Krishi News: ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಹಲವು ಬಗೆ ಬಗೆಯ ಕುರಿಗಳನ್ನು ತಂದಿದ್ದರು. ಇದರಲ್ಲಿ ಕೆಲವು ಕುರಿಗಳ ವಿಶೇಷತೆಯನ್ನು ಹೇಳಲಾಗಿದೆ. ಆ ಬಗ್ಗೆ ತಿಳಿಯೋಣ ಬನ್ನಿ..
ಕೃಷಿ ಮೇಳದಲ್ಲಿ ಕಂಡುಬಂದ ವಿಶೇಷ ಕುರಿ ಅಂದ್ರೆ ನಾರಿ ಸುವರ್ಣ ಕುರಿ. ಕೋಲಾರ ಜಿಲ್ಲೆಯ ಶ್ರೀನಿವಾಸ ಪುರಿಯಲ್ಲಿ ಈ ಕುರಿಯನ್ನು ಸಾಕಣೆ ಮಾಡಲಾಗುತ್ತದೆ. ಇದು ಬ್ರೀಡಿಂಗ್ ಹೇಳಿ ಮಾಡಿಸಿದ ಕುರಿಯಾಗಿದೆ. ಇನ್ನು ಇದನ್ನು ಸೇವಿಸಲೂಬಹುದಂತೆ.
ಈ ಕುರಿಗಳು ನಿಮಗೆ ಬೇಕಾದಲ್ಲಿ ನೀವು ಕೋಲಾರದ ಶ್ರೀನಿವಾಸಪುರಕ್ಕೆ ಹೋಗಬೇಕು. ಈ ಕುರಿಗಳ ಓನರ್ ಹೇಳುವ ಪ್ರಕಾರ, ಇದಕ್ಕೆ ತುಂಬಾನೇ ಡಿಮ್ಯಾಂಡ್ ಇದೆ. ಏಕೆಂದರೆ, ಮಾಮೂಲಿ ಕುರಿಗಳಿಗಿಂತ, ಈ ಕುರಿಗಳ ಬೆಳವಣಿಗೆ ಹೆಚ್ಚಾಗಿರುತ್ತದೆ. ಸೇವಿಸುವವರಿಗೆ ಹೆಚ್ಚು ಮಟನ್ ಕೂಡ ಸಿಗುತ್ತದೆಯಂತೆ. ಇದರ ಕ್ವಾಲಿಟಿ ಕೂಡ ಉತ್ತಮವಾಗಿರುತ್ತದೆ. ಈ ಕುರಿಯ ಬಗ್ಗೆ ಇನ್ನಷ್ಟು ತಿಳಿಯಲು, ಈ ವೀಡಿಯೋ ನೋಡಿ..
ಬೆಳ್ಳುಳ್ಳಿ ಎಣ್ಣೆ ಬಳಸಿ, ನಿಮ್ಮ ಕೂದಲ ಆರೋಗ್ಯವನ್ನು ಉತ್ತಮಗೊಳಿಸಬಹುದು ನೋಡಿ..



