Hubballi News: ಹುಬ್ಬಳ್ಳಿ: ನಗರ ಸೇರಿದಂತೆ ಹುಬ್ಬಳ್ಳಿ ಹೊರವಲಯದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ಫಿಲ್ಟರ್ ಅಡ್ಡೆ ಮೇಲೆ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ 7 ಲಾರಿಗಳನ್ನು ವಶಕ್ಕೆ ಪಡೆದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಹುಬ್ಬಳ್ಳಿಯ ಗಬ್ಬುರು ಕ್ರಾಸ್ ಬಳಿಯಲ್ಲಿ ಎರಡು ಟಿಪ್ಪರ್ ಹಾಗೂ ಅದರಗುಂಚಿ ಬಳಿಯಲ್ಲಿ ನಾಲ್ಕು ಲಾರಿಗಳು ಅಕ್ರಮವಾಗಿ ಫಿಲ್ಟರ್ ಮರಳು ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿ ಬಿಂದನಾ ಪಾಟೀಲ್ ನೇತೃತ್ವದ ತಂಡ ದಾಳಿ ಮಾಡಿ ವಾಹನಗಳನ್ನು ಸೀಜ್ ಮಾಡಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಅಷ್ಟೇ ಅಲ್ಲದೆ, ಕಾರವಾರ ರಸ್ತೆಯಲ್ಲಿರುವ ಅಕ್ರಮ ಮರಳು ಫಿಲ್ಟರ್ ಮೇಲೆ ಕೂಡಾ ದಾಳಿ ಮಾಡಿದ್ದು, ಈ ವೇಳೆ ಅಡ್ಡೆಯಲ್ಲಿದ್ದ ದಂಧೆಕೋರರು ಅಡ್ಡೆಯಿಂದ ಎಸ್ಕೆಪ್ ಆಗಿದ್ದರು. ಸದ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ವಿರುದ್ಧ ಈ ರೀತಿ ಕಾರ್ಯಾಚರಣೆ ನಡೆಯುತ್ತಲೇ ಇರುತ್ತದೆ ಎಂದು ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ದಂಧೆಕೋರರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
Market : ವರ್ಷವಾದರು ಹಂಚಿಕೆಯಾಗದ ಮಾರುಕಟ್ಟೆ ಮಳಿಗೆ : ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ವ್ಯಾಪಾರಿಗಳು
ಕಲಬುರಗಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣ: CID ತನಿಖೆ ಮಾಡುತ್ತಾರೆ ಎಂದ ಗೃಹಸಚಿವರು..