National News: ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ದಿನದಂದು ಸಂಜೆ ಎಲ್ಲರೂ ತಮ್ಮ ತಮ್ಮ ಮನೆಯ ಹೊರಗೆ 5 ದೀಪವನ್ನಾದರೂ ಹಚ್ಚಿ, ರಾಮಜ್ಯೋತಿ ಬೆಳಗಬೇಕು. ಈ ದಿನವನ್ನು ದೀಪಾವಳಿಯ ರೀತಿ ಆಛರಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಅದೇ ರೀತಿ ಹಲವು ರಾಮಭಕ್ತರು ತಮ್ಮ ಮನೆಯಂಗಳದಲ್ಲಿ ರಾಮಜ್ಯೋತಿ ಬೆಳಗಿದ್ದಾರೆ.
ಅದೇ ರೀತಿ ರಾಮನೂರಾದ ಅಯೋಧ್ಯೆಯ ಸರಯೂ ನದಿ ತಟದಲ್ಲೂ ರಾಮಜ್ಯೋತಿ ಬೆಳಗಲಾಗಿದೆ. ಲಕ್ಷ ದೀಪಗಳನ್ನು ಹಚ್ಚಿ, ರಾಮಭಕ್ತರು ಸಂಭ್ರಮಿಸಿದ್ದಾರೆ. ಇದಾದ ಬಳಿಕ ಗಂಗಾರತಿ ಕೂಡ ನೆರವೇರಿದೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಮಮಂದಿರದ ದೀಪಾಲಂಕಾರವನ್ನು, ಹೂವಿನ ಅಲಂಕಾರವನ್ನು ಕಣ್ತುಂಬಿಕೊಂಡು ಖುಷಿ ಪಟ್ಟಿದ್ದಾರೆ.
ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಭಕ್ತಾದಿಗಳು ದೀಪ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಅಲ್ಲದೇ, ಅಲ್ಲಲ್ಲಿ ರಾಮಭಜನೆ, ರಾಮಕೀರ್ತನೆ, ರಾಮನ ಹಾಡಿಗೆ ನೃತ್ಯ ಮಾಡಿ ಭಕ್ತರು ಸಂಭ್ರಮಿಸುತ್ತಿದ್ದಾರೆ.
‘ಇನ್ನು ಮುಂದೆ ಅಯೋಧ್ಯೆಯಲ್ಲಿ ಫೈರಿಂಗ್ ಸದ್ದು ಕೇಳುವುದಿಲ್ಲ, ರಾಮಕೀರ್ತನೆ ಕೇಳುತ್ತದೆ’
ಸಾಂಘವಾಗಿ ನೆರವೇರಿದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ನಮೋ ಸಾರಥ್ಯದಲ್ಲಿ ನೆರವೇರಿದ ಪೂಜೆ
ಕಾಂಗ್ರೆಸ್ ಸರ್ಕಾರ ಪಾಕಿಸ್ತಾನ ಏಜೆಂಟ್‌ಗಳಂತೆ ನಡೆದುಕೊಳ್ಳದಂತೆ ಬುದ್ಧಿ ಕೊಡಲಿ: ಸಂಸದ ಮುನಿಸ್ವಾಮಿ