Thursday, February 6, 2025

Latest Posts

ಪಶುಸಂಗೋಪನಾ ಇಲಾಖೆ ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಚಿವ ಸಂತೋಷ್‌ ಲಾಡ್‌

- Advertisement -

Dharwad Political News: ಧಾರವಾಡ, ನ. 18: ಅಳ್ನಾವರ ತಾಲೂಕಿನ ಬೆಣಚಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಪಶುಸಂಗೋಪನಾ ಇಲಾಖೆ ಅಧಿಕಾರಿಯನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ತರಾಟೆಗೆ ತೆಗೆದುಕೊಂಡರು.

ಕಲಘಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಣಚಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಗೆ ಮಾಹಿತಿ ಕರಪತ್ರಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಮುದ್ರಿಸಿ ಜನರಿಗೆ ಹಂಚದೆ ಬೇಜವಬ್ದಾರಿ ವಹಿಸಿದ ಅಧಿಕಾರಿಗೆ ಜನರೆದುರು ಬಿಸಿ ಮುಟ್ಟಿಸಿದರು.

ʼಇನ್ನೂರು ಮುನ್ನೂರು ಜರಾಕ್ಸ್‌ ಮಾಡ್ಸಿಸ್ಕೋಂಡು ಬರಲ್ಲಿಕೆ ಏನ್ರಿ ಪ್ರಾಬ್ಲಮ್‌… ಹೇ ಸ್ಟುಪಿಡ್‌ ಫೇಲೋ.. ಅಲ್ರೀ ಪ್ರತಿ ಮೀಟಿಂಗ್‌ ನಲ್ಲೂ ಹೇಳ್ತೀನಿ, ನಿಮಗೆ ಒಂದು ಕೆಲಸ ಮಾಡಿಕೊಂಡು ಬರಕ್ಕೆ ಆಗಲ್ವಾ” ಎಂದು ಸಚಿವರು ಆಕ್ರೋಶಗೊಂಡರು.

ಸಚಿವರು ಎಷ್ಟು ಹೇಳಿದರೂ ಗಮನಿಸಿ ಉತ್ತರ ನೀಡದ ಅಧಿಕಾರಿಯ ನಡೆಗೆ ಬೇಸರಗೊಂಡ ಸಂತೋಷ್‌ ಲಾಡ್‌ ಅವರು, ಇಂತಹ ವರ್ತನೆ ಮುಂದುವರಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರೊಬ್ಬರು, ಅಲ್ರೀ ಸರಾ.. ಶಾಸಕರು ಹೇಳಿದ್ರೇ ಕೇಳೋದಿಲ್ಲ… ಇನ್ನೂ ಗ್ರಾಮಸ್ಥರ ಮಾತನ್ನ ಇವರು ಕೇಳ್ತಾರಾ..!? ಎಂದು ಸಚಿವರ ಮುಂದೆಯೇ ಪ್ರಶ್ನಿಸಿದರು.

ಸಾರ್ವಜನಿಕ ಸಭೆಯಲ್ಲಿ ಅಶಿಸ್ತಿನಿಂದ ನಡೆದುಕೊಳ್ಳುವ ಹಾಗೂ ಸರಿಯಾದ ಮಾಹಿತಿ ಇಲ್ಲದೆ ಬರುವ ಅಧಿಕಾರಿಗಳನ್ನು, ಸಚಿವ ಸಂತೋಷ್‌ ಲಾಡ್‌ ಅವರು ಸಹಿಸುವುದಿಲ್ಲ. ಸಾರ್ವಜನಿಕರ ಸಮಸ್ಯೆ ಸ್ವೀಕರಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ, ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳೇ ತಮ್ಮ ಜವಾಬ್ದಾರಿ ಮರೆತರೆ ಹೇಗೆ ಎಂದು ಸಚಿವರು ಪದೇ ಪದೇ ಎಚ್ಚರಿಸುತ್ತಾರೆ.

ಬೆಣಚಿಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಸಚಿವರ ನಡೆಗೆ ಗ್ರಾಮಸ್ಥರಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಯಿತು.

ತುಮಕೂರು ತಾಲೂಕು ಕಚೇರಿಗೆ ಸಚಿವರ ಧಿಡೀರ್ ಭೇಟಿ: ಕಕ್ಕಾಬಿಕ್ಕಿಯಾದ ಅಧಿಕಾರಿಗಳು

‘ಪ್ರಧಾನಿ ಮೋದಿಯವರ ಈ ನಡೆಯನ್ನು ರಾಜಕೀಯ ಇಬ್ಬಂದಿತನ ಎಂದು ಕರೆಯದೆ ಬೇರೇನು ಹೇಳಬೇಕು?’

‘ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ತಿಳಿದಿಲ್ಲ. ಸುಳ್ಳೇ ಅವರ ಮನೆದೇವರು’

- Advertisement -

Latest Posts

Don't Miss