Thursday, January 16, 2025

Latest Posts

ಅರಳಿ ಮರವನ್ನ ಪೂಜಿಸಿದರೆ, ಶನಿದೋಷ ನಿವಾರಣೆಯಾಗಲು ಕಾರಣವೇನು..?

- Advertisement -

ಅರಳಿ ಮರಕ್ಕೆ ಹಿಂದೂ ಧರ್ಮದಲ್ಲಿ ಉನ್ನತ ಸ್ಥಾನ ನೀಡಲಾಗಿದೆ. ಇದರ ಪೂಜೆ ಮಾಡುವುದರಿಂದ ಏನು ಪ್ರಯೋಜನವಾಗುತ್ತದೆ..? ಇದರ ಪೂಜೆ ಹೇಗೆ ಮಾಡಬೇಕು..? ಯಾವ ದಿನ ಅರಳಿ ಮರದ ಪೂಜೆ ಮಾಡಬೇಕು ಅನ್ನೋ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಇಂದು ನಾವು ಅರಳಿ ಮರವನ್ನು ಪೂಜಿಸಿದರೆ, ಶನಿದೋಷ ನಿವಾರಣೆಯಾಗಲು ಕಾರಣವೇನು..? ಅದರ ಹಿಂದಿರುವ ಕಥೆ ಏನು ಅನ್ನೋ ಬಗ್ಗೆ ಹೇಳಲಿದ್ದೇವೆ.

ಅರಳಿ ಮರವನ್ನ ಹಿಂದಿಯಲ್ಲಿ ಪೀಪಲ್ ಎಂದು ಕರೆಯುತ್ತಾರೆ. ಓರ್ವ ಋಷಿಮುನಿ ಅರಳಿ ಮರದ ಕೆಳಗಡೆಯೇ ಜನಿಸಿದ್ದರು. ಹಾಗಾಗಿ ಅವರನ್ನು ಪಿಪ್ಲಾದ ಎಂದು ನಾಮಕರಣ ಮಾಡಲಾಯಿತು. ಆದರೆ ಪಿಪ್ಲಾದರು ಹುಟ್ಟಿದ ತಕ್ಷಣವೇ ಅವರ ತಾಯಿ ನಿಧನರಾದರು. ಯಾಕಂದ್ರೆ ಅವರಿಗೆ ಶನಿದೋಷವಿತ್ತು. ಪಿಪ್ಲಾದ ಮುನಿಗಳು ದೊಡ್ಡವರಾದ ಮೇಲೆ ಅವರಿಗೆ ಈ ವಿಷಯ ಗೊತ್ತಾಯಿತು. ಆಗ ಅವರು ಶನಿದೇವನಿಗೆ ತಾನು ಶಿಕ್ಷೆ ಕಡಲೇಬೇಕೆಂದು ಅವರು ನಿರ್ಧರಿಸಿದರು.

ಆಗ ಅವರು ಅರಳಿ ವೃಕ್ಷದ ಕೆಳಗೆ ಕುಳಿತು ತಪಸ್ಸು ಮಾಡಿದರು. ಅವರ ತಪಸ್ಸಿಗೆ ಮೆಚ್ಚಿದ ಬ್ರಹ್ಮ ಪ್ರತ್ಯಕ್ಷನಾದ. ನಿನಗೇನು ವರ ಬೇಕು ಎಂದು ಕೇಳಿದ. ಅದಕ್ಕೆ ಪಿಪ್ಲಾದರು, ತನಗೆ ಬ್ರಹ್ಮದಂಡ ಬೇಕೆಂದು ಕೇಳಿದರು. ಬ್ರಹ್ಮ ತನ್ನ ಬ್ರಹ್ಮದಂಡವನ್ನು ಪಿಪ್ಲಾದರಿಗೆ ಕೊಟ್ಟ. ಅದನ್ನ ತೆಗೆದುಕೊಂಡ ಮುನಿಗಳು, ಅರಳಿ ಮರದ ಮೇಲೆ ಕುಳಿತ, ಶನಿದೇವನ ಕಾಲಿಗೆ ಪೆಟ್ಟು ಕೊಟ್ಟರು.

ಇನ್ನೂ ಚೆನ್ನಾಗಿ ಬಾರಿಸಬೇಕು ಎನ್ನುವಷ್ಟರಲ್ಲಿ ಶಿವ ಬಂದು ಶನಿದೇವನನ್ನು ಬದುಕಿಸಿದ. ಅಲ್ಲದೇ, ಶನಿದೇವನಿಗೆ ಮುನಿಗಳಲ್ಲಿ ಕ್ಷಮೆ ಕೇಳಲು ಹೇಳಿದ. ಶಿವನ ಮಾತಿನಂತೆ, ಶನಿದೇವ, ಪಿಪ್ಲಾದರಲ್ಲಿ ಕ್ಷಮೆ ಕೇಳಿದ. ಅಲ್ಲದೇ ಇಂದಿನಿಂದ ಯಾರಿಗೆ ಶನಿದೋಷವಿದೆಯೋ, ಅವರು ಅರಳಿ ಮರದ ಕೆಳಗೆ ದೀಪ ಬೆಳಗಿ ಪೂಜೆ ಮಾಡುತ್ತಾರೋ, ಅವರಿಗೆ ಶನಿದೋಷದಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶಿವ ಹೇಳುತ್ತಾನೆ.

ಹಾಗಾಗಿ ಶನಿದೋಷವಿದ್ದವರು, ಶನಿವಾರದಂದು ಅರಳಿ ಮರಕ್ಕೆ ದೀಪ ಬೆಳಗಿ ಪ್ರದಕ್ಷಿಣೆ ಹಾಕಿದ್ರೆ, ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂಬ ನಂಬಿಕೆ ಇದೆ.

ನರಕದಲ್ಲಿ ಕೊಡುವ ಭಯಂಕರ ಶಿಕ್ಷೆಗಳಿವು..

ನಾಯಿಗಳು ನೀಡುತ್ತದೆ ಈ ಶುಭ ಮತ್ತು ಅಶುಭದ ಸಂಕೇತಗಳು..

- Advertisement -

Latest Posts

Don't Miss