Mahabharat: ಭಾರತದ ಮಹಾಕಾವ್ಯ ಎಂದರೆ ರಾಮಾಯಣ ಮತ್ತು ಮಹಾಭಾರತ. ಈ ಮಹಾಕಾವ್ಯಗಳಲ್ಲಿ ನಾವಿಂದು ಮಹಾಭಾರತ ಯುದ್ಧದ ವೇಳೆ ನಡೆದಿದ್ದ ಹಲವು ಕುತೂಹಲಕಾರಿ ಘಟನೆಗಳ ಬಗ್ಗೆ ಹೇಳಲಿದ್ದೇವೆ.
ಜಾತಕದ ದಿಕ್ಕೇ ಬದಲಾಯಿತು..
ಮಹಾಭಾರತ ಯುದ್ಧ ಶುರುವಾಗುವ ಮುನ್ನ ಕೌರವರ ಕಡೆಯ ಹಿರಿಯರೆಲ್ಲ ಸೇರಿ, ಜ್ಯೋತಿಷಿಗಳ ಬಳಿ ದುರ್ಯೋಧನನ ಜಾತಕ ತೋರಿಸಿ, ಮಹಾಭಾರತ ಯುದ್ಧದಲ್ಲಿ ದುರ್ಯೋಧನ ಗೆಲ್ಲುವನೇ ಎಂದು ಕೇಳಿದರಂತೆ. ಅದಕ್ಕೆ ಉತ್ತರಿಸಿದ ಜ್ಯೋತಿಷಿಗಳು, ದುರ್ಯೋಧನನಿಗೆ ಅತ್ಯುತ್ತಮವಾದ ಯೋಗಗಳಿದೆ. ನಕ್ಷತ್ರಗಳೆಲ್ಲ ಉಚ್ಛ ಸ್ಥಿತಿಯಲ್ಲಿದೆ. ಈ ಬಾರಿ ಗೆಲುವು ದುರ್ಯೋಧನನಿಗೆ ಎಂದು ಸ್ಪಷ್ಟವಾಗಿ ಹೇಳಿದ್ದರಂತೆ.
ಆದರೆ ಯುದ್ಧದ ಮಧ್ಯಭಾಗದಲ್ಲಿ ಎಲ್ಲವೂ ಏರುಪೇರಾಗಿತ್ತು. ಕೌರವರ ಸೈನ್ಯ ಅರ್ಧಕ್ಕರ್ಧ ನಾಶವಾಗಿತ್ತು. ದುರ್ಯೋಧನನ ಸೋಲಿನ ಭೀತಿಯಲ್ಲಿದ್ದ. ಈ ವೇಳೆ ಮತ್ತೆ ಕೌರವರ ಕಡೆಯವರು ಜ್ಯೋತಿಷಿಗಳ ಬಳಿ ಹೋಗಿ, ನೀವು ದುರ್ಯೋಧನ ಗೆಲ್ಲುತ್ತಾನೆ ಎಂದು ಹೇಳಿದ್ದಿರಿ. ಆದರೆ ಮಹಾಭಾರತ ಯುದ್ಧದಲ್ಲಿ ಕೌರವರ ಅರ್ಧ ಸೈನ್ಯವೇ ನಾಶವಾಗಿದೆ. ಇದು ಹೇಗೆ ಸಾಧ್ಯವೆಂದು ಕೇಳುತ್ತಾರೆ.
ಆಗ ಉತ್ತರಿಸಿದ ಜ್ಯೋತಿಷಿ, ನಾನು ಮತ್ತೆ ದುರ್ಯೋಧನನ ಜಾತಕ ಪರೀಕ್ಷಿಸಿದೆ. ಈ ಹಿಂದೆ ಇದ್ದ ಗ್ರಹಗತಿಗಳು ಈಗ ಬದಲಾಗಿದೆ. ಉಚ್ಛ ಸ್ಥಿತಿಯಲ್ಲಿದ್ದ ನಕ್ಷತ್ರಗಳು, ಯೋಗಗಳು ತುಚ್ಛ ಸ್ಥಿತಿಗೆ ಬಂದು ನಿಂತಿದೆ. ಇದಕ್ಕೆ ಕಾರಣ, ಪಾಂಡವರಲ್ಲಿ ಗ್ರಹಗತಿಗಳನ್ನು ಬದಲಾಯಿಸುವ ಯಾವುದೋ ಶಕ್ತಿ ಇದೆ ಎಂದರಂತೆ.
ಆ ಶಕ್ತಿ ಬೇರೆ ಯಾರೂ ಅಲ್ಲ ಸಾಕ್ಷಾತ್ ಶ್ರೀಕೃಷ್ಣ. ನಮ್ಮ ಜಾತಕದಲ್ಲಿ ಎಂಥದ್ದೇ ಸಮಸ್ಯೆ ಇರಲಿ. ನಕ್ಷತ್ರಗಳು, ಗ್ರಹಗತಿ, ಯೋಗಗಳು ಯಾವುದೇ ಸ್ಥಿತಿಯಲ್ಲಿರಲಿ. ನಾವು ಸನ್ಮಾರ್ಗದಲ್ಲಿ ನಡೆದರೆ, ಕಾಪಾಡಲು ದೇವರು ಸದಾ ಸಿದ್ಧನಿರುತ್ತಾನೆ. ಅದೇ ರೀತಿ ದುರ್ಮಾರ್ಗದಲ್ಲಿ ನಡೆದ ದುರ್ಯೋಧನನ ಜಾತಕವನ್ನೇ ಶ್ರೀಕೃಷ್ಣ ಬದಲಾಯಿಸಿದ್ದ. ಮತ್ತು ಸನ್ಮಾರ್ಗದಲ್ಲಿ, ಅವರ ಅನುಪಸ್ಥಿತಿಯಲ್ಲಿ ಯುದ್ಧ ಮಾಡುತ್ತಿದ್ದ ಪಾಂಡವರ ರಕ್ಷಣೆ ಮಾಡಿದ. ಇನ್ನು ಮುಂದಿನ ಭಾಗದಲ್ಲಿ ನಾವು ಧೃತರಾಷ್ಟ್ರನಿಗೆ ತನ್ನ 100 ಮಕ್ಕಳ ಸಾವನ್ನು ಕಾಣುವ ಸ್ಥಿತಿ ಬಂದಿದ್ದೇಕೆ..? ಅನ್ನೋ ಬಗ್ಗೆ ತಿಳಿಯೋಣ.

