Sunday, September 8, 2024

Latest Posts

ಸ್ಪೇಶಲ್ ಬೆಂಡೇಕಾಯಿ ಕರಿ ರೆಸಿಪಿ

- Advertisement -

ನಾವಿವತ್ತು ಬೆಂಡೇಕಾಯಿ ಕರಿ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಹಾಗಾದ್ರೆ ಬೆಂಡೇಕಾಯಿ ಕರಿ ಮಾಡೋಕ್ಕೆ ಬೇಕಾಗಿರುವ ಸಾಮಗ್ರಿ ನೋಟ್ ಮಾಡಿಕೊಳ್ಳಿ.

15ರಿಂದ 20 ಬೇಂಡೆಕಾಯಿ, ಒಂದು ಈರುಳ್ಳಿ, ಒಂದು ಕಪ್ ಕೊಬ್ಬರಿ ತುರಿ, ಸ್ವಲ್ಪ ಹುಣಸೆಹಣ್ಣು, 4-5 ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, 2 ಸ್ಪೂನ್ ಜೀರಿಗೆ, 2 ಸ್ಪೂನ್ ಕೊತ್ತಂಬರಿ ಕಾಳು, 2 ಸ್ಪೂನ್ ಉದ್ದಿನ ಬೇಳೆ, ಅರ್ಧ ಕಪ್ ಬೆಲ್ಲ, ಚಿಟಿಕೆ ಅರಿಷಿನ, ಚಿಟಿಕೆ ಹೀಂಗೂ, ಒಗ್ಗರಣೆಗೆ 2 ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಸಾಸಿವೆ, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಉದ್ದಿನ ಬೆಳೆ, 5ರಿಂದ 6 ಎಸಳು ಕರಿಬೇವು, ಖಾರ ಹೆಚ್ಚಿಗೆ ಬೇಕಾದಲ್ಲಿ ಹಸಿ ಮೆಣಸು ಅಥವಾ ಖಾರದ ಪುಡಿ ಬಳಸಬಹುದು, ರುಚಿಗೆ ತಕ್ಕಷ್ಟು ಉಪ್ಪು.

ಮೊದಲು ಬೇಂಡೆಕಾಯಿಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಕತ್ತರಿಸಿ ಕೊಂಚ ಎಣ್ಣೆ ಹಾಕಿ ಹುರಿದುಕೊಳ್ಳಿ. ಅದರಲ್ಲಿರುವ ಲೋಳೆ ಹೋಗುವವರೆಗೂ ಹುರಿದು ಪಕ್ಕಕ್ಕಿರಿಸಿ. ಈಗ ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಹುಣಸೆಹಣ್ಣು, ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ ಜಜ್ಜಿ ಹಾಕಿ ಒಮ್ಮೆ ರುಬ್ಬಿ. ಈಗ ಒಂದು ಪ್ಯಾನ್‌ಗೆ ಜೀರಿಗೆ, ಕೊತ್ತಂಬರಿ ಕಾಳು, ಉದ್ದಿನ ಬೇಳೆ ಹಾಕಿ, ಕಂದು ಬಣ್ಣಕ್ಕೆ ತಿರುಗಿ ಘಮ ಬರುವಷ್ಟು ಹುರಿದು, ರುಬ್ಬಿರುವ ಮಿಶ್ರಣಕ್ಕೆ ಸೇರಿಸಿ ಮತ್ತೊಮ್ಮೆ ರುಬ್ಬಿ. ಈಗ ಸುಕ್ಕೆಗೆ ಬೇಕಾಗಿರುವ ಮಸಾಲೆ ರೆಡಿ.

ಈಗ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕರಿಬೇವು, ಈರುಳ್ಳಿ ಹಾಕಿ ಹುರಿಯಿರಿ. ಈಗ ಇದಕ್ಕೆ ಈಗಾಗಲೇ ಹುರಿದಿಟ್ಟುಕೊಂಡ ಬೇಂಡೆಕಾಯಿ ಹಾಕಿ ಮತ್ತೆ 2 ರಿಂದ 3 ನಿಮಿಷ ಹುರಿಯಿರಿ. ರುಬ್ಬಿದ ಮಸಾಲೆ ಮಿಶ್ರಣದ ಜೊತೆ ಕೊಂಚ ನೀರು, ಅರಿಷಿಣ, ಬೆಲ್ಲ, ಹೀಂಗೂ, ಉಪ್ಪು ಹಾಕಿ ಮಂದ ಉರಿಯಲ್ಲಿ 10 ನಿಮಿಷ ಬೇಯಿಸಿದರೆ ಬೇಂಡೆಕಾಯಿ ಕರಿ ರೆಡಿ.

ನಾರ್ಮಲ್ ಆಗಿ ಬೆಂಡೇಕಾಯಿ ಪಲ್ಯಕ್ಕೆ ನೀರು ಹಾಕೋದಿಲ್ಲ. ಆದ್ರೆ, ಇದು ಕರಿ ಆಗಿರುವುದರಿಂದ, ಇದಕ್ಕೆ ಮಸಾಲೆ ಹಾಕಲೇಬೇಕಾಗಿರುವುದರಿಂದ ನೀರು ಸೇರಿಸಬೇಕು. ಈ ಕಾರಣಕ್ಕಾಗಿಯೇ ಬೇಂಡೆಕಾಯಿಯನ್ನು ಮೊದಲೇ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಂಡಿರಬೇಕು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

- Advertisement -

Latest Posts

Don't Miss