ಬೇಲೂರು : ಹಾಸನದ ಬೆಲೂರಿನಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಸಿಡಿಲು, ಗಾಳಿ, ಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಭಾರಿ ಮಳೆ, ಬಿರುಗಾಳಿಗೆ ವಿದ್ಯುತ್ ಕಂಬಗಳು, ಬೃಹತ್ ಗಾತ್ರದ ಮರಗಳು ನೆಲಕ್ಕುರುಳಿದೆ.
ಅಲ್ಲದೇ, ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಬಾಳೆಗಿಡಗಳು ನೆಲಕಚ್ಚಿದೆ. ಬೇಲೂರು- ಚೀಕನಹಳ್ಳಿ- ಮೂಡಿಗೆರೆ ರಸ್ತೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೃಹತ್ ಮರಗಳು, 17 ವಿದ್ಯುತ್ ಕಂಬಗಳು, ಮೂರು ಟ್ರಾನ್ಸ್‌ಫಾರ್ಮರ್‌ಗಳು ಧರೆಗುರುಳಿದೆ.
ಬೇಲೂರು ತಾಲೂಕಿನ, ಕೋನೆರ್ಲು ಗ್ರಾಮದದಲ್ಲಿ ಹುಸೇನ್ ಎಂಬುವವರು ವಾಸಿಸುತ್ತಿದ್ದ ಮನೆಯ ಮೇಲ್ಛಾವಣಿ, ಬಿರುಗಾಳಿಗೆ ಹಾರಿ ಹೋಗಿದೆ. ಇನ್ನೊಂದೆಡೆ, ಬೇಲೂರಿನ ಬಳ್ಳೂರು ಗ್ರಾಮದಲ್ಲಿ, ಧರ್ಮೇಗೌಡ ಎಂಬುವವರ ಜಮೀನಿನಲ್ಲಿ, ನೂರಾರು ಬಾಳೆಗಿಡಗಳು, ಧರೆಗುರುಳಿದೆ. ನೆಲಕ್ಕುರುಳಿದ ಮರಗಳನ್ನು ಸಾರ್ವಜನಿಕರು ಸೇರಿ ತೆರವುಗೊಳಿಸಿದ್ದು, ನಿನ್ನೆಯಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಅಪಾರ ಹಾನಿ ಸಂಭವಿಸಿದ್ದರೂ ಕೂಡ ಅಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ, ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ಸರ್ಕಾರ ಯಾವುದೇ ತನಿಖೆ ನಡೆಸಲಿ; ಎದುರಿಸಲು ನಾವು ಸಿದ್ದ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ
‘ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆವಹಿಸಿ’
ಕಾಡಾನೆ ಸಮಸ್ಯೆ ನಿವಾರಣೆಗೆ ಅಗತ್ಯಕ್ರಮ, 15 ದಿನಗಳಲ್ಲಿ ರಸ್ತೆಗೆ ಶಾಶ್ವತ ಪರಿಹಾರ: ಶಾಸಕ ಸಿಮೆಂಟ್ ಮಂಜು ಭರವಸೆ