Wednesday, May 29, 2024

Latest Posts

ನಟ ಅಮಿತಾಬ್ ಬಚ್ಚನ್‌ಗೆ ಲತಾ ಮಂಗೇಶ್ಕರ್ ಪ್ರಶಸ್ತಿ

- Advertisement -

Movie News: ಬಾಲಿವುಡ್ ನಟ ಅಮಿತಾಬ್‌ ಬಚ್ಚನ್‌ಗೆ ಲತಾ ದಿನಾನಾಥ್ ಮಂಗೇಶ್ಕರ್ ಪ್ರಶಸ್ತಿ ನೀಡಲಾಗುತ್ತಿದೆ. ಅಮಿತಾಬ್ ಬಾಲಿವುಡ್‌ನ ನಟನಾ ರಂಗದಲ್ಲಿ ಮಾಡಿದ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ಗಾಯಕಿ ಲತಾ ಮಂಗೇಶ್ಕರ್ ಅವರ ಪೂರ್ತಿ ಹೆಸರು ಲತಾ ದೀನಾಾನಾಥ್ ಮಂಗೇಶ್ಕರ್. ಮಂಗೇಶ್ಕರ್ ಕುಟುಂಬವು, ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಇದಕ್ಕಾಗಿ ಅಮಿತಾಬ್ ಬಚ್ಚನ್ ರನ್ನು ಆಯ್ಕೆ ಮಾಡಲಾಗಿದೆ.

ದಿವಂಗತ ಗಾಯಕಿ ಲತಾ ಮಂಗೇಶ್ಕರ್ ಸ್ಮರಣಾರ್ಥವಾಗಿ ಈ ಪ್ರಶಸ್ತಿಯನ್ನು ಪ್ರತೀ ವರ್ಷ ಕೊಡುತ್ತಾ ಬರಲಾಗಿದೆ. ಸೆಲೆಬ್ರಿಟಿಗಳಲ್ಲಿ ಅಮಿತಾಬ್‌ ಬಚ್ಚನ್‌ಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದರೊಂದಿಗೆ ಹಲವು ಸಮಾಜ ಸೇವಕರಿಗೆ, ಕಲೆಗಾರರಿಗೆ ಬೇರೆ ಬೇರೆ ಪ್ರಶಸ್ತಿಯನ್ನು ಇದೇ ಸಮಯದಲ್ಲಿ ಪ್ರದಾನ ಮಾಡಲಾಗುತ್ತದೆ.

ಬರೀ ನಟನೆಯಲ್ಲಿ ಮಾತ್ರವಲ್ಲದೇ, ಸಾಮಾಜಿಕ ಕಾರ್ಯಗಳಲ್ಲಿ ಕೂಡ ಅಮಿತಾಬ್ ಬಚ್ಚನ್ ಮಾದರಿಯಾಗಿದ್ದಾರೆ. ಲತಾ ಮಂಗೇಶ್ಕರ್ ಪ್ರಶಸ್ತಿ ಪಡೆದ ಮೂರನೇಯ ವ್ಯಕ್ತಿ ಅಮಿತಾಬ್ ಬಚ್ಚನ್ ಆಗಿದ್ದಾರೆ. ಆಶಾ ಭೋಸ್ಲೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಲತಾ ಮಂಗೇಶ್ಕರ್ ಪ್ರಶಸ್ತಿ ನೀಡಲಾಗಿದೆ. ಏಪ್ರಿಲ್ 24ರಂದು ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ತನ್ನ ಮಗು ಸೂರ್ಯನ ಕಿರಣವನ್ನಷ್ಟೇ ಸೇವಿಸಬೇಕೆಂದು ತಂದೆಯ ಹಠ: ಮಗು ಸಾವು

ಕೆಮ್ಮು-ಶೀತ ಬಂತೆಂದು ಕೈಗೆ ಸಿಕ್ಕ ಮಾತ್ರೆ ಸೇವಿಸಿದ ಮಹಿಳೆ, ಕಣ್ಣಿಂದ ಬಂತು ರಕ್ತ..!

ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಪಲ್ಲವಿ ಡೆಂಪೋ.. ಈಕೆಯ ಆಸ್ತಿಯೇ 1,400 ಕೋಟಿ..

- Advertisement -

Latest Posts

Don't Miss