- Advertisement -
state news :
ಬೆಂಗಳೂರು: ಜನವರಿ 26ರಂದು ಗಣರಾಜ್ಯೋತ್ಸವ ಹಿನ್ನೆಲೆ ಲಾಲ್ಬಾಗ್ನಲ್ಲಿ ತೋಟಗಾರಿಕೆ ಇಲಾಖೆ ಪುಷ್ಪ ಪ್ರದರ್ಶನ ಏರ್ಪಡಿಸಿದೆ. ಇಂದಿನಿಂದ ಜನವರಿ 30ರ ವರೆಗೆ ಅಂದರೆ 10 ದಿನಗಳ ಕಾಲ ಪುಷ್ಪ ಪ್ರದರ್ಶನ ನಡೆಯಲಿದೆ. ಇನ್ನೂ ಫಲಪುಷ್ಪ ಪ್ರರ್ದಶನಕ್ಕೆಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಈ ಬಾರಿ ಪುಷ್ಪ ಪ್ರದರ್ಶನದಲ್ಲಿ ಪುಷ್ಪಗಳ ಮೂಲಕ ಬೆಂಗಳೂರಿನ ಇತಿಹಾಸದ ಸಾರಲಿದ್ದಾರೆ. ಬೆಂಗಳೂರಿನ 1500 ವರ್ಷಗಳ ಹಿಂದಿನ ಇತಿಹಾಸದ ಬಗ್ಗೆ, ಬೆಂಗಳೂರಿನ ಸ್ವಾತಂತ್ರ್ಯ ಪೂರ್ವ & ನಂತರದ ಇತಿಹಾಸದ ಮಾಹಿತಿಯನ್ನು ದೇಶದ ವಿವಿಧ ಬಗೆಯ ಪುಷ್ಪಗಳ ಮೂಲಕ ಪ್ರದರ್ಶಿಸಲಾಗುತ್ತೆ. ಫ್ಲವರ್ ಶೋಗೆ ಬರುವ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು ಈ ಬಾರಿ ಫ್ಲವರ್ ಶೋನಲ್ಲಿ 15-20 ಲಕ್ಷ ಜನ ಸೇರುವ ಸಾಧ್ಯತೆ ಇದೆ. 11 ವಿದೇಶಗಳ 69 ಜಾತಿಯ ಹೂಗಳನ್ನು ಪುಷ್ಪ ಮೇಳದಲ್ಲಿ ಪ್ರದರ್ಶಿಸಲಾಗುತ್ತಿದೆ
- Advertisement -