Kundagola News: ಕುಂದಗೋಳ: ನಿವೃತ್ತ ಶಿಕ್ಷಕರೊಬ್ಬರ ಪಿಂಚಣಿ ಹಣವನ್ನು ಸೆಟಲ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಲೋಕಾಯಕ್ತ ಬಲೆಗೆ ಬಿದ್ದ ಘಟನೆ ಕುಂದಗೋಳದಲ್ಲಿ ನಡೆದಿದೆ. ಹೌದು ಇತ್ತೀಚಿಗಷ್ಟೇ ಶಿಕ್ಷಕರೊಬ್ಬರು ನಿವೃತ್ತಗೊಂಡಿದ್ದರು.
ಇವರು ತಮ್ಮ ಪಿಂಚಣಿ ದಾಖಲೆ ಮತ್ತು ವೇತನ ಕುರಿತಂತೆ ಬಿಇಓ ಕಚೇರಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಒಂದು ಕುರಿತಂತೆ ಸಮಸ್ಯೆಯನ್ನು ಸರಿ ಮಾಡಲು ಬಿಇಓ ವಿದ್ಯಾ ಕುಂದರಗಿ 10 ಸಾವಿರ ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದರು. ಅಂತಿಮವಾಗಿ 8 ಸಾವಿರ ರೂಪಾಯಿ ಕೊಡಲು ಒಪ್ಪಿದ್ದರು. ಈ ಒಂದು ವಿಚಾರ ಕುರಿತಂತೆ ನಿವೃತ್ತ ಶಿಕ್ಷಕ ಧಾರವಾಡ ಲೋಕಾಯುಕ್ತ ರಿಗೆ ದೂರನ್ನು ನೀಡಿದ್ದರು.
ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಿದ ಲೋಕಾಯುಕ್ತರು 8 ಸಾವಿರ ರೂಪಾಯಿ ಹಣವನ್ನು ತಗೆದುಕೊಳ್ಳುವಾಗ ಬಿಇಓ ವಿದ್ಯಾ ಕುಂದರಗಿ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ ಅವರ ಮಾರ್ಗದರ್ಶನದಲ್ಲಿ ಡಿಎವೈಎಸ್ಪಿ ಶಂಕರ ರಾಗಿ ಪಿಐ ಬಸವರಾಜ ಮುಕರ್ತಿಹಾಳ ಸೇರಿದಂತೆ ಹಲವು ಸಿಬ್ಬಂದಿಗಳು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸದ್ಯ 8 ಸಾವಿರ ರೂಪಾಯಿಗಳೊಂದಿಗೆ ಬಿಇಓ ಅವರನ್ನು ವಶಕ್ಕೆ ತಗೆದುಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ಕೈಗೊಂಡಿದ್ದಾರೆ.
ಇಸ್ರೇಲ್- ಪ್ಯಾಲೇಸ್ತಿನ್ ಸಮಸ್ಯೆ ಬಗ್ಗೆ ಇಸ್ರೇಲ್ ಅಧ್ಯಕ್ಷರ ಬಳಿ ಪ್ರಧಾನಿ ಮೋದಿ ಮಾತು
‘ಡಯಾಲಿಸಿಸ್ ಸಮಸ್ಯೆಗೆ ಹಿಂದಿನ ಸರ್ಕಾರದಲ್ಲಾದ ಎಡವಟ್ಟುಗಳು ಕಾರಣವೇ ಹೊರತು, ನಮ್ಮ ಸರ್ಕಾರದ್ದಲ್ಲ’
‘ಬಾಂಬ್ ಎಲ್ಲಿ ಸ್ಫೋಟ ಆಗಿದೆ? ಕರೆ ಬಂದ್ರೆ ಏನಾಯ್ತು, ಅಂತಹ ಕರೆಗಳು ಸಾಕಷ್ಟು ಬರ್ತವೆ’

