Hubballi News: ಹುಬ್ಬಳ್ಳಿ: ಅವಳಿನಗರ ಬೆಳೆದೆಂತೆಲ್ಲಾ ಇಲ್ಲಿನ ಭೂಮಿಗೆ ಬಂಗಾರಕ್ಕೂ ಮಿಗಿಲಾದ ರೇಟ್ ಫೀಕ್ಸ್ ಆಗಿವೆ ಎನ್ನೋದು ಭೂಮಿ ಖರೀದಿಸಲು ಮುಂದಾಗುವ ಪ್ರತಿಯೊಬ್ಬರಿಗೂ ತಿಳಿದಿರುವ ಸಾಮಾನ್ಯ ಸಂಗತಿಯಾಗಿದೆ.
ವಿಷಯ ಇಷ್ಟೇ ಆಗಿದ್ರೆ ಹೋಗ್ಲಿ ಬಿಡಿ ಎನ್ನಬಹುದು. ಆದ್ರೆ ಸೈಟು ಖರೀದಿಸಿ ಒಂದು ಪುಟ್ಟ ಗೂಡು ಕಟ್ಟಿಕೊಳ್ಳಲೇ ಬೇಕು ಎಂದು ಹಗಲಿರುಳು ಕಷ್ಟ ಪಟ್ಟು, ಲಕ್ಷಾಂತರ ಹಣ ಜೋಡಿಸಿ. ನಂತರ ಸೈಟ್ ಖರೀದಿಗೆಂದು, ಏಜಂಟರ ಮೂಲಕವೆ ಪ್ಲಾಟ್ ಖರೀದಿಗೇ ಮುಂದಾಗುವಂತಹ ವ್ಯವಸ್ಥೆ ನಿರ್ಮಾಣ ವಾಗಿದೆ ಎನ್ನುವುದು ಮತ್ತೊಂದು ಬೇಸರ ಮೂಡಿಸು ವಿಚಾರ.
ಆದ್ರೆ ಸೈಟ್ ಖರೀದಿ ಗಾಗಿ ಲಕ್ಷ ಲಕ್ಷ ಹಣ ಕೊಟ್ಟು ಚೌಕಾಸಿ ಮಡಿ ಸೈಟ್ ಖರೀದಿಗೆ ಮುಂದಾಗುವ ಮುನ್ನ ಒಂದೊಮ್ಮೆ ಅವುಗಳ ದಾಖಲೆಗಳನ್ನು ಸಹ ತಿರುವಿ ಹಾಕ್ತೇವೆ. ನಂತರ ಸಣ್ಣ ಪುಟ್ಟ ವ್ಯತ್ಯಾಸ ಗಳಿದ್ದರೆ ಚರ್ಚಿಸುತ್ತೇವೆ ಇದು ಸಾಮಾನ್ಯ ಪ್ರಕ್ರಿಯೆ.
ಗಂಭೀರ ವಿಷಯವೆಂದ್ರೆ ಯಾರದೋ ಖಾಲಿ ಸೈಟಿಗೆ ಮೂಲ ಮಾಲೀಕನ ಹೊರತಾಗಿ ಇನ್ಯಾವುದೊ ವ್ಯಕ್ತಿಯ ಖೊಟ್ಟಿ ಗುರುತಿನ, ದಾಖಲೆ ಸೃಷ್ಟಿಸಿ ಅದನ್ನ ಕೋಟಿ ಬೆಲೆಗೆ ಮಾರುವ ಮೂಲಕ ಕೋಟಿ ಕೋಟಿ ಲೆಕ್ಕದಲ್ಲಿ ಹಣ ಮಾಡುತ್ತಿರುವ “ಲ್ಯಾಂಡ್ ಮಾಫಿಯಾ” ಗ್ಯಾಂಗ್ ಅವಳಿನಗರದಲ್ಲಿ ಸಕ್ರಿಯವಾಗಿದೆ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಮೇಲ್ನೋಟಕ್ಕೆ ಇದುವರೆಗೂ ಠಾಣೆ ಮೆಟ್ಟಲೇರದ ಕೆಲವೊಂದು ಮೂಲ ಮಾಲೀಕರ ನಕಲಿ ದಾಖಲೆ ಬಳಸಿ ನಡೆಸಿರುವ “ಭೂ ಮಾಫಿಯಾ” ಗ್ಯಾಂಗಿನ ಸರದಾರರ ಹಣೆಬರಹ ಬದಲಾಯಿಸಲೆಂದೆ, ಈಗಾಗಲೇ ಸೈಲಂಟಾಗಿ ಅವಳಿನಗರದ ಪೊಲೀಸರು ಒಂದೆರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. “ಲ್ಯಾಂಡ್ ಮಾಫಿಯಾ” ಗ್ಯಾಂಗಿನ ಕೆಲವು ಪಂಟರ್ ಗಳ ಪೈಕಿ, ಅಕ್ರಮ ವೆಸಗಿ ಪಾಲು ಹಂಚಿಕೊಂಡವರನ್ನ ಒದ್ದು ತಂದು ಬಾಯಿಬಿಡಿಸುವ ಕಾರ್ಯ ದೂರ ಉಳಿದಿಲ್ಲ ಎನ್ನಲಾಗಿದೆ. ಈ ಕುರಿತು ಕರ್ನಾಟಕ ಟಿವಿ ಸಾಕಷ್ಟು ಸಾಕ್ಷಿ ಸಮೇತ ಭಂಡರ ಬಣ್ಣ ಬಯಲು ಮಾಡಲಿದೆ.
ಭಾರತ ವಿಶ್ವಕಪ್ ಗೆದ್ದರೆ 100 ಕೋಟಿ ರೂ ಬಂಪರ್ ಬಹುಮಾನ!: ಆಸ್ಟ್ರೋಟಾಕ್ ಸಿಇಒ ಘೋಷಣೆ
ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.
ತಲೆತಲಾಂತರದಿಂದ ಮಠದ ಭಕ್ತರಾದ ನಾವು ಮುರುಘಾ ಶರಣರ ಜೊತೆ ಇರುತ್ತೇವೆ; ಶಾಸಕ ವಿರೇಂದ್ರ ಪಪ್ಪಿ