Hubli News: ಹುಬ್ಬಳ್ಳಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಹಾಗೂ ಸಿ.ಟಿ. ರವಿ ಪ್ರಕರಣಕ್ಕೆ ಇತಿಶ್ರೀ ಹಾಡಬೇಕೆಂದಿದ್ದೆ ಆದರೆ ಅದು ಆಗಿಲ್ಲ. ಅವರು ತಯಾರಿದ್ದೇರೆ ಈಗಲೂ ನಾನು ರೆಡಿ ಇದ್ದೇನೆ. ಇಡೀ ಪ್ರಕರಣವನ್ನು ಇಷ್ಟಕ್ಕೆ ಮುಗಿಸಿ ಮುಂದೆ ಸಾಗಬೇಕೆಂದು ಬಯಸಿದ್ದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು..
ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಿ.ಟಿ. ರವಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಕೊಟ್ಟರೆ ಎಫ್‌ಎಸ್‌ಎಲ್‌ಗೆ ಕಳುಹಿಸಿ ಕೊಡುವೆ. ನಾನೇ ಪರೀಕ್ಷೆ ಮಾಡಿಸುವೆ. ತಾವು (ಮಾಧ್ಯಮದವರು) ಸಹ ಕೊಟ್ಟರು ಸಹ ಕಳುಹಿಸಿ ಕೊಡುವೆ ಎಂದರು.
ಸಿ.ಟಿ. ರವಿ ಆರೆಸ್ಟ್ ಪ್ರಕರಣ ಕುರಿತು ಸತ್ಯ ಶೋಧನಾ ಸಮಿತಿ ರಚನೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕರು ದೂರು ಕೊಟ್ಟಿದ್ದು ನನಗೆ ಗೊತ್ತಿಲ್ಲ. ಅದು ನನಗೆ ಸಂಬಂಧ ಇಲ್ಲ. ಈ ಕುರಿತು ನನ್ನ ಏನು ಕೇಳಿಲ್ಲ ಎಂದು ಅವರು ಹೇಳಿದರು.