Wednesday, December 4, 2024

Latest Posts

ಸೂಪರ್ ಡೂಪರ್ ಆಗಿದೆ ಕುರುಕ್ಷೇತ್ರ 3ನೇ ಟ್ರೇಲರ್- ದಚ್ಚು ಫ್ಯಾನ್ಸ್ ಗೆ ಹಬ್ಬವೋ ಹಬ್ಬ

- Advertisement -

ಸ್ಯಾಂಡಲ್​ವುಡ್​ ಬಾಕ್ಸ್ ಆಫೀಸ್ ಸುಲ್ತಾನ  ದರ್ಶನ್ ಅಭಿನಯದ ಭಾರೀ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ ಕುರುಕ್ಷೇತ್ರದ 3ನೇ ಟೀಸರ್ ರಿಲೀಸ್ ಆಗಿದ್ದು ಯೂಟ್ಯೂಬ್‌ನಲ್ಲಿ ಹವಾ ಎಬ್ಬಿಸಿದೆ. ದರ್ಶನ್ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯ್ತಿದ್ದ ಟೀಸರ್ ಬಂದಿದ್ದೇ ತಡ, ಯಾವ ರೇಂಜ್‌ಗೆ ಟೀಸರ್‌ನ ನೋಡ್ತಿದ್ದಾರೆ ಅಂದ್ರೆ, ಒಂದೇ ದಿನದಲ್ಲಿ ಟೀಸರ್ ೫ ಲಕ್ಷ ದಾಟಿ ಮಿಲಿಯನ್ ನತ್ತ ಮುಖಮಾಡಿದೆ. ಯುಟ್ಯೂಬ್‌ನಲ್ಲಿ ಕುರುಕ್ಷೇತ್ರ ನಂ1 ಟ್ರೆಂಡಿಂಗ್‌ನಲ್ಲಿದೆ.  2ಡಿ ಹಾಗೂ 3ಡಿಯಲ್ಲಿ ರಿಲೀಸ್ ಆಗ್ತಿರೋ ಹೈ ಬಜೆಟ್ ಸಿನಿಮಾ ಟೇಲರ್ರೇ ಈ ರೇಂಜ್‌ಗಿದ್ರೆ ಸಿನಿಮಾ ಇನ್ನ ಹೇಗಿರಬಹುದು ಅಂತಾ ಅಂದಾಜಿಸುತ್ತಿದ್ದಾರೆ ಸಿನಿರಸಿಕರು. ಕಳೆದ ಆಗಸ್ಟ್ ನಲ್ಲಿ ಬಿಡುಗಡೆಯಾಗಿದ್ದ ಈ ಹಿಂದಿನ ಟೀಸರ್  ಭಾರೀ ಸದ್ದು ಮಾಡಿತ್ತು. ಸದ್ಯ ಈಗ ಬಿಡುಗಡೆ ಆಗಿರುವ ಈ ಟೀಸರ್ ಚಿತ್ರ ಎಷ್ಟು ರಿಚ್ ಆಗಿದೆ ಅನ್ನೋದನ್ನ ತೋರುತ್ತಿದೆ.

ದಚ್ಚು ನಟನೆಯ ಹೈಬಜೆಟ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ತೆರೆಗಪ್ಪಳಿಸೋದಕ್ಕೆ ಸಜ್ಜಾಗಿದೆ. ಒಂದು ಕಡೆ ವರ್ಷಗಳಿಂದ ಕಾಯುತ್ತಿರುವ  ‘ಕುರುಕ್ಷೇತ್ರ’ವಾದ್ರೆ ಮತ್ತೊಂದು ಕಡೆ  ‘ಒಡೆಯ‘ ಮತ್ತು ‘ರಾಬರ್ಟ್’​ಸಿನಿಮಾಗಳು. ಶೀಘ್ರವಾಗಿ ತೆರೆ ಮೇಲೆ ಕಮಾಲ್ ಮಾಡಲಿವೆ. ಅದರಲ್ಲೂ ಕುರುಕ್ಷೇತ್ರ ಮತ್ತು ಒಡೆಯ ಚಿತ್ರಗಳು ಒಂದೇ ತಿಂಗಳಲ್ಲಿ ತೆರೆಗೆ ಬರೋದಕ್ಕೆ ರೆಡಿಯಾಗಿವೆ ಎನ್ನಲಾಗುತ್ತಿದ್ದು ಡಿ ಬಾಸ್ ಅಭಿಮಾನಿಗಳಿಗೆ ಖುಷಿಯೋ ಖುಷಿ.

ಡಿ ಬಾಸ್ ಫೇವರಿಟ್ ಕಾರ್ ಯಾವ್ದು ಗೊತ್ತಾ.. ?ತಿಳಿದುಕೊಳ್ಳೋದಕ್ಕೆ ಈ ವಿಡಿಯೋ ತಪ್ಪದೇ ನೋಡಿ.

https://www.youtube.com/watch?v=X879UMY0Rb8
- Advertisement -

Latest Posts

Don't Miss