ಅಷ್ಟೆ. ಜೆಡಿಎನ್ ಲೀಡರ್ ಗಳಿಗೆ ಕಾರ್ಯಕರ್ತರ ಮೇಲೆ ಬದ್ದತೆ ಇದೆ?ಸ್ಥಳೀಯವಾಗಿ ಅವಕಾಶ ಕೊಡ್ಸಿದ್ದಾರಾ? ನನಗೆ ಕಣ್ಣಲ್ಲಿ ನೀರು ಬರುತ್ತೆ. ನಾವು ಬಹಳ ಹೋರಾಟ ಮಾಡಿ ಶಾಸಕರಾಗ್ತೇವೆ, ಅಭಿವೃದ್ಧಿ ಮಾಡ್ತೇವೆ. ಮಂಡ್ಯ ಜಿಲ್ಲೆಯ ಜಿಲ್ಲೆಯ ಜನಕ್ಕೆ ನಮ್ಮ ಕೆಲಸ ಕಾಣ್ತಿಲ್ಲ, ನನ್ನ ರಾಜಕಾರಣ ಇರುವವರಿಗೆ ನನ್ನ ಕಾರ್ಯಕರ್ತರ ಪರ ಇರ್ತೇನೆ. ಗೌರವವಾಗಿ ವಿರೋಧ ಪಕ್ಷದಲ್ಲಿ ಇದ್ದು ಸಲಹೆ ಕೊಡಲಿ ಎಂದು ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಮೈಶುಗರ್ ಶಾಲೆಯ ಶಿಕ್ಷಕರಿಗೆ ಸಂಬಳ ಕೊಡಲು ಕುಮಾರಸ್ವಾಮಿ ಹಣ ಕೊಟ್ಟಿಲ್ಲ
ಇನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿರುವ ಸಚಿವರು, ಕುಮಾರಸ್ವಾಮಿ ಮಾತು ಕೊಡಬೇಕಾದ್ರೆ ಮಾಡುವಂತಹದಕ್ಕೆ ಮಾತಕೋಡಬೇಕು. ಕುಮಾರಸ್ವಾಮಿ ಅವರು ಮಾತಿಗೆ ಜನರು ಮರಳಾಗ್ತಾರೆ. ಮೈಶುಗರ್ ಶಾಲೆಗೆ ಕುಮಾರಸ್ವಾಮಿ 25 ಕೋಟಿ ಕೊಡ್ತೇನೆ ಅಂದ್ರು? ಖಾಸಗೀಕರಣ ಬೇಡ ಅಂದ್ರು ಇಲ್ಲಿಯವರೆಗೆ ಕೊಟ್ಟಿಲ್ಲ ಎಂದು ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
ಸೋಮವಾರ ಸಿಬ್ಬಂದಿಗಳಿಗೆ ಸಂಬಳ ಕೊಡಲು ಸೂಚನೆ ಕೊಟ್ಟಿದ್ದೇನೆ. ಕುಮಾರಸ್ವಾಮಿ ಮಾತು ಕೊಡಬೇಕಾದ್ರೆ ಮಾಡುವಂತಹದಕ್ಕೆ ಮಾತಕೋಡಬೇಕು. ಮಂತ್ರಿ ಜೊತೆಗೆ ಮಂಡ್ಯ ಎಂಪಿ ಇದ್ದಾರೆ. ಮಂಡ್ಯಕ್ಕೆ ಎನಾದ್ರು ಮಾಡೋದಿದ್ರೆ CSR ಫಂಡ್ ಒಂದೇ ಸಾಧನೆ ಅಲ್ಲ. ರಾಜ್ಯ ಸರ್ಕಾರ ಕೂಡ ಬೇಕಾದಷ್ಟು ಶಾಲೆಗೆ CSR ಪಫಂಡ್ ಕೊಡ್ತಿದೆ. ಸೌಜನ್ಯದಿಂದ ಮಾತನಾಡುವುದನ್ನ ಕಲಿಯಿರಿ. ಭಾಷೆ ಬಳಕೆಯಲ್ಲಿ ಗೌರವಯುತವಾಗಿರಲಿ.
ಮೈಶುಗರ್ ಶಾಲೆಯ ಶಿಕ್ಷಕರಿಗೆ ಸಂಬಳ ಕೊಡಲು ಕುಮಾರಸ್ವಾಮಿ ಹಣ ಕೊಟ್ಟಿಲ್ಲ. ಶಿಕ್ಷಕರ ಹಿತದೃಷ್ಟಿಯಿಂದ ಸಂಬಳ ಕೊಡಲು ಸೋಮವಾರ ಕೊಡ್ತೇವೆ. ಕುಮಾರಸ್ವಾಮಿ ಅವರು ಮಾತಿಗೆ ಜನರು ಮರಳಾಗ್ತಾರೆ. ನರೇಂದ್ರ ಸ್ವಾಮಿ CRS ಫಂಡ್ 2 ಕೋಟಿ ಕೊಟ್ಟಿದ್ದಾರೆ. CSR ಫಂಡ್ ನಲ್ಲಿ ನಮ್ಮ ಸಾಧನೆ ಅಲ್ಲ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

