Sunday, December 22, 2024

Latest Posts

‘ಜನರೂ ಕೂಡಾ ಕಾಂಗ್ರೆಸ್ಸಿಗರ ನುಡಿ ಮುತ್ತುಗಳನ್ನು ಕೇಳ್ತಾ ಇದ್ದಾರೆ’

- Advertisement -

Bengaluru Political News: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ರಾಜ್ಯಕ್ಕೆ ಬಂದಿರುವ ಸರ್ಕಾರದ ಗ್ಯಾರಂಟಿ ಯೋಜನೆಗಳ‌ ನಡುವೆಯೂ ಬಂದಿರುವ ಸಂಕಷ್ಟಗಳ ನಡುವೆ ನಾಡದೇವತೆ ಜನರನ್ನು ಕಾಪಾಡಲಿ ಎಂದಿದ್ದಾರೆ.

ಅಲ್ಲದೇ, ನಾನೇನು ಮಹತ್ವದ ದಾಖಲೆಗಳನ್ನು ಇಂದು ಬಿಡುಗಡೆ ಮಾಡಲ್ಲ. ಕೆಲವು ಮಾಹಿತಿ ಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲಿದ್ದೇನೆ. ಕಾಂಗ್ರೆಸ್ ಸರ್ಕಾರ ಪದೇ ಪದೇ ನಾಡಿನ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಾವು ಮಾಡಿದ್ದೇ ಜನತೆಗೆ ಒಪ್ಪಿಗೆ ಇದೆ ಅಂತಾ ಹೇಳ್ತಿದಾರೆ. ಹಿಂದೆ ನಿರಂತರವಾಗಿ 40 ಪರ್ಸೆಂಟ್ ಅಂತ ಡಂಗುರ ಹೊಡೆದು ಅಧಿಕಾರಕ್ಕೆ ಬಂದಿದಾರೆ. ಈ ಸರ್ಕಾರದ ಕಮೀಷನ್, ಪರ್ಸೆಂಟೇಜ್ ಬಗ್ಗೆ ಜನ ಗಮನಿಸ್ತಾ ಇದಾರೆ. ನಾಡಿನ ಸಂಪತ್ತು ಹೇಗೆ ಲೂಟಿ ಆಗ್ತಾ ಇದೆ ಅಂತ ಜನರು ಗಮನಿಸ್ತಾ ಇದಾರೆ. ಎಲ್ಲ ಕಡೆ ಭ್ರಷ್ಟಾಚಾರ ದ ಬಗ್ಗೆಯೇ ಚರ್ಚೆ ನಡೀತಿದೆ. ಐದೇ ತಿಂಗಳಲ್ಲಿ ಈ ಸತ್ಯ ಹರಿಶ್ಚಂದ್ರ ರ ಸರ್ಕಾರ  ಹೇಗೆ ನಡೀತಿದೆ ಅಂತಾ ನೀವೂ ತೋರಿಸ್ತಾ ಇದೀರಾ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ ಅಂತಾ ಹೇಳ್ತಾ ಇದಾರೆ. ಒಂದು ಕಡೆ ನೀರಿನ ಕೊರತೆ, ಅಂತರ್ಜಲ ಕುಸಿತ ಒಂದು ಕಡೆ, ವಿದ್ಯುತ್ ಕೊರತೆ ಒಂದು ಕಡೆ, ರೈತರ ಸಂಕಷ್ಟ ಒಂದು ಕಡೆ. ಪದೇ ಪದೇ ಉಪ ಮುಖ್ಯಮಂತ್ರಿ ನುಡಿ ಮುತ್ತುಗಳನ್ನು ಕೇಳ್ತಾ ಇದೀವಿ ಅಂತಾರೆ. ಜನರೂ ಕೂಡಾ ಅವರ ನುಡಿ ಮುತ್ತುಗಳು ಕೇಳ್ತಾ ಇದಾರೆ ಎಂದು ಕಾಂಗ್ರೆಸ್‌ಗೆ ಹೆಚ್ಡಿಕೆ ಟಾಂಗ್ ನೀಡಿದ್ದಾರೆ.

ಬರಗಾಲ ಅಂತ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡಿ. ಕೇಂದ್ರದ ಅನುದಾನಕ್ಕೆ ಕಾಯುತ್ತಿದ್ದೇವೆ ಅಂತಿದೀರ. ಪತ್ರ ಬರೆದು ಸುಮ್ನೆ ಕುಳಿತರೆ ಆಗುತ್ತಾ..? ಅಲ್ಲಿ ಹೋಗಿ ಕೇಳಬೇಕು. ಹೊಸ ಕಾರುಗಳನ್ನು ಬೇರೆ ತಗೊಂಡಿದೀರಾ. ನಿಮ್ಮ ದೆಹಲಿ ಪ್ರತಿನಿಧಿಗಳಿಗೂ ಹೊಸ ಕಾರು ಕೊಟ್ಟಿದ್ದೀರೋ ಏನೋ..? ಅವರು ಹೋಗಿ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಅಲ್ವಾ.? ಎಂದು ಕಾಂಗ್ರೆಸ್ಸಿಗರಿಗೆ ಹೆಚ್ಡಿಕೆ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಮುನಿಯಪ್ಪ ಒಂದು ಹೇಳಿಕೆ ಕೊಟ್ಟಿದಾರೆ. ಆಂದ್ರ ತೆಲಂಗಾಣದಲ್ಲಿ ಕೂಡಾ ಅಕ್ಕಿ ಬೆಲೆ ಜಾಸ್ತಿ ಮಾಡಿದಾರೆ. ಹಾಗಾಗಿ 170  ರೂಪಾಯಿ ಜನತೆಗೆ ಕೊಡ್ತೀವಿ ಅಂತಾ ಹೇಳಿದಾರೆ. ಎಲ್ಲಾ ಕಡೆ ಅಕ್ಕಿ ಕೊರತೆ ಇದೆ, ಎಲ್ಲಿಂದ ಕೊಡ್ತಾರೆ.. ಇಂತಹುದಕ್ಕೆ ಮುಂದಿನ ತಯಾರಿ ಏನು..? ಪ್ರತಿದಿನ ಇಬ್ಬರು ಕೈ ಎತ್ತಿ ಪೋಸ್ ಕೊಡ್ತಾ ಇದಾರೆ. ನಮ್ಮನ್ನೂ ಕೈ ಎತ್ತಿಸಿ, ಬಫೂನ್ ಮಾಡಿ ಹೋದರು. ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಸಿಎಂ ಮೀಟಿಂಗ್ ಮಾಡಿದ್ರು . 15000 ಮೆಗಾ ವ್ಯಾಟ್ ಕೊರತೆ ಇದೆ, ಖರೀದಿ ಮಾಡ್ತೀವಿ ಅಂತಾ ಹೇಳಿದ್ರು. ಹಿಂದಿನ ಸರ್ಕಾರದ ಪಾಪದ ಫಲ ಅಂತಾ ಹೇಳಿದ್ರು. ಅವರದ್ದೇನೋ ಪಾಪದ ಫಲ. ನೀವು ಪುಣ್ಯ ಮಾಡಿದ್ದೀರಲ್ಲ. ನಿಮ್ಮ ಪುಣ್ಯದ ಫಲ ಜನತೆಗೆ ಕೊಡಬೇಕಲ್ಲಾ‌?

ದೋಷಯುಕ್ತ ಇವಿ ವಾಹನ ಹೊಸ ಬೈಕ್‌ ನೀಡಲು ಟಿವಿಎಸ್‌ಗೆ ಗ್ರಾಹಕರ ಆಯೋಗ ಆದೇಶ

ಲಕ್ಷ ಲಕ್ಷ ಲಂಚ ಸ್ವೀಕರಿಸೋ ವೇಳೆ ಲೋಕಾ ಬಲೆಗೆ ಬಿದ್ದ ಕೃಷಿ ಅಧಿಕಾರಿ

ಮಾದರಿಯಾದ ಸಚಿವ ಸಂತೋಷ್ ಲಾಡ್ ನಡೆ: ಹೊಸ ಸರ್ಕಾರಿ ಕಾರು ಬೇಡ ಎಂದ ಮಂತ್ರಿ

- Advertisement -

Latest Posts

Don't Miss