ನಾವು ನಮ್ಮ ಮನೆ ಸಂಸಾರ ಕುಟುಂಬ ಚೆನ್ನಾಗಿರಲೆಂದು ದೇವರಿಗೆ ಹಲವು ರೀತಿಯಲ್ಲಿ ಹರಕೆ ಕಟ್ಟಿಕೊಳ್ಳುತ್ತೇವೆ.ಅದು ನಮಗಾಗಿ ಹಾಗೂ ನಮ್ಮ ಕುಟುಂಬಕ್ಕಾಗಿ ಕಟ್ಟಿಕೊಳ್ಳುವ ಹರಕೆ ಆದರೆ ಇಲ್ಲಿರುವ ವ್ಯಕ್ತಿ ಮಾಜಿ ಮುಖ್ಯಮಂತ್ರಿ ಕು ಮಾರಸ್ವಾಮಿಯವರ ಪರವಾಗಿ ಹರಕೆಯನ್ನು ಕಟ್ಟಿಕೊಂಡಿದ್ದಾನೆ.
ಹೌದು ಸ್ನೇಹಿತರೆ ವಿಧಾನಸಭಾ ಚುನಾವಣೆ ಹತ್ತಿರದಲ್ಲಿದ್ದು ಈ ಭಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಚುನಾವಣೆಯಲ್ಲಿ ಬಹುಮತ ಸಾಧಿಸಬೇಕು ಕುಮಾರಸ್ವಾಮಿಯವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಅಜಯ್ ಎನ್ನುವ ಯುವಕ ಈ ರೀತಿ ಹರಕೆ ಕಟ್ಟಿಕೊಂಡು ತಿರುಪತಿ ತಿಮ್ಮಪ್ಪನ ಬೆಟ್ಟವನ್ನು ಹತ್ತುತಿದ್ದಾನೆ. ಹಾಗೂ ನಿಖಿಲ್ ಕುಮಾರಸ್ವಾಮಿಯವರು ರಾಮನಗರ ಕ್ಷೇತ್ರದಿಂದ ಸ್ಪರ್ದೆ ಮಾಡುತಿದ್ದು ಅವರು ಸಹ ರಾಮನಗರದಲ್ಲಿ ಗೆದ್ದು ಶಾಸಕರಾಗಬೇಕು . ಹಾಗೂ ಗುರುಮಿಠಕಲ್ ಕ್ಷೇತ್ರದಿಂದ ಶರಣಗೌಡ ಕಂದಕೂರ್ ಅವರು ಮತ್ತೊಮ್ಮೆ ಶಾಸಕರಾಗಬೇಕೆಂದು ಹರಕೆ ಹೊತ್ತುಕೊಂಡಿರುವ ಚಿತ್ರದುರ್ಗದ ಕುಮಾರಣ್ಣನ ಅಭಿಮಾನಿಯಾಗಿರುವ ಅಜಯ್ ಇನ್ನುವ ಯುವಕ ತಿರುಪತಿ ತಿಮ್ಮಪ್ಪನ ಬೆಟ್ಟ ಹತ್ತಿ ಹರಕೆ ತೀರಿಸಿದ್ದಾನೆ.