Sunday, December 22, 2024

Latest Posts

‘ಆಸ್ಟ್ರೇಲಿಯಾಗೆ ಬೆಂಬಲ ಕೊಡಲು ಹೋಗಿದ್ರಾ,..? ಪಾಕಿಸ್ತಾನಕ್ಕೆ ಬೆಂಬಲ ಕೊಡಲು ಹೋಗಿದ್ರಾ..?’

- Advertisement -

Bengaluru Political News: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜೂನ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವಾಗ, ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಒಂದಷ್ಟು ಮಾಹಿತಿ ಕೊಡಲು ಮುಂದಾಗಿದ್ದೆ, ಆಗ ಸರ್ಕಾರ ಮಾತಾಡಲು ಅವಕಾಶ ಕೊಡಲಿಲ್ಲ. ಅವತ್ತೇ ನಾನು ಸರ್ಕಾರಕ್ಕೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಹೇಳಲು ಮುಂದಾಗಿದ್ದೆ. ಇಂತಹ ಪರಿಸ್ಥಿತಿಯಲ್ಲಿ ಕೂಡಾ ಕಂದಾಯ ಸಂಗ್ರಹಣೆ ಕಡಿಮೆ ಆಗಿಲ್ಲ. ಸರ್ಕಾರದಲ್ಲಿ ಹಣ ಕೊರತೆ ಆಗಿಲ್ಲ. 79000 ಕೋಟಿ ಸಂಗ್ರಹ ಆಗಿದೆ. ನೀವು ಐದು ಗ್ಯಾರಂಟಿ ಗಳ ಹೆಸರಿನಲ್ಲಿ ಹಣ ಇಲ್ಕಾ ಎಂದು ಹೇಳುತ್ತಿದ್ದೀರಾ..? ಎಂದು ಹೆಚ್ಡಿಕೆ ಕಾಂಗ್ರೆಸ್‌ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ನೀರಿನ ಕೊರತೆ ಇದೆ. ನೀವು ಕರೆಂಟ್ ಕೊಟ್ರೆ ಇರತಕ್ಕಂತಹಾ ಬೆಳೆ ಉಳಿಸಿಕೊಳ್ಳಲು ಆಗುತ್ತೆ. ಸೋರಿಕೆ ಕಂಡು ಹಿಡಿದು ತಡೆಗಟ್ಟಿ ಅಂತಾ ಚೀಫ್ ಇಂಜಿನಿಯರ್ ಗಳಿಗೆ ಸಿಎಂ ಹೇಳಿದ್ದಾರೆ.  ಇದು ನಲವತ್ತೈವತ್ತು ವರ್ಷಗಳಿಂದ ಆಗುತ್ತಲೇ ಇದೆ. ಸೋರಿಕೆ ಇವತ್ತೇನೂ ಹೊಸದಾಗಿ ಆಗ್ತಿಲ್ಲ. ಕೃಷಿ ಪಂಪ್ ಸೆಟ್ ಗಳಿಗೆ ಒಂದು ತಾಸು ಕರೆಂಟ್ ಇಲ್ಲ ಅಂತಾ ವರದಿಗಳು ಇವೆ ಬಟ್ಟೆ ಹರಿದು ಕೊಂಡು ಓಡಾಡ್ತಾರೆ ಅಂತೆಲ್ಲಾ ಹೇಳಿಕೆ ಕೊಡ್ತಾರೆ. ಇನ್ನೂ ಸ್ವಲ್ಪ ದಿನ ನೋಡೋಣ ಯಾರು ಬಟ್ಟೆ ಹರಿದುಕೊಂಡು ಓಡಾಡ್ತಾರೆ ಅಂತಾ ಎಂದು ಹೆಚ್ಡಿಕೆ ಕಾಂಗ್ರೆಸ್ ವಿರುದ್ಧ ಚಾಲೆಂಜ್‌ ಹಾಕಿದ್ದಾರೆ.

ಬ್ಲೂ ಎನರ್ಜಿ ಉತ್ಪಾದನೆ ಮಾಡಲು ಒಂದು ಟೀಂ ಅನ್ನಾ ಜಾರ್ಜ್ ಕರೆಸಿಕೊಂಡಿದ್ದಾರೆ. ಎಲ್ಲಾ ಜಡೆ ವಿದ್ಯುತ್ ಕೊರತೆ ಇದೆ. ಇಲ್ಲಿ ಮಜಾ ಮಾಡ್ಕೊಂಡು ಕೂತಿದಾರೆ. ನಿನ್ನೆ ಕ್ರಿಕೆಟ್ ಮ್ಯಾಚ್ ನೋಡಲು ಹೋಗಿದಾರೆ. ನಿನ್ನೆ  ಆಸ್ಟ್ರೇಲಿಯಾಗೆ ಬೆಂಬಲ ಕೊಡಲು ಹೋಗಿದ್ರಾ,..? ಪಾಕಿಸ್ತಾನಕ್ಕೆ ಬೆಂಬಲ ಕೊಡಲು ಹೋಗಿದ್ರಾ..? ಭಾರತ ಟೀಂ ಆಡ್ತಾ ಇದ್ದಿದ್ರೆ, ಏನೋ ಭಾರತ ತಂಡಕ್ಕೆ ಬೆಂಬಲ ಕೊಡಲು ಹೋಗಿದ್ದಾರೆ ಅನ್ನಬಹುದಿತ್ತು. ಇಡೀ ಸಚಿವ ಸಂಪುಟದ ಸಹೋದ್ಯೋಗಿಗಳು ಹೋಗಿ ಕೂತಿದ್ದಾರೆ. ಎಂಟು ಗಂಟೆ ಕಾಲ ಹೋಗಿ ಮ್ಯಾಚ್ ನೋಡಲು ನಿಮಗೆ ಸಮಯ ಇದೆ. ಜನರ ಸಮಸ್ಯೆ ನೋಡಲು ಸಮಯ ಇಲ್ವಾ..? ಎಂದು ಕುಮಾರಸ್ವಾಮಿ ಕಾಂಗ್ರೆಸ್‌ ನಾಯಕರಿಗೆ ಖಡಕ್ ಆಗಿ ಪ್ರಶ್ನಿಸಿದ್ದಾರೆ.

‘ನಮ್ಮ ಲೆಕ್ಕಾಚಾರದ ಪ್ರಕಾರ 2024 ಕ್ಕೆ ಮೋದಿ ಸರ್ಕಾರ ದೇಶದಲ್ಲಿ ಇರಲ್ಲ’

ರೈತರ ಗೋಳು ಕೇಳುವರಾರು? ಕೈ ಕೊಟ್ಟ ಮಳೆರಾಯ: ನೀರಿಲ್ಲದೇ ಒಣಗಿದ ಬೆಳೆಗಳು

ಅಕ್ರಮ ಮರಳು ಫಿಲ್ಟರ್ ದಂಧೆ ಮೇಲೆ ಭೂ ಮತ್ತು ಗಣಿ ಇಲಾಖೆ ಕಡಕ್ ಅಧಿಕಾರಿ ಬಿಂದನಾ ಪಾಟೀಲ್ ದಾಳಿ

- Advertisement -

Latest Posts

Don't Miss