Sunday, May 19, 2024

Latest Posts

ತನ್ನ ಮಗು ಸೂರ್ಯನ ಕಿರಣವನ್ನಷ್ಟೇ ಸೇವಿಸಬೇಕೆಂದು ತಂದೆಯ ಹಠ: ಮಗು ಸಾವು

- Advertisement -

International News: ಎಲ್ಲ ಅಪ್ಪ ಅಮ್ಮಂದಿರಿಗು, ತಾವು ಹುಟ್ಟುವ ಮಕ್ಕಳು ಆರೋಗ್ಯವಾಗಿರಬೇಕು. ಚುರುಕಾಗಿರಬೇಕು. ನೋಡಲು ಮುದ್ದು ಮುದ್ದಾಗಿರಬೇಕು ಅಂತಾ ಆಸೆ ಇರುತ್ತದೆ. ಆದಕ್ಕಾಗಿ ಅಪ್ಪ ಅಮ್ಮ ಗರ್ಭಿಣಿಯಾಗಿದ್ದಾಗಲೇ, ತರಹೇವಾರಿ ಆರೋಗ್ಯಕರ ಆಹಾರವನ್ನು ತಂದುಕೊಡುತ್ತಾನೆ. ತಾಯಿ ಆ ಆಹಾರವನ್ನು ಸೇವಿಸಿ, ಆರೋಗ್ಯಕರ ಮಗುವಿಗೆ ಜನ್ಮ ಕೊಡುತ್ತಾಳೆ. ಬಳಿಕ ಮಗು ಹುಟ್ಟಿದ ಮೇಲೆ ಅದರ ಆರೋಗ್ಯದ ಬಗ್ಗೆ ತಂದೆ ತಾಯಿ ಗಮನ ಕೊಡುತ್ತಾರೆ.

ಆದರೆ ರಷ್ಯಾದ ಲೈಫ್ ಸ್ಟೈಲ್ ವ್ಲಾಗರ್ ಮ್ಯಾಕ್ಸಿಮ್ ಲ್ಯೂಟಿ ಎಂಬಾತ, ತನ್ನ ಮಗನನ್ನು ಬಿಸಿಲಿನಲ್ಲಿ ಸೂರ್ಯನ ಕಿರಣ ತಾಕಲಿ ಎಂದು, ಮಗುವನ್ನು ಬಿಸಿಲಿನಲ್ಲಿ ಇರಿಸಿ, ಆ ಮಗುವಿನ ಸಾವಿಗೆ ಕಾರಣವಾಗಿದ್ದಾನೆ. ಪತ್ನಿಗೆ ಹೆರಿಗೆ ನೋವು ಬಂದರೂ ಕೂಡ, ಮ್ಯಾಕ್ಸಿಮ್ ಆಕೆಯನ್ನು ಆಸ್ಪತ್ರೆಗೆ ಸೇರಿಸದೇ, ಮಗು ಮನೆಯಲ್ಲೇ ಜನಿಸುವಂತೆ ಮಾಡಿದ್ದಾನೆ.

ಬಳಿಕ ಮಗುವಿಗೆ ಹಾಲು ಕುಡಿಸಲು ಬಿಡದೇ, ಮಗು ಸೂರ್ಯನ ಕಿರಣ ಪಡೆದೇ ಬದುಕಲಿ ಎಂದು, ಬಿಸಿಲಿನಲ್ಲಿ ಇಟ್ಟಿದ್ದಾನೆ. ಮಗುವಿನ ಆರೋಗ್ಯ ಹದಗೆಟ್ಟಾಗ, ಅಲ್ಲಿದ್ದ ಜನ, ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಮಗು ಸಾವನ್ನಪ್ಪಿದೆ.

ಮಗು ನ್ಯೂಮೋನಿಯಾದಿಂದ ಬಳಲುತಿತ್ತು. ಆದಕ್ಕೆ ಸರಿಯಾದ ಚಿಕಿತ್ಸೆ ಮತ್ತು ತಾಯಿಯ ಎದೆಹಾಲಿನ ಅವಶ್ಯಕತೆ ಇತ್ತು. ಆದರೆ ಮ್ಯಾಕ್ಸಿಮ್ ಮಗುವನ್ನು ಇಡೀ ದಿನ ಸೂರ್ಯನ ಬಿಸಿಲಿಗೆ ಮಲಗಿಸಿ, ಅದಕ್ಕೆ ಹಣ್ಣು ತಿನ್ನಿಸಿದ್ದ. ತಾಯಿಯ ಹಾಲಿನ ಅವಶ್ಯಕತೆ ಮಗುವಿಗಿಲ್ಲ. ಮಗು ಸೂರ್ಯನ ಕಿರಣ ಮಮತ್ತು ಹಣ್ಣಿನ ರಸ ಕುಡಿದು ಬದುಕಬಲ್ಲದು ಎಂದು ಪ್ರೂವ್ ಮಾಡುವ ಹುಚ್ಟಾಟ ಮ್ಯಾಕ್ಸಿಮ್‌ದಾಗಿತ್ತು. ಆದರೆ ಇವನ ಹುಚ್‌ಚಾಟಕ್ಕೆ ಪುಟ್ಟ ಗಂಡು ಮಗು ಸಾವಿಗೀಡಾಗಿದೆ. ರಷ್ಯಾ ನ್ಯಾಯಾಲಯ ಮ್ಯಾಕ್ಸಿಮ್‌ಗೆ 8 ವರ್ಷ ಜೈಲು ಶಿಕ್ಷೆ ನೀಡಿದೆ.

ಇನ್ನು ಮ್ಯಾಕ್ಸಿಮ್ ಪತ್ನಿ, ಮ್ಯಾಕ್ಸಿಮ್‌ನಿಗೆ ಡಿವೋರ್ಸ್ ಕೊಡಬೇಕೆಂದು ಎಂದು ಹಲವು ಬಾರಿ ನಿರ್ಧರಿಸಿದ್ದಳಂತೆ. ಆದರೆ ಇವನ ಹುಚ್ಚಾಟ ಸಹಿಸಿಕೊಂಡು, ಹೊಂದಿಕೊಂಡು ಹೋಗುತ್ತಿದ್ದಳು. ಆದರೆ ಆಕೆ ಈ ಮೊದಲೇ ಅವನನ್ನು ತೊರೆದಿದ್ದರೆ, ಮಗುವಾದರೂ ಬದುಕುತ್ತಿತ್ತೆನೋ.

ಮತದಾರರಿಗೆ ಹಂಚಲು ತಂದಿದ್ದ 18 ಕೋಟಿ ರೂಪಾಯಿ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು

ಅವರು ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ: ರಾಹುಲ್ ರಾಜ್ಯ ಪ್ರವಾಸದ ಬಗ್ಗೆ ಪ್ರಜ್ವಲ್ ಮಾತು

ಬರ್ತ್‌ಡೇ ಪಾರ್ಟಿಗಾಗಿ ಜೋಮೆಟೋ ಪರಿಚಯಿಸಿದೆ ಹೊಸ ಆರ್ಡರ್ ಫ್ಲೀಟ್

- Advertisement -

Latest Posts

Don't Miss