Sunday, September 8, 2024

Latest Posts

ತಲೈವಿ ಚಿತ್ರದ ಡಿಜಿಟಲ್ ಹಕ್ಕುಗಳು ಎಷ್ಟು ಕೋಟಿಗೆ ಮಾರಾಟವಾಗಿದೆ ಗೊತ್ತಾ..?

- Advertisement -

ತಮಿಳುನಾಡಿನ ಮಾಜಿ ಸಿಎಂ ದಿ.ಜಯಲಲಿತಾ ಜೀವನದ ಬಗ್ಗೆ ಸಿನಿಮಾ ಮಾಡಲು ಈಗಾಗಲೇ ಸೌತ್ ಮತ್ತು ನಾರ್ತ್‌ನಲ್ಲಿ ಭಾರೀ ಪೈಪೋಟಿ ನಡೆದಿದ್ದು, ಈಗ ಹಿಂದಿಯ ತಲೈವಿ ಸಿನಿಮಾ ಬಗ್ಗೆ ಬಿಸಿ ಬಿಸಿ ಸುದ್ದಿಯೊಂದು ಹೊರಬಿದ್ದಿದೆ.

ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ತಲೈವಿ ಚಿತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಜಯಲಲಿತಾ ಪಾತ್ರಕ್ಕೆ ಜೀವ ತುಂಬಿದ್ದು, ಈಗಾಗಲೇ ಚಿತ್ರದ ಟೀಸರ್ ಮತ್ತು ಫಸ್ಟ್‌ಲುಕ್ ರಿಲೀಸ್ ಆಗಿದೆ.

ಆದ್ರೆ ಇದೀಗ ಬಂದ ಸುದ್ದಿ ಏನಂದ್ರೆ ತಲೈವಿಯ ಡಿಜಿಟಲ್ ಹಕ್ಕುಗಳು 55 ಕೋಟಿಗೆ ಮಾರಾಟವಾಗಿದೆಯಂತೆ. ಈ ಚಿತ್ರದ ಹಿಂದಿ ಅವತರಣಿಕೆಯ ಹಕ್ಕುಗಳು ನೆಟ್‌ಫ್ಲಿಕ್ಸ್‌ಗೆ ಮಾರಾಟವಾದ್ರೆ, ತಮಿಳು ಅವತರಣಿಕೆಯ ಹಕ್ಕುಗಳು ಅಮೆಜಾನ್‌ ಪ್ರೈಮ್‌ಗೆ ಮಾರಾಟಗೊಂಡಿದೆ.

‘ತಲೈವಿ’ ಚಿತ್ರವನ್ನು ನಿರ್ದೇಶಕ ವಿಜಯ್‌ ಮತ್ತು ನಿರ್ಮಾಪಕರು ಥಿಯೇಟರ್‌ ಮೂಲಕವೇ ಬಿಡುಗಡೆಗೆ ನಿರ್ಧರಿಸಿದ್ದಾರೆ. ಜೂನ್‌ ತಿಂಗಳಲ್ಲಿ ರಿಲೀಸ್ ಆಗಬೇಕಿದ್ದ ಚಿತ್ರ ಕೊರೊನಾ ಭೀತಿ ಹಿನ್ನೆಲೆ ಮುಂದೂಡಲಾಗಿದೆ. ಇದೇ ವರ್ಷ ತಲೈವಿ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಜಯಲಲಿತಾರ ರಾಜಕೀಯ ಜೀವನದ ಬಗ್ಗೆ ಈ ಚಿತ್ರ ನಿರ್ಮಿಸಲಾಗಿದ್ದು, ಜಯಲಲಿತಾ ಪಾತ್ರಕ್ಕೆ ಕಂಗನಾ ಬಣ್ಣ ಹಚ್ಚಿದ್ರೆ, ಎಂ.ಜಿ.ರಾಮಚಂದ್ರನ್‌ ಅವರ ಪಾತ್ರಕ್ಕೆ ನಟ ಅರವಿಂದ್‌ ಸ್ವಾಮಿ ಜೀವ ತುಂಬಿದ್ದಾರೆ. ಕರುಣಾನಿಧಿ ಪಾತ್ರವನ್ನ ಪ್ರಕಾಶ್ ರೈ ನಿಭಾಯಿಸಿದರೆ, ಮಧು ಅವರು ಜಾನಕಿ ರಾಮಚಂದ್ರನ್ ಆಗಿ ನಟಿಸಿದ್ದಾರೆ.

https://youtu.be/ZfQ3GV-FChE

- Advertisement -

Latest Posts

Don't Miss