Hubballi News: ಹುಬ್ಬಳ್ಳಿ: ನಗರದಲ್ಲಿನ ಹೋಟೆಲ್ ಒಂದರಲ್ಲಿ ತಡರಾತ್ರಿ ಊಟದ ವಿಚಾರಕ್ಕೇ ಕುಡಿದ ಮತ್ತಿನಲ್ಲಿದ್ದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಶನಿವಾರ ತಡರಾತ್ರಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರವಾರ ರಸ್ತೆಯಲ್ಲಿ ನಡೆದಿದೆ.
ಕಾರವಾರ ರಸ್ತೆಯಲ್ಲಿರುವ ಪರಜಾನ ಹೋಟೆಲ್ ನಲ್ಲಿ ಶನಿವಾರ ರಾತ್ರಿ 12.30 ರ ಸುಮಾರಿಗೆ ಊಟವನ್ನು ಮಾಡಲು ಬಂದಿದ್ದ ಯುವಕರ ಗುಂಪಿನ ಜೊತೆ ಹೋಟೆಲ್ ಸಿಬ್ಬಂದಿ ಹಾಗೂ ಅದೇ ಹೋಟೆಲ್ ನಲ್ಲಿ ಊಟವನ್ನು ಮಾಡಲು ಬಂದಿದ್ದ ಇನ್ನೊಂದು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಹೋಟೆಲ್ ನಲ್ಲಿಯೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಈ ವೇಳೆ ಹೋಟೆಲ್ ನಲ್ಲಿ ಹೊಡೆದಾಟದ ಸುದ್ದಿ ತಿಳಿಯುತ್ತಿದ್ದ ಹಾಗೆ ಎರಡು ಗುಂಪಿನ ಕಡೆಯ ಯುವಕರು ಹೋಟೆಲ್ ನಲ್ಲಿ ಬಂದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಗಲಾಟೆ ಜ್ಯಾಸ್ತಿ ಆಗುತ್ತಿದ್ದ ಹಾಗೆ ಹೋಟೆಲ್ ನವರು ಎಲ್ಲರನ್ನು ಹೊರಗೆ ಕಳುಹಿಸಿದ್ದಾರೆ.
ಆದ್ರೆ ಕುಡಿದ ಮತ್ತಿನಲ್ಲಿದ್ದ ಎರಡು ಗುಂಪಿನ ಯುವಕರು ನಡು ರಸ್ತೆಯಲ್ಲಿಯೇ ಮತ್ತೆ ಜಗಳ ತೆಗೆದು ನಡು ರಸ್ತೆಯಲ್ಲಿಯೇ ಯುವಕನನ್ನು ಮನಸ್ಸೋ ಇಚ್ಛೆ ಥಳಿಸಿದ್ದಾರೆ, ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸ್ ಸಿಬ್ಬಂದಿ ಬಂದರು ಕೂಡಾ ಪೊಲೀಸರಿಗೆ ತಲೆ ಕೆಡಿಸಿಕೊಳ್ಳದೆ ನಶೆಯಲಿದ್ದ ಯುವಕರು ನಡು ರಸ್ತೆಯಲ್ಲಿಯೇ ಯುವಕನನ್ನು ಪೊಲೀಸ್ ಸಿಬ್ಬಂದಿಯ ಮುಂದೆಯೇ ಥಳಿಸಿದ್ದಾರೆ.
ಸದ್ಯ ಈ ಹೊಡೆದಾಟದ ಭಾಗಿಯದವರು ಯಾರು ಎಲ್ಲಿಯವರು ಎಂಬ ಮಾಹಿತಿ ಸಧ್ಯಕ್ಕೆ ಲಭ್ಯವಾಗಿಲ್ಲ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಹೊಡೆದಾಟದ ವಿಡಿಯೋ ಆಧರಿಸಿ ಆರೋಪಿಗಳು ಯಾರು ನಡು ರಸ್ತೆಯಲ್ಲಿಯೇ ಹೊಡೆತ ತಿಂದ ಯುವಕ ಯಾರು ಎಂಬೆಲ್ಲಾ ಮಾಹಿತಿ ಕಲೆ ಹಾಕುತ್ತಿದ್ದು,ಹೊಸ ವರ್ಷದ ಮುನ್ನಾ ದಿನವೇ ಈ ಘಟನೆ ನಡೆದಿದ್ದು ಹುಬ್ಬಳ್ಳಿ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಸಂಗಮೇಶ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ
ಶಿಕ್ಷಣ ಸಚಿವ ಮಧುಬಂಗಾರಪ್ಪ ರಾಜೀನಾಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯ
ಮರಗಳ್ಳತನ ಪ್ರಕರಣ: ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅರೆಸ್ಟ್
‘ಯಾವ ಸೀಮೆಯ ನೈತಿಕತೆ ಸ್ವಾಮಿ ನಿಮ್ಮದು? ಇಂತಹ ಇನ್ಯಾವ ಬಗೆಯ ಕಳ್ಳ ದಂಧೆಗಳಿವೆ ನಿಮ್ಮದು?’




